24.7 C
ಪುತ್ತೂರು, ಬೆಳ್ತಂಗಡಿ
September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಉಜಿರೆಯಲ್ಲಿ ರಾಷ್ಟ್ರಪತಿಗಳ ಹೆಸರಿನಲ್ಲಿ 6.20 ಎಕ್ರೆ ಜಮೀನು: ಸರ್ಕಲ್‌ನಿಂದ ಬೆಳಾಲು ಕ್ರಾಸ್ ತನಕ ವಿಸ್ತಾರ-ದಿಶಾಂಕ್ ಆ್ಯಪ್‌ನಲ್ಲಿ ಪತ್ತೆ

ಬೆಳ್ತಂಗಡಿ: ದ.ಕ. ಜಿಲ್ಲೆಯಲ್ಲೇ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಉಜಿರೆಯಲ್ಲಿ ರಸ್ತೆ, ಪಾರ್ಕಿಂಗ್ ಸಮಸ್ಯೆ ಬಗ್ಗೆ ಗೊಂದಲಗಳು, ಗ್ರಾಮ ಸಭೆ, ಇತರ ವೇದಿಕೆ ಹಾಗೂ ಅಧಿಕಾರಿಗಳ ಜೊತೆ ಹಲವು ಬಾರಿ ಚರ್ಚೆಗಳು ನಡೆದಿದ್ದರೂ ಸಹ ಇದುವರೆಗೂ ಇದಕ್ಕೆ ಯಾವುದೇ ಪರಿಹಾರ ದೊರೆಯದೆ ಗೊಂದಲದಲ್ಲೆ ವರ್ಷ ಕಳೆಯುತ್ತಿರುವ ಹೊತ್ತಿನಲ್ಲಿ ಉಜಿರೆಯಲ್ಲಿ ರಾಷ್ಟçಪತಿಗಳ ಹೆಸರಿನಲ್ಲಿ ಸುಮಾರು 6.20 ಎಕ್ರೆ ಜಮೀನು ಇದೆ ಎಂಬ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೌದು ಹಲವು ವರ್ಷಗಳಿಂದ ಉಜಿರೆಯ ರಸ್ತೆ, ಸರ್ಕಲ್ ಇನ್ನಿತರ ವಿಚಾರವಾಗಿ ಸಾಕಷ್ಟು ಗೊಂದಲಗಳು, ಪ್ರಶ್ನೆಗಳು ಉದ್ಬವ ಆಗುತ್ತಿದೆ ಹೊರತು ಇದುವರೆಗೂ ಇದಕ್ಕೆ ಪರಿಹಾರ ದೊರೆತ್ತಿಲ್ಲ. ಆದರೆ ಇದೀಗ ಸರಕಾರದಿಂದಲೇ ಅಧಿಕೃತವಾಗಿ ಬಿಡುಗಡೆಯಾಗಿರುವ ದಿಶಾಂಕ್ ಆ್ಯಪ್‌ನಲ್ಲಿ ಉಜಿರೆಯ ೨೦೮ ಸರ್ವೇ ನಂಬರ್ ನಲ್ಲಿ ೬.೨೦ ಎಕ್ರೆ ಜಮೀನು ರಾಷ್ಟçಪತಿ ಭಾರತ ಸರಕಾರ ಹೆಸರಿನಲ್ಲಿದೆ. ಇದು ಉಜಿರೆ ಸರ್ಕಲ್, ರಸ್ತೆ ಸೇರಿ ಎಚ್.ಪಿ. ಪೆಟ್ರೋಲ್ ಪಂಪ್ ನಿಂದ ಬೆಳಾಲು ಕ್ರಾಸ್ ತನಕ ಎಲ್ ಆಕೃತಿಯಲ್ಲಿದೆ. ಜೊತೆಗೆ ಅದೇ ಸರ್ವೇ ನಂಬರ್‌ನಲ್ಲಿ ಪಡುವೆಟ್ನಾಯರ ಮತ್ತು ಅವರ ಸುಪುತ್ರನ ಹೆಸರಿನಲ್ಲಿ ೬ಸೆಂಟ್ಸ್ ಮತ್ತು ೨ ಸೆಂಟ್ಸ್, ಹೇಮಂತ್ ಶೆಟ್ಟಿ ಎಂಬ ಹೆಸರಿನಲ್ಲಿ ೬ಸೆನ್ಸ್ ಹಾಗೂ ಸದಾಶಿವ ಶೆಟ್ಟಿ ಎಂಬ ಹೆಸರಿನಲ್ಲಿ ೬ ಸೆಂಟ್ಸ್ ಭೂಮಿ ಕಂಡು ಬಂದಿದೆ. ಎಸಿಸಿಇಐ ಮಾಜಿ ಅಧ್ಯಕ್ಷರಾದ ಇಂಜಿನಿಯರ್ ಜಗದೀಶ್ ಪ್ರಸಾದ್ ದಿಶಾಂಕ್ ಆ್ಯಪ್‌ನ್ನು ಪರಿಶೀಲನೆ ವೇಳೆ ಅದು ಬೆಳಕಿಗೆ ಬಂದಿದೆ.

