July 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗೃಹಜ್ಯೋತಿ : ಮೆಸ್ಕಾಂ ಶಾಖಾ ಕಚೇರಿ ಹಾಗೂ ಉಪವಿಭಾಗದಲ್ಲೂ ದಾಖಲೀಕರಣಕ್ಕೆ ವ್ಯವಸ್ಥೆ

ಬೆಳ್ತಂಗಡಿ: ಗೃಹ ಜ್ಯೋತಿ ಫಲಾನುಭವಿಗಳ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಿ ಸಾಫ್ಟ್ವೇರ್‌ನಲ್ಲಿ ದಾಖಲಿಸಲು ಈಗಾಲೇ ಸರಕಾರ ಆದೇಶ ಮಾಡಿದೆ.


ಮೀಟರ್ ರೀಡರ್ ಮಧ್ಯಾಹ್ನ ನಂತರ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಫಲಾನುಭವಿಗಳ ಮನೆ, ಮನೆಗೆ ತೆರಳಿ ಸರ್ವೆ ಮಾಡಲು ಪವರ್‌ಮ್ಯಾನ್‌ಗಳಿಗೆ ಮಳೆಗಾಲದ ಕೆಲಸದ ಒತ್ತಡ ಇರುವುದರಿಂದ ಸರ್ವೇಯನ್ನು ನಿಗದಿತ ದಿನಾಂಕದ ಒಳಗೆ ಪೂರ್ಣ ಗೊಳಿಸಬೇಕಾಗಿರುವುದರಿಂದ, ಸಾಧ್ಯ ಇದ್ದವರು ಮೆಸ್ಕಾಂ ಶಾಖಾ ಕಚೇರಿ ಅಥವಾ ಉಪವಿಭಾಗ ಕಚೇರಿಗಳಲ್ಲಿ ದಾಖಲೆ ಇಟ್ಟುಕೊಂಡು ಬಂದಲ್ಲಿ ಕಚೇರಿಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಸಾಫ್ಟ್ವೇರ್‌ನಲ್ಲಿ ಎಂಟ್ರಿ ಮಾಡಲಾಗುವುದು ಎಂದು ಬೆಳ್ತಂಗಡಿ ಉಪವಿಭಾಗದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಈ ಸರ್ವೇಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಹಕಾರ ನೀಡಿದಲ್ಲಿ, ಪಂಚಾಯತ್ ವ್ಯಾಪ್ತಿಯಲ್ಲಿ ಕ್ಯಾಂಪ್ ಮಾಡಿ, ಬೇಕಾಗಿರುವ ಹೆಚ್ಚುವರಿ ಮಾಹಿತಿಯನ್ನು ಸಾಫ್ಟ್ವೇರ್‌ಗೆ ಎಂಟ್ರಿ ಮಾಡಲಾಗುವುದು. ಎಲ್ಲರಿಗೂ ಅನುಕೂಲವಾಗುವ ಸ್ಥಳದಲ್ಲಿ, ದಿನ ಹಾಗೂ ಸ್ಥಳ ತಿಳಿಸಿದರೆ, ನಮ್ಮ ಸಿಬ್ಬಂದಿಗಳು ಅಲ್ಲಿಯೇ ಬಂದು ಮಾಹಿತಿಯನ್ನು ಸಂಗ್ರಹಿಸುತ್ತಾರೆ ಎಂದು ತಿಳಿಸಿದ್ದಾರೆ.

