28.1 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಚ್ಚಿನ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

ಮಚ್ಚಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಗುರುವಾಯನಕೆರೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಡಂತ್ಯಾರು ಹಾಗೂ ಕುದ್ರಡ್ಕ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಮಚ್ಚಿನ ಇದರ ವತಿಯಿಂದ 40ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಶ್ವರರಾದ ಡಾ| ಎಂ ಹರ್ಷ ಸಂಪಿಗೆತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಧಾರ್ಮಿಕ ಉಪನ್ಯಾಸಕರಾಗಿ ಸಂಪನ್ಮೂಲ ವ್ಯಕ್ತಿಗಳಾದ ಧರಣೇಂದ್ರ ಜೈನ್ ಮಾತನಾಡಿ ನಮ್ಮ ಮಕ್ಕಳಿಗೆ ನಾವೇ ಧರ್ಮದ ಜಾಗೃತಿಯನ್ನು ಮೂಡಿಸಬೇಕು. ಸತ್ಯನಾರಾಯಣ ದೇವರ ನಾಮಸ್ಪರಣೆ ಮಾಡಿದರು ಪುಣ್ಯ ದೊರಕುವುದು ಎಂದರು.

ಸಭಾ ಅಧ್ಯಕ್ಷತೆಯನ್ನು ಸಾಮೂಹಿಕ ಸತ್ಯನಾರಾಯಣ ಪೂಜೆಯ ಅಧ್ಯಕ್ಷ ಹರ್ಷ ಬಳ್ಳಮಂಜ ವಹಿಸಿದರು. ಮುಖ್ಯ ಅತಿಥಿಗಳಾಗಿ ಪಾರೆಂಕಿ ಶ್ರೀ ಮಹಿಷಮರ್ದಿನಿ ಕ್ಷೇತ್ರದ ಆಡಳಿತ ಮೊಕ್ತೇಶರರಾದ ಪುನೀತ್, ಪ್ರಗತಿಪರ ಕೃಷಿಕ ಕೃಷ್ಣ ಪ್ರಭು ಮುದಲಡ್ಕ, ಹಿರಿಯರಾದ ಸದಾನಂದ ಪೂಜಾರಿ ಕುರುಡಂಗೆ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಹರೀಶ್, ವಲಯ ಅಧ್ಯಕ್ಷ ಜಯ ಪೂಜಾರಿ ಮುದ್ದಲಡ್ಕ, ಮೇಲ್ವಿಚಾರಕರಾದ ಕೇಶವ, ಪೂಜಾ ಅರ್ಚಕರಾದ ಅನಂತ ಕೃಷ್ಣ ಭಟ್, ಸೇವಾಪ್ರತಿನಿಧಿಗಳಾದ ಪರಮೇಶ್ವರ, ನಂದಿನಿ, ವಲಯ ಸೇವಾ ಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಮಚ್ಚಿನ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ಸದಸ್ಯ ಪಾಂಡಿಮೂಲ್ಯ ಕುತ್ತಿನ ಇವರನ್ನು ಸನ್ಮಾನಿಸಲಾಯಿತು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು.

ಸೇವಾ ಪ್ರತಿನಿಧಿಗಳಾದ ಪರಮೇಶ್ವರ್ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಪುಷ್ಪ ಧನ್ಯವಾದವಿತ್ತರು. ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ ಕೋಲಾಜೆ ಕಾರ್ಯಕ್ರಮ ನಿರೂಪಿಸಿದರು. ✍️ ವರದಿ ಹರ್ಷ ಬಳ್ಳಮಂಜ

Related posts

ತೆಂಕಕಾರಂದೂರು: ಕೃಷಿಕ ಕೇಶವ ಪೂಜಾರಿ ನಿಧನ

Suddi Udaya

ಬಸದಿಗಳಿಗೆ ಅನುದಾನ : ಸವಣಾಲು ಕ್ಷೇತ್ರದ ಬಸದಿಯ ಅಭಿವೃದ್ಧಿಗೆ ರೂ.9 ಲಕ್ಷ, ಪುದುವೆಟ್ಟು ಬಸದಿಗೆ ರೂ.50 ಲಕ್ಷ ಬಿಡುಗಡೆ

Suddi Udaya

ಧರ್ಮಸ್ಥಳ: ಭಾರಿ ಮಳೆಗೆ ಹೆಚ್ಚಾದ ನೇತ್ರಾವತಿ ನದಿ ನೀರಿನ ರಭಸ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಮಡಂತ್ಯಾರು ಬಿಲ್ಲವ ಸಂಘದ ಗೌರವಾಧ್ಯಕ್ಷ ಯೋಗೀಶ್ ಪೂಜಾರಿ ಕಡ್ತಿಲ ಹಾಗೂ ಸದಸ್ಯರು ಭೇಟಿ

Suddi Udaya

ಸುಲ್ಕೇರಿಮೊಗ್ರು: ಜಗದೀಶ ಪೂಜಾರಿ ನಿಧನ

Suddi Udaya

ಮೂಡುಕೋಡಿಯಲ್ಲಿ ಕಾರು ಮತ್ತು ಪಿಕಪ್ ನಡುವೆ ಡಿಕ್ಕಿ, ಗಾಯ

Suddi Udaya
error: Content is protected !!