26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ವತಿಯಿಂದ ಸಾಧಕರಿಗೆ ಸನ್ಮಾನ

ಉಜಿರೆ: ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಉಜಿರೆ ರೀಜನಲ್ ಸಮಿತಿಯ ವತಿಯಿಂದ ರೀಜನಲ್ ವ್ಯಾಪ್ತಿಯಲ್ಲಿ 2026ರ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ನಡೆಸಿದ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸುವ ಕಾರ್ಯಕ್ರಮವು ಉಜಿರೆ ಹಳೆಪೇಟೆ ಮದರಸ ಸಭಾಂಗಣದಲ್ಲಿ ಎಸ್.ಎಮ್.ಎ ರೀಜನಲ್ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಸಮಡೈನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ಝೋನ್ ಅಧ್ಯಕ್ಷ ಸೈಯದ್ ಎಸ್.ಎಮ್ ಕೋಯ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಎಮ್.ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಬಕ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು, ಉಜಿರೆ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸುಪ್ರೀಂ, ಕೋಶಾಧಿಕಾರಿ ಮುಹಮ್ಮದ್ ಸಅದಿ, ಎಸ್.ಜೆ.ಎಮ್ ಉಜಿರೆ ರೇಂಜ್ ಅಧ್ಯಕ್ಷ ರಫೀಕ್ ಮದನಿ ಅಜಿಕುರಿ ಹಾಗೂ ಇತರ ಗಣ್ಯರು ಶುಭ ಹಾರೈಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಹಮೀದ್ ಮುಂಡಾಜೆ ಹಾಗೂ ಅಶ್ರಫ್ ಹಿಮಮಿ ಮೈಕೆ, ಝೋನಲ್ ನಾಯಕರಾದ ಮುಹಿಯುದ್ದೀನ್ ಕುಂಟಿನಿ, ಹನೀಫ್ ಮುಸ್ಲಿಯಾರ್ ನಿಡಿಗಲ್, ಯೂಸುಫ್ ಹಾಜಿ ಕುಂಟಿನಿ, ಎಂ ಎಚ್ ಅಬ್ದುಲ್ಲಾ ಮಲೆಬೆಟ್ಟು, ಹಮೀದ್ ಸಅದಿ ಕನ್ಯಾಡಿ, ರೇಂಜ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬಾಸಿತ್ ಹಿಮಮಿ ಸಖಾಫಿ, ಕೋಶಾಧಿಕಾರಿ ಫಾರೂಕ್ ಸಅದಿ ಕುಂಟಿನಿ ಸೇರಿದಂತೆ ಉಲಮಾ-ಉಮರಾ ಹಾಗೂ ರೀಜನಲ್ ವ್ಯಾಪ್ತಿಯ ಮೊಹಲ್ಲಾ ನಾಯಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಮಾರು 30 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ 7 ಮುಅಲ್ಲಿಮರನ್ನು ಸನ್ಮಾನಿಸಲಾಯಿತು.
ಆರಂಭದಲ್ಲಿ ರೀಜನಲ್ ಸಮಿತಿಯ ಕೋಶಾಧಿಕಾರಿ ಹಾಜಿ ಹೈದರ್ ಮದನಿ ಉಜಿರೆ ಪ್ರಾರ್ಥನೆ ನಡೆಸಿದರು. ರೀಜನಲ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹನೀಫಿ ಸ್ವಾಗತಿಸಿ, ರೇಂಜ್ ಕಾರ್ಯದರ್ಶಿ ನಾಸಿರ್ ಮುಈನಿ ಬೆಳಾಲ್ ವಂದಿಸಿದರು.

Related posts

ಬಂದಾರು ಗ್ರಾಮ -ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ: ಶ್ರೀ ದೇವಿ ಮಹಾತ್ಮೆ ಯಕ್ಷಗಾನ

Suddi Udaya

ಸ್ಫೋಟ ಪ್ರಕರಣ: ಧರ್ಮಸ್ಥಳ ಪೊಲೀಸರು ಮತ್ತು ಸೋಕೋ ತಂಡದಿಂದ ಸ್ಥಳ ಮಹಜರು

Suddi Udaya

ಅಳದಂಗಡಿ: ಜನಮಂಗಳ ಕಾರ್ಯಕ್ರದಡಿ ವಿಲ್ ಚೇರ್ ವಿತರಣೆ

Suddi Udaya

ನಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ

Suddi Udaya

ದಿಡುಪೆ: ಮನೆಯ ಹೊರ ಛಾವಣಿಯಿಂದ ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ

Suddi Udaya

ಜ.8 ರಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವರ ಬ್ರಹ್ಮಕಲಶೋತ್ಸವ ಸಂಭ್ರಮ: ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟಸಿ, ದೇಗುಲದ ಒಳಾಂಗಣಕ್ಕೆ ಇಂಟರ್ ಲಾಕ್ ಕೊಡುಗೆ: ಬರೋಡ ಉದ್ಯಮಿ ಶಶಿಧರ ಶೆಟ್ಟಿ

Suddi Udaya
error: Content is protected !!