ಬೇಕಾಗಿರುವ ದಾಖಲೆಗಳು ೧) ಗೃಹ ಜ್ಯೋತಿ ಅರ್ಜಿ ಯಾರ ಹೆಸರಿನಲ್ಲಿ ನೊಂದಣಿ ಮಾಡಿದ್ದೀರಿ, ಅವರ ಆಧಾರ್ ಕಾರ್ಡ್, ೨) ಗೃಹ ಜ್ಯೋತಿ ಅರ್ಜಿ ನೋಂದಾವನೆ ಮಾಡಿದಾಗ ನೀಡಿರುವ ಮೊಬೈಲ್ ಸಂಖ್ಯೆಯ ಮೊಬೈಲ್-ಅದೇ ನಂಬರಿಗೆ ಒಟಿಪಿ ಬರುತ್ತೆ ೩) ಅರ್ಜಿ ನೊಂದಣಿದಾರ ಬಿಪಿಎಲ್ ಹೊಂದಿದ್ರೆ, ಕಾರ್ಡ್ ಪ್ರತಿ. ಎಪಿಎಲ್ ಹೊಂದಿದ್ರೆ, ಪ್ರತಿ ಬೇಡ ೪) ಅರ್ಜಿ ನೋಂದಣಿದಾರ ಇನ್‌ಕಮ್ ಟೆಕ್ಸ್ ಪಾವತಿದಾರರು ಅಗಿದಲ್ಲಿ, ಪಾನ್ ಕಾರ್ಡ್ ಪ್ರತಿ, ಪಾವತಿ ದಾರರು ಅಲ್ಲದಿದ್ರೆ ಪ್ರತಿ ಬೇಡ.
೫) ಫಲಾನುಭವಿಯ ವರ್ಗ- ಪ.ಜಾತಿ, ಪಂಗಡ, ಒಬಿಸಿ, ಅಲ್ಪಸಂಖ್ಯಾತ, ಇತರ ತಿಳಿಸಿದಲ್ಲಿ ದಾಖಲಿಸಲಾಗುವುದು. ಆದ್ರೆ ಜಾತಿ ದಾಖಲಾತಿ ಕಡ್ಡಾಯ ಇಲ್ಲ. ೬) ಅರ್ಜಿ ನೋಂದಣಿದಾರರು ಕರ್ನಾಟಕದ ಮತದಾರರು ಅಗಿದಲ್ಲಿ, ವೋಟರ್ ಐಡಿ, ೭) ಅರ್ಜಿ ನೋಂದಣಿದಾರ ಪಾಸ್‌ಪೋರ್ಟ್ ಸೈಜ್ ಭಾವಚಿತ್ರ ಒಂದು,
೮) ಅರ್ಜಿ ನೋಂದಣಿದಾರರು ಬಾಡಿಗೆದಾರರು ಅಗಿದಲ್ಲಿ, ಬಾಡಿಗೆ ಕರಾರು ಪತ್ರ- ಒಂದು ವೇಳೆ ಬಾಡಿಗೆ ಕರಾರು ಪತ್ರ ಮಾಡಿಸಿಲ್ಲವಾದ್ರೆ, ನಾವೇ ಕರಾರು ಪತ್ರ ಕೊಡುತೇವೆ. ಮಾಲೀಕರ ಹಾಗೂ ಬಾಡಿಗೆದಾರರ ಸಹಿ ಮಾಡಿ ನೀಡಬೇಕು, ೯) ಅರ್ಜಿ ನೋಂದಣಿದಾರರು ಮರಣ ಹೊಂದಿದಲ್ಲಿ ಅಥವಾ ಅರ್ಜಿ ನೋಂದಾಹಿಸಿದ ಬಾಡಿಗೆದಾರರು ಮನೆ ಬಿಟ್ಟು ಬೇರೆ ಬಾಡಿಗೆದಾರರು ಪ್ರಸ್ತುತ ವಾಸಇದ್ದಲ್ಲಿ, ಪ್ರಸ್ತುತ ವಾಸ ಇರುವ ಯಾರಾದರೊಬ್ಬರ ಹೆಸರಿಗೆ ಅರ್ಜಿ ನೊಂದಾಯಿಸಿ, ಅವರ ಈ ಮೇಲೆ ತಿಳಿಸಿದ ಮಾಹಿತಿಯನ್ನು ಸಾಫ್ಟ್ವೇರ್‌ನಲ್ಲಿ ದಾಖಲು ಮಾಡಲಾಗುವುದು. ೧೦) ಅರ್ಜಿ ನೋಂದಣಿದಾರರ ವೃತ್ತಿ ವಿವರ ತಿಳಿಸುವುದು ೧೧) ಒಂದು ವೇಳೆ ಅರ್ಜಿ ನೋಂದಣಿದಾರರು ಈ ಮೇಲೆ ತಿಳಿಸಿದ ಮಾಹಿತಿಯನ್ನು ನೀಡಲು ಇಚ್ಚಿಸದೇ ಇದ್ದಲ್ಲಿ, ಗೃಹಜ್ಯೋತಿ ವೆರಿಫಿಕೇಶನ್ ಫಾರಂನ ಭಾಗ-೨ ರಲ್ಲಿ ಗೃಹ ಜ್ಯೋತಿ ಸೌಲಭ್ಯವನ್ನು ರದ್ದು ಪಡಿಸಲು ಅಭ್ಯಂತರ ಇಲ್ಲ ಎಂಬುದನ್ನು ದೃಢೀಕರಿಸಿ, ಸಹಿ ಮಾಡಿ ನೀಡಬೇಕು. ೧೨) ಗೃಹಜ್ಯೋತಿ ವಿವರ ದಾಖಲಿಸಿದ ಫಾರಂನಲ್ಲಿ ನೋಂದಣಿದಾರರು ಸಹಿ ಮಾಡಬೇಕು.

Related posts

ಮುಂಡಾಜೆ ಕೆ.ಎನ್. ಭಟ್ ಶಿರಾಡಿಪಾಲ್ ಅವರ ಶತಮಾನೋತ್ಸವದ ಪ್ರಯುಕ್ತ ಶತನಮನ ಶತಸನ್ಮಾನ ಸರಣಿ ಕಾರ್ಯಕ್ರಮ

Suddi Udaya

ನಾವರ ನಿವಾಸಿ ಸುಂದರಿ ನಿಧನ

Suddi Udaya

ಕಳೆಂಜ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕಕ್ಯಪದವು ಎಲ್‌.ಸಿ.ಆರ್ ಇಂಡಿಯನ್ ಪ.ಪೂ. ಕಾಲೇಜು ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ದಾಖಲು

Suddi Udaya

ಪಡಂಗಡಿ ಮತ್ತು ಗರ್ಡಾಡಿ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಮಚ್ಚಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಗ್ರೈಂಡರ್ ಕೊಡುಗೆ

Suddi Udaya
error: Content is protected !!