ಏನಿದು ದಿಶಾಂಕ್ ಆ್ಯಪ್..?:– ಭೂ ದಾಖಲೆ ಪರಿಶೀಲನೆಗೆ ಸಂಬAಧ ಪಟ್ಟಂತಹ ಕರ್ನಾಟಕ ಸರಕಾರದಿಂದಲೇ ಅಧಿಕೃತವಾಗಿ ಬಿಡುಗಡೆಯಾದ `ದಿಶಾಂಕ್’ ಎಂಬ ಹೆಸರಿನ ಆ್ಯಪ್ ಇದಾಗಿದೆ. ಇದು ಕುಗ್ರಾಮ ಸೇರಿದಂತೆ ಎಲ್ಲಾ ಪ್ರದೇಶದ ಸರ್ವೇ ನಂಬರ್‌ಗಳನ್ನು ತೋರಿಸುತ್ತದೆ. ಜೊತೆಗೆ ಕೃಷಿ ಮತ್ತು ಕೃಷಿಯೇತರ ಪ್ರಾಪರ್ಟಿಯ ವಿವರವನ್ನೂ ಒದಗಿಸುತ್ತದೆ. ಈ ಆ್ಯಪ್‌ನಲ್ಲಿ ಸರ್ವೇ ನಂಬರ್ ಹಾಕಿದ ಪ್ರದೇಶದಲ್ಲಿ ನಿಂತು ಈ ಆ್ಯಪ್ ಬಳಸಿದರೆ ಆಗ ಖಾತಾ ಸಂಖ್ಯೆ, ರಸ್ತೆ, ಕೆರೆ ದಂಡೆ, ರಾಜಾ ಕಾಲುವೆ, ಸರಕಾರಿ ಜಮೀನು, ಗೋಮಾಳ ಜಮೀನು ಇದೆಯಾ ಎಂಬ ಸ್ಪಷ್ಟ ಮಾಹಿತಿ ನೀಡುತ್ತದೆ.

ಕಂದಾಯ ಇಲಾಖೆಯವರು ಸ್ಪಷ್ಟಪಡಿಸಲಿ
ಸರಕಾರದಿಂದಲೇ ಅಧಿಕೃತವಾಗಿ ಬಿಡುಗಡೆಗೊಂಡ ದಿಶಾಂಕ್ ಆ್ಯಪ್‌ನಲ್ಲಿ ಉಜಿರೆಯಲ್ಲಿ 208 ಸರ್ವೇ ನಂಬರ್ ನಲ್ಲಿ 6.20 ಎಕ್ರೆ ಜಮೀನು ರಾಷ್ಟ್ರಪತಿಗಳ ಹೆಸರಿನಲ್ಲಿ ಇರುವುದು ಕಂಡುಬAದಿದೆ. ಉಜಿರೆಯಲ್ಲಿ ೬.೨೦ಎಕ್ರೆ ಸರಕಾರಿ ಭೂಮಿ ಇರುವಾಗ ಸರ್ಕಲ್, ರಸ್ತೆ ಬಗ್ಗೆ ಯಾಕಿಷ್ಟು ಗೊಂದಲಗಳನ್ನು ಮಾಡುತ್ತಿದ್ದಾರೆ. ಆ್ಯಪ್‌ನಲ್ಲಿ ಇರುವ ಮಾಹಿತಿ ತಪ್ಪು ಎಂದಾದರೆ ಕಂದಾಯ ಇಲಾಖೆಯವರು ಸರ್ವೇ ಮಾಡಿ, ರಾಷ್ಟçಪತಿ ಭೂಮಿ ಅಲ್ಲ ತಮ್ಮದೆಂದು ಹೇಳಬೇಕು. ಈ ಜಾಗ ಸರಿಯಾಗಿ ಗುರುತಿಸಲ್ಪಟ್ಟು, ರಾಷ್ಟçಪತಿಗಳ ಹೆಸರಿನಲ್ಲಿ ಇರುವುದು ಹೌದೇ ಆದರೆ, ಅದನ್ನು ಸದ್ಬಳಕೆ ಮಾಡಿದ್ದಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಆಗಬಲ್ಲದು. ಸಾರ್ವಜನಿಕರಿಗೆ ಮತ್ತು ಪ್ರತಿಯೊಬ್ಬರಿಗೂ ಇದು ಒಳ್ಳೆಯ ಪರಿಹಾರ ಎನ್ನುವುದು ನನ್ನ ಭಾವನೆ.
-ಜಗದೀಶ್ ಪ್ರಸಾದ್, ಮಾಜಿ ಅಧ್ಯಕ್ಷರು, ಎಸಿಸಿಇಐ

Related posts

ವಾಲಿಬಾಲ್ ಪಂದ್ಯಾಟ: ಬಂದಾರು ಸ.ಉ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಅರಸಿನಮಕ್ಕಿ: ಮುದ್ದಿಗೆಯಲ್ಲಿ ಪ್ರೇಮಚಂದ್ರರವರ ವಿದ್ಯುತ್ ಪಂಪ್ ಶೆಡ್ ಕುಸಿತ : ಅಪಾರ ಹಾನಿ

Suddi Udaya

ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನಕ್ಕೆ ಬೆಳ್ತಂಗಡಿ ಬಿಷಪ್ ಲಾರೆನ್ಸ್ ಮುಕ್ಕುಯಿ ರವರಿಂದ ಸಂತಾಪ

Suddi Udaya

ಉಜಿರೆ ಕಾಶಿಬೆಟ್ಟು ಬಳಿ ಬೈಕ್ ಹಾಗೂ ಕಾರು ನಡುವೆ ಅಪಘಾತ: ಬೈಕ್ ಸವಾರರಿಗೆ ಗಂಭೀರ ಗಾಯ

Suddi Udaya

ಕಡಿರುದ್ಯಾವರ: ಕಾನರ್ಪ ಕುಮೇರು ನಿವಾಸಿ ಕೃಷಿಕ ಡೀಕಯ್ಯ ಗೌಡ ನಿಧನ

Suddi Udaya

ಬೆಳಾಲು ಶ್ರೀ ಧ.ಮಂ.ಪ್ರೌ. ಶಾಲೆಯಲ್ಲಿ ಕಾಷ್ಠಶಿಲ್ಪ ರಚನೆ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಗಾರ

Suddi Udaya
error: Content is protected !!