September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆರಂಬೋಡಿ ಯುವ ಬಂಟರ ಸಂಘದಿಂದ ಸಮಾಜಸೇವಕ ಮನೋಜ್ ಶೆಟ್ಟಿ ಐತೇರಿಗೆ ಸನ್ಮಾನ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ಬಂಟರ ಸಂಘ ಆರಂಬೋಡಿ ಹಾಗೂ ಯುವ ಬಂಟರ ಸಂಘ ಆರಂಬೋಡಿ ಇವರ ಆಶ್ರಯದಲ್ಲಿ ಪಿಲಿಕಜೆ ಗದ್ದೆಯಲ್ಲಿ ಆಯೋಜಿಸಲಾದ ‘ಕೆಸರ್ ಡ್ ಒಂಜಿ ದಿನ’ ಕಾರ್ಯಕ್ರಮದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಸಮಾಜಸೇವಕ ಮನೋಜ್ ಶೆಟ್ಟಿ ಐತೇರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಪ್ರಮುಖರು ಮನೋಜ್ ಶೆಟ್ಟಿ ಐತೇರಿಯವರ ಸಮಾಜಮುಖಿ ಕಾರ್ಯಗಳು ಹಾಗೂ ಸಂಘಟನಾ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು. ಸಮಾಜದ ಅಭಿವೃದ್ಧಿಗೆ ಅವರ ಕೊಡುಗೆ ಮಾದರಿಯಾಗಿದ್ದು, ಮುಂದೆಯೂ ಇದೇ ರೀತಿಯ ಸೇವಾ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಂಟರ ಸಂಘ ಮತ್ತು ಯುವ ಬಂಟರ ಸಂಘದ ಪ್ರಮುಖರು, ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಬೆಳ್ತಂಗಡಿ ಬಿಜೆಪಿ ಕಚೇರಿಗೆ ನೂತನ ಸಂಸದ ಬ್ರಿಜೇಶ್ ಚೌಟ ಭೇಟಿ: ಮಂಡಲದ ವತಿಯಿಂದ ನೂತನ ಸಂಸದರಿಗೆ ಅಭಿನಂದನೆ

Suddi Udaya

ನಾಳೆಯಿಂದ ಬಂಡಾಜೆ ಜಲಪಾತ ವೀಕ್ಷಣೆಗೆ ಅವಕಾಶ

Suddi Udaya

ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ಅಧ್ಯಕ್ಷರಾಗಿ ಪ್ರಭಾಕರ ಹೆಗ್ಡೆ ಹಟ್ಟಾಜೆ, ಪ್ರ‌.ಕಾರ್ಯದರ್ಶಿಯಾಗಿ ಶುಭರಾಜ್ ಹೆಗ್ಡೆ ಮರೋಡಿ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ರೈತ ಸದಸ್ಯರಿಗೆ ಉಚಿತ ತರಕಾರಿ ಬೀಜ ವಿತರಣಾ ಕಾರ್ಯಕ್ರಮ

Suddi Udaya

ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕೆ

Suddi Udaya

ಜೋಡುಸ್ಥಾನ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಯುಗಂಧರ್, ಕಾರ್ಯದರ್ಶಿ ಚೇತನ್

Suddi Udaya
error: Content is protected !!