September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂಗಾಡಿ ಸ. ಉ. ಪ್ರಾ. ಶಾಲೆಯಲ್ಲಿ ಕಾರ್ಗಿಲ್ ದಿನಾಚರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ

ಬಂಗಾಡಿ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಂಗಾಡಿಯಲ್ಲಿ ಕಾರ್ಗಿಲ್ ದಿನಾಚರಣೆ ಹಾಗೂ ಇಕೋ ಕ್ಲಬ್ ಮೂಲಕ ಪರಿಸರ ಜಾಗೃತಿ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳ್ತಂಗಡಿ ಲಯನ್ಸ್ ಸಂಸ್ಥೆಯ ಗೌರವಾನ್ವಿತ ಸದಸ್ಯರೂ ನಿವೃತ್ತ ಯೋಧ ಲ| ಗೋಪಾಲಕೃಷ್ಣ ಕಾಂಚೋಡು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಕೋಶಾಧಿಕಾರಿ ಲಯನ್ ನಾಣ್ಯಪ್ಪ ನಾಯ್ಕ, ಲ. ಪ್ರಭಾಕರ ಗೌಡ ಬೊಲ್ಮಾ, ಲ. ಸುಂದರಿ ನಾಣ್ಯಪ್ಪ ನಾಯ್ಕ, ಲಿಯೋ ಕ್ಲಬ್ ನ ನಿರ್ದೇಶಕರಾದ ಲಯನ್ ರಮೇಶ್ ಪೈಲಾರ್, ಲಿಯೋ ಅಧ್ಯಕ್ಷೆ ಅಭಿಜ್ಞಾ ಬೋಲ್ಮಾ, ಕಾರ್ಯದರ್ಶಿ ಶಿವಾನಿ ಪಿ ಶೆಟ್ಟಿ, ಕೋಶಾಧಿಕಾರಿ ರೋಹನ್ ಪವಾರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಮಜಲು , ಶಾಲಾ ಮುಖ್ಯೋಪಾಧ್ಯಾಯರಾದ ಅಮಿತಾನಂದ ಹೆಗ್ಡೆ ಉಪಸ್ಥಿತರಿದ್ದರು.

ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಲ. ಗೋಪಾಲಕೃಷ್ಣ ಕಾಂಚೋಡು ಇವರು ಡ್ರ್ಯಾಗನ್ ಫ್ರೂಟ್ಸ್ ವಿತರಿಸಿದರು.
ಶಾಲಾ ಶಿಕ್ಷಕಿ ಶ್ರೀಮತಿ ಮಲ್ಲಿಕಾ ಕಾರ್ಯಕ್ರಮ ನಿರ್ವಹಿಸಿದರು.

Related posts

ಉಜಿರೆ ಶ್ರೀ ಧ.ಮಂ. ಅ. ಸೆಕೆಂಡರಿ ಶಾಲೆಯಲ್ಲಿ ಸಂಭ್ರಮದ ‘ಪ್ರಾರಂಭೋತ್ಸವ’

Suddi Udaya

ಕಾರಿಂಜ ಶ್ರೀ ವನಶಾಸ್ತಾರ ಶ್ರೀ ವೀರಭದ್ರ ಸ್ವಾಮಿ ದೇವರ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರ

Suddi Udaya

ನಯನಾಡು ಸರಕಾರಿ ಪ್ರೌಢಶಾಲೆಗೆ ಯಸ್ಕಾವ ಕಂಪೆನಿಯ ವತಿಯಿಂದ ಉಪಕರಣಗಳ ಹಸ್ತಾಂತರ

Suddi Udaya

ಜೂ.6: ಕಕ್ಕಿಂಜೆ ವಿದ್ಯುತ್ ನಿಲುಗಡೆ

Suddi Udaya

ಕನ್ಯಾಡಿ ಸರಕಾರಿ ಉ.ಹಿ.ಪ್ರಾ. ಶಾಲೆಯಲ್ಲಿ ಆಟಿಡೊಂಜಿ ದಿನ

Suddi Udaya
error: Content is protected !!