28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಹೆಚ್.ಎಸ್ ಆಯ್ಕೆ

ಬಳಂಜ: ಅತ್ಯಂತ ವಿಜೃಂಭಣೆ ಮತ್ತು ವೈವಿದ್ಯಮಯವಾಗಿ ನಡೆಯುವ ಬಳಂಜ ಸಾರ್ವಜನಿಕ‌ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ಜು 26ರಂದು ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲದಲ್ಲಿ ನಡೆಯಿತು.

39ನೇ ವರ್ಷದ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾಗಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ನಿಕಟಪೂರ್ವಾಧ್ಯಕ್ಷ, ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ ಕ್ಷೇತ್ತದ ಮುಂದಾಳು ಪ್ರವೀಣ್ ಕುಮಾರ್ ಹೆಚ್‌ಎಸ್ ಅವಿರೋಧವಾಗಿ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಯಾಗಿ ಯುವ ಸಂಘಟಕ ಗಣೇಶ್ ಸಂಭ್ರಮ, ಉಪಾಧ್ಯಕ್ಷರಾಗಿ ಪ್ರವೀಣ್ ಪೂಜಾರಿ ಲಾಂತ್ಯಾರು, ರಾಘವೇಂದ್ರ ಭಟ್ ಬಳಂಜ, ಯಶೋಧರ ಶೆಟ್ಟಿ ಬಳಂಜ, ಸುಕೇಶ್ ಹಾನಿಂಜ, ಸಂಪತ್ ಕೋಟ್ಯಾನ್ , ಕೋಶಾಧಿಕಾರಿಯಾಗಿ ಗುರುಪ್ರಸಾದ್ ಹೆಗ್ಡೆ ಆಯ್ಕೆಯಾದರು.

ಶ್ರೀ ಗಣೇಶೋತ್ಸವ ಯಶಸ್ವಿಗೆ ಇತರ ಸಮಿತಿಗಳನ್ನು ರಚಿಸಲಾಯಿತು. ಕಳೆದ ವರ್ಷದ ಅಧ್ಯಕ್ಷ ಗುರುಪ್ರಸಾದ್ ಹೆಗ್ಡೆ ಹಿಂದಿನ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಸಮಿತಿ ಮಾಜಿ‌ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ಯತೀಶ್ ದೇವಾಡಿಗ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು .

Related posts

ಕೊಯ್ಯೂರು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಭಜನೆ

Suddi Udaya

ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಿಚಾರಗೋಷ್ಠಿ: ಸ್ಟಾರ್ ಲೈನ್ ಆಂ.ಮಾ. ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ರೌಫ್ ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಮಚ್ಚಿನ: ಶರಾಬು ಕುಡಿಯಲು ಕರೆದ ವಿಚಾರಕ್ಕೆ ಹಲ್ಲೆ, ಬೆದರಿಕೆ: ಪುಂಜಾಲಕಟ್ಟೆ ಠಾಣೆಯಲ್ಲಿ ಪರಸ್ಪರ ದೂರು, ಪ್ರಕರಣ ದಾಖಲು

Suddi Udaya

ತಿಮ್ಮಣಬೆಟ್ಟು ಸ.ಉ. ಪ್ರಾ. ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ

Suddi Udaya

ಅಳದಂಗಡಿಯಲ್ಲಿ ಭೀಕರ ರಸ್ತೆ ಅಪಘಾತ, ಮುಖ್ಯ ರಸ್ತೆಯಲ್ಲಿ ಅಡ್ಡ ಬಂದ ಮಹಿಳೆ: ರಕ್ಷಿಸಲೆತ್ನಿಸಿದ ಟೆಂಪೋ ಟ್ರಾವೆಲ್ಲರ್ ಪಲ್ಟಿ,ದೊಡ್ಡ ದುರಂತ ತಪ್ಪಿಸಿದ ಡ್ರೈವರ್

Suddi Udaya

ಅಂಡಿಂಜೆ: ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ಕಿರು ಸೇತುವೆ, ಸಂಪರ್ಕ ಸ್ಥಗಿತ

Suddi Udaya
error: Content is protected !!