31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

35 ವರ್ಷಗಳ ಸೇವೆಗೆ ಗೌರವದ ವಿದಾಯ-ಉಜಿರೆ ರಬ್ಬರ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿಗೆ ಆತ್ಮೀಯ ಬೀಳ್ಕೊಡುಗೆ

ಉಜಿರೆ: ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದಲ್ಲಿ ಸುದೀರ್ಘ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿಯವರಿಗೆ ಬೀಳ್ಕೊಡುಗೆ ಸಮಾರಂಭವು ಜೂ 30 ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆ ವಹಿಸಿ ಸುಧೀರ್ಘ ಸೇವೆಯ ಪಯಣದಲ್ಲಿ ರಾಜು ಶೆಟ್ಟಿಯವರ ಕಾರ್ಯವೈಖರಿಯನ್ನು ಕೊಂಡಾಡಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಮಾಜಿ ಸಚಿವ ಕೆ. ಗಂಗಾಧರ ಗೌಡ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಜು ಶೆಟ್ಟಿಯವರ ಸೇವೆಯನ್ನು ಸ್ಮರಿಸಿ ರಬ್ಬರ್ ಸೊಸೈಟಿಯ ಪರವಾಗಿ,ವಿವಿಧ ಸಂಘ-ಸಂಸ್ಥೆಗಳ ಹಾಗೂ ಸಿಬ್ಬಂದಿಗಳ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಿ, ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಅನಂತ್ ಭಟ್ ಮಚ್ಚಿಮಲೆ,ನಿರ್ದೇಶಕರಾದ ಜಯಶ್ರೀ ಡಿ.ಎಂ., ಆರ್. ಸುಭಾಷಿಣಿ, ಬೈರಪ್ಪ, ರಾಮ ನಾಯ್ಕ, ಸೋಮನಾಥ ಬಂಗೇರ, ಗ್ರೇಸಿಯನ್ ವೇಗಸ್, ಪದ್ಮ ಗೌಡ ಎಚ್., ಕೆ.ಜೆ. ಅಗಸ್ಟೀನ್, ತಿಮ್ಮಪ್ಪ ಗೌಡ, ಭರತ್ ಕುಮಾರ್, ಶಾಜಿ ಪಿ.ಎ., ಶಶಿಧರ ಡೋಂಗ್ರೆ, ಬಾಲಕೃಷ್ಣ ಗೌಡ,ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಪ್ರಸಾದ್ ಐ.ಎಸ್,ವ್ಯವಸ್ಥಾಪಕ ಪ್ರಕಾಶ್ ಗೌಡ ಸೇರಿದಂತೆ ಅನೇಕ ಗಣ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರಬ್ಬರ್ ಸೊಸೈಟಿಯ ಹಿರಿಯ ವ್ಯವಸ್ಥಾಪಕಿ ಪದ್ಮಾವತಿ ಜೆ. ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಉಪಾಧ್ಯಕ್ಷ ಅನಂತ್ ಭಟ್ ಮಚ್ಚಿಮಲೆ ಸ್ವಾಗತಿಸಿದರು. ಅಶ್ರಫ್ ಅಲಿ ಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.

Related posts

ಗುರುವಾಯನಕೆರೆಯಲ್ಲಿ ಎಂ.ಆರ್.ಪಿ.ಎಲ್ ಸಂಸ್ಥೆಯ ಸಹಕಾರದೊಂದಿಗೆ ಕಾರ್ಯಾರಂಭಗೊಂಡ ಶ್ರೀ ಶಾಂತೀಶ್ವರ ಫ್ಯೂಯಲ್ ನ ಉದ್ಘಾಟನೆ

Suddi Udaya

ಅಂಡಿಂಜೆ ಗ್ರಾ.ಪಂ ಮಾಜಿ ಅಧ್ಯಕ್ಷ ರಾಘವ ಪುತ್ರನ್ ನಿಧನ

Suddi Udaya

ಕೋಲ್ಕತಾ ವೈದ್ಯ ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ: ಬೆಳ್ತಂಗಡಿ ತಾಲೂಕಿನಲ್ಲಿ ತುರ್ತು ಸೇವೆ ಹೊರತುಪಡಿಸಿ ಹೊರರೋಗಿ ವಿಭಾಗ ಹಾಗೂ ಇತರ ವೈದ್ಯಕೀಯ ಸೇವೆಗಳು ಸ್ಥಗಿತ

Suddi Udaya

ಶಿಶಿಲ: ಕೊಳಂಬೆ ನಿವಾಸಿ ಅಕ್ಕು ನಿಧನ

Suddi Udaya

ನಾವೂರು ಬಡೆಕ್ಕಾವು ದೈವ ಕಂಬಳ ಮುಹೂರ್ತ

Suddi Udaya

ಬೆಳ್ತಂಗಡಿ ತಾಲೂಕು ಶಾಮಿಯಾನ ಮಾಲಕರ ಸಂಘ (ರಿ.) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ) ಇದರ ಜಂಟಿ ಆಶ್ರಯದಲ್ಲಿ ಗದ್ದೆ ಮನೆ ಪಿಲಿಚಾಮುಂಡಿ ಕಲ್ಲು, ಗುರುವಾಯನಕೆರೆ ಗದ್ದೆಯಲ್ಲಿ ಸಂಘದ ಮಾಲಕರು ಮತ್ತು ಕಾರ್ಮಿಕರಿಗೆ ನಡೆದ ಕೆಸರ್ ದ ಕೂಟ-2025

Suddi Udaya
error: Content is protected !!