26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾರಾವಿ: ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನಲ್ಲಿ ವನಮಹೋತ್ಸವ

ನಾರಾವಿ: ಸಂತ ಅಂತೋನಿ ಪದವಿ ಪೂರ್ವ ಕಾಲೇಜು, ನಾರವಿಯಲ್ಲಿ ಜು.13ರಂದು ವನಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸಾಲ್ದಾನ ವಹಿಸಿದ್ದರು. ಇಂಗ್ಲಿಷ್ ಉಪನ್ಯಾಸಕರಾದ ವಂ.ಸ್ವಾ. ರೂಪೇಶ್ ತಾವ್ರೋ ಅವರು ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸುತ್ತಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಗಿಡವನ್ನು ನೆಟ್ಟು, ಅದನ್ನು ಪೋಷಿಸಿ ಬೆಳೆಸುವ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ನಾರಾವಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಗೋಪಾಲಕೃಷ್ಣ ತುಳುಪುಳೆ ಹಾಗೂ ಸಂತ ಪಾವ್ಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ರಿಚಾರ್ಡ್ ಮೊರಾಸ್ ಉಪಸ್ಥಿತರಿದ್ದು, ಪರಿಸರ ಸಂರಕ್ಷಣೆ ಮತ್ತು ವೃಕ್ಷಾರೋಪಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಕಾಲೇಜು ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು, ಅವುಗಳನ್ನು ಸಂರಕ್ಷಿಸುವ ಸಂಕಲ್ಪ ಮಾಡಲಾಯಿತು.

ಕಾರ್ಯಕ್ರಮದ ಸಂಯೋಜಕಿ ರಾಜೇಶ್ವರಿ ಸ್ವಾಗತಿಸಿದರು. ಉಪನ್ಯಾಸಕಿ ಸುಚೇತಾ ವಂದಿಸಿದರು. ದ್ವಿತೀಯ ವಿಜ್ಞಾನ ವಿಭಾಗದ ಸಾನ್ವಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ತಿಮ್ಮಣಬೆಟ್ಟು ಸ.ಉ.ಪ್ರಾ.ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಹುಟ್ಟುಹಬ್ಬದಂದು ವಿಶೇಷ ಸೇವಾ ಕಾರ್ಯ : ಉದ್ಯಮಿ ತಿಮ್ಮಪ್ಪ ಶೆಟ್ಟಿರವರಿಂದ ಜ್ಞಾನಯೋಗಿ ಫೌಂಡೇಶನ್ ಸಾಂಗ್ಲಿ ಅಭಿವೃದ್ಧಿ ಕಾರ್ಯಗಳಿಗೆ ರೂ. 41 ಲಕ್ಷ ದೇಣಿಗೆ

Suddi Udaya

47 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ; ಪಿಯುಸಿ ಇತಿಹಾಸದಲ್ಲಿ ಆಳ್ವಾಸ್ ಸಾರ್ವತ್ರಿಕ ದಾಖಲೆ: ಡಾ. ಮೋಹನ್ ಆಳ್ವ

Suddi Udaya

ಬುಳೇರಿಮೊಗ್ರು ಸರಕಾರಿ ಪ್ರೌಢಶಾಲೆಗೆ ಸತತ 5ನೇ ಬಾರಿಗೆ ಶೇ.100 ಫಲಿತಾಂಶ

Suddi Udaya

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಗೆ ಹಳೆಯ ವಿದ್ಯಾರ್ಥಿಯ ಸಾಫ್ಟ್ ವೇರ್ ತಂಡದಿಂದ ಶಾಲೆಗೆ ಬಣ್ಣ

Suddi Udaya

ಕಡಿರುದ್ಯಾವರ: ಗಾಳಿ ಮಳೆಯಿಂದ ದನದ ಹಟ್ಟಿಗೆ ಮರ ಬಿದ್ದು ಸಂಪೂರ್ಣ ಹಾನಿ

Suddi Udaya
error: Content is protected !!