23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರಾಷ್ಟ್ರಮಟ್ಟದ ಸಿ ಎ ಪರೀಕ್ಷೆ: ಪ್ರಥಮ ಯತ್ನದಲ್ಲೇ ಮಿಂಚಿದ ಎಕ್ಸೆಲ್ ನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಗಳು

ಬೆಳ್ತಂಗಡಿ: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಭಾರತದ ಅತ್ಯಂತ ಕಠಿಣ ಪರೀಕ್ಷೆಯೆನಿಸಿಕೊಂಡ ರಾಷ್ಟ್ರ ಮಟ್ಟದ ಸಿ ಎ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಪ್ರಥಮ ಬ್ಯಾಚ್ ನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.

ಶ್ರೀವತ್ಸ ಯು , ಸಮ್ಮೇದ್ ಬಾಹುಬಲಿ ಬಾಬಗೊಂಡ್, ಯಾನ ಪೊನ್ನಮ್ಮ ಇವರು ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಗಳಾಗಿದ್ದು, ತಮ್ಮ ಪ್ರಥಮ ಯತ್ನದಲ್ಲೇ ಸಿ ಎ ಇಂಟರ್ ಮೀಡಿಯೇಟ್ ಹಂತಕ್ಕೆ ಆಯ್ಕೆಯಾಗಿದ್ದಾರೆ.

ಪರೀಕ್ಷೆ ಬರೆದ ವಿದ್ಯಾರ್ಥಿಗಳ ಪೈಕಿ ರಾಷ್ಟ್ರ ಮಟ್ಟದಲ್ಲಿ ಕೇವಲ 20 ಶೇಕಡಾ ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾದ ಈ ಪರೀಕ್ಷೆಯಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಅತ್ಯಂತ ಅಭಿಮಾನದ ವಿಷಯ ಎಂದು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ. ಸಾಧಕರನ್ನು ಅಧ್ಯಕ್ಷರು, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್‌ನಲ್ಲಿ ಅಮೃತ ಮಹೋತ್ಸವ ಸಂಭ್ರಮ

Suddi Udaya

ಜಿಲ್ಲಾ ಮಟ್ಟದ ಐಕ್ಸ್ ವಾಲಿಬಾಲ್ ಸ್ಪರ್ಧೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಗುಂಡೂರಿ: ಕೊಯಂದೂರು ನಿವಾಸಿ ಗಿರಿಜ ನಿಧನ

Suddi Udaya

ದಿ| ಪದ್ಮನಾಭ ಆಚಾರ್ಯರ ಕುಟುಂಬಕ್ಕೆ ಸ್ನೇಹಿತರ ನೆರವು: ಶ್ರಮದಾನದ ಮೂಲಕ ಮನೆ ದುರಸ್ತಿ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಮುಂಡಾಜೆ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ದಯಾ ವಿಶೇಷ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya
error: Content is protected !!