23.3 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಿ.ಸಿ ರೋಡ್ ಯುವತಿಯ ಹತ್ಯೆ ಪ್ರಕರಣ: ಆರೋಪಿಯ ಫೋಟೋ ತಿರುಚಿ ಬಜರಂಗದಳದ ವಿರುದ್ಧ ಅಪಪ್ರಚಾರ; ಪ್ರಕರಣ ದಾಖಲು

ಬೆಳ್ತಂಗಡಿ: ಬಿಸಿರೋಡ್‌ನಲ್ಲಿ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಆರೋಪಿಯ ಭಾವಚಿತ್ರವನ್ನು ತಿರುಚಿ, ಅದಕ್ಕೆ ಕೇಸರಿ ಶಾಲು ಹಾಗೂ ಕುಂಕುಮವನ್ನು ಸೇರಿಸಿ, “ಭಜರಂಗ ದಳದ ಮುಖಂಡ ಚೇತನ” ಹಾಗೂ “ಭಜರಂಗ ದಳದ ಶಾಖೆಯಿಂದ ತರಬೇತಿ ಪಡೆದಿದ್ದ” ಎಂಬ ಸುಳ್ಳು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಕೋಮು ಸೌಹಾರ್ದತೆ ಕದಡುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿ ಬಂಟ್ವಾಳ ಪೊಲೀಸ್ ಠಾಣೆಗೆ ವಿಹಿಂಪ ನ ಉಪಾಧ್ಯಕ್ಷ ಕೇಶವ ರವರು ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಆರೋಪಿಯ ತಿರುಚಿದ ಭಾವಚಿತ್ರ ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ವಾಟ್ಸ್ ಆಪ್ ಗ್ರೂಪ್ ಗಳು ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ವ್ಯಾಪಕವಾಗಿ ಹಂಚಲಾಗಿದ್ದು, ಇದರಿಂದ ಸಮಾಜದಲ್ಲಿ ಕೋಮು ಉದ್ವಿಗ್ನತೆ ಮತ್ತು ಗಲಭೆಗಳು ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಪ್ರಕರಣ ದಾಖಲಾದ ಖಾತೆಗಳು: ಒಟ್ಟು 6 ಸಾಮಾಜಿಕ ಜಾಲತಾಣ ಖಾತೆಗಳು/ಗುಂಪುಗಳು ಆರೋಪಿಗಳ ಪಟ್ಟಿಯಲ್ಲಿ ಉಲ್ಲೇಖವಾಗಿದೆ .1: troll_master_Instagram account 2: Yuva Belthangady: WhatsApp group 3: Padmaraj Pari group: WhatsApp 4: Anwar group WhatsApp 5: Yuva Congress Belthangady WhatsApp 6: Facts and Justice WhatsApp ಗ್ರೂಪಿನ ಮೇಲೆ ಎಫ್ ಐಆರ್ ದಾಖಲಾಗಿದೆ.

ಈ ಸಂಬಂಧ ಕಾನೂನುಬಾಹಿರ ಕೃತ್ಯ ಎಸಗಿರುವವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ದೂರಿನ ಆಧಾರದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಹಿಳಾ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡು, ಕ್ಷೇತ್ರ‌ ಪುನರ್ ವಿಂಗಡನೆ ಮೂಲಕ ಅಧಿಕಾರ ಹಿಡಿಯಲು ಯತ್ನಿಸಿದ ಬಿಜೆಪಿಗೆ ಮುಖಭಂಗ- ರಕ್ಷಿತ್ ಶಿವರಾಂ

Suddi Udaya

ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಜಯರಾಜ ಜೈನ್, ಖಜಾಂಚಿಯಾಗಿ ನಾರಾಯಣ ಶೆಟ್ಟಿ, ರಾಜ್ಯ ಪರಿಷತ್‌ ಸದಸ್ಯರಾಗಿ ಪ್ರದೀಪ್ ಕುಮಾರ್ ಆಯ್ಕೆ

Suddi Udaya

ಮೇ 30: ಗುರುವಾಯನಕೆರೆಯಲ್ಲಿ ಶ್ರೀ ಗುರುದೇವ ಎಲೆಕ್ಟ್ರಿಕಲ್ ಸಂಸ್ಥೆಯ ನೂತನ “ಕೆ.ವಿ.ಪಿ.” ಕಾಂಪ್ಲೆಕ್ಸ್ ಶುಭಾರಂಭ

Suddi Udaya

ತೀರಾ ಹದಗೆಟ್ಟ ಕಳಿಯ ಗ್ರಾಮದ ಗೇರುಕಟ್ಟೆ ಪದಗೋಳಿ ಮಣ್ಣಿನ ರಸ್ತೆ: ರಸ್ತೆಯಲ್ಲಿ ಚೆಲ್ಲಿ ಹೋದ ಅನ್ನ ಭಾಗ್ಯದ ಅಕ್ಕಿ

Suddi Udaya

ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ರಾಜ್ಯಾದಾದ್ಯಂತ ಬಾಂಬೆ ಮಿಠಾಯಿ ನಿಷೇಧ: ಆರೋಗ್ಯ ಸಚಿವರಿಂದ ಅಧಿಕೃತ ಆದೇಶ – ಇನ್ಮುಂದೆ ಮಾರಾಟ ಮಾಡಿದ್ರೆ ದಂಡ, ಜೈಲು ಶಿಕ್ಷೆ

Suddi Udaya
error: Content is protected !!