27.8 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ವತಿಯಿಂದ ಪಣಕಜೆಯಲ್ಲಿ ವನಮಹೋತ್ಸವ

ಪಣಕಜೆ : ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇ0ಬರ್ ವತಿಯಿಂದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯ, ಬೆಳ್ತಂಗಡಿ ಪ್ರೇರಣಾ ಸೌಹಾರ್ದ ಸಹಕಾರಿ ನಿಯಮಿತ ಮತ್ತು ಸ್ವಸಹಾಯ ಸಂಘ ಇದರ ಸಹಯೋಗದಲ್ಲಿ ಜು. 11ರಂದು ಪಣಕಜೆಯ ವಿಲ್ಸನ್ ಗೋನ್ಸಾಲ್ವಿಸ್ ಇವರ ಜಿಯೋಲುಕ್ ಮನೆಯ ವಿಲ್ಸ್ ಗಾರ್ಡನ್ ಫಾರ್ಮ್ ನಲ್ಲಿ ವನಮಹೋತ್ಸವ ಆಚರಿಸಲಾಯಿತು.

ಹೊಸ ಮಾದರಿಯ ಮೆಕೊಡೆಮಿಯ ಮತ್ತು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪ್ರೇರಣಾ ಸೌಹಾರ್ದ ಸಹಕಾರಿ ನಿಯಮಿತ ಮತ್ತು ಸ್ವಸಹಾಯ ಸಂಘಗಳ ಅಧ್ಯಕ್ಷ ಲ್ಯಾನ್ಸಿ ಪಿರೇರಾ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಅಧ್ಯಕ್ಷ ಜಾನ್ ಅರ್ವಿನ್ ಡಿಸೋಜ ವಹಿಸಿದ್ದರು. ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ಅಧ್ಯಕ್ಷ ರವಿ ಪೂಜಾರಿ ನಾರಾವಿ ಶುಭ ಹಾರೈಸಿದರು. ವಿಲ್ಸನ್ ಗೋನ್ಸಾಲಿಸ್ ನೂತನ ಗಿಡದ ಕೃಷಿ ಕುರಿತು ವಿವರ ನೀಡಿದರು.

ಮಂಜುಶ್ರೀ ಸೀನಿಯರ್ ಛೇಂಬರ್ ಕಾರ್ಯದರ್ಶಿ ಶರತ್ ಕುಮಾರ್ ಸ್ವಾಗತಿಸಿ, ಸದಸ್ಯ ಉಮೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಫೋಟೋಗ್ರಾಫರ್ಸ್ ಅಶೋಸಿಯೇಷನ್ ಮಾಜಿ ಅಧ್ಯಕ್ಷ ಉಮೇಶ್ ಮದ್ದಡ್ಕ ವಂದಿಸಿದರು.
ಕಾರ್ಯಕ್ರಮ ಸಂಯೋಜನೆ ಮಾಡಿದ ವಿಲ್ಸನ್ ಗೋಲ್ಸಾನಿಸ್ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮೂರು ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದು ಸಹಕರಿಸಿದರು.

Related posts

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಇಂಟರ್‌ಆಕ್ಟ್ ಕ್ಲಬ್ ಉದ್ಘಾಟನೆ

Suddi Udaya

ಉಜಿರೆಯಲ್ಲಿ ಯಕ್ಷಭಾರತಿಯಿಂದ ತಾಳಮದ್ದಳೆ

Suddi Udaya

ಆದಿವಾಸಿ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ರವರಿಗೆ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕಶೇಖರ್ ಲಾಯಿಲ ಅವರಿಂದಮನವಿ

Suddi Udaya

ನಾ’ವುಜಿರೆ ನಿಧನಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಸಭೆ

Suddi Udaya

ಉಜಿರೆ: ಎಸ್.ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya
error: Content is protected !!