27.1 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆ.15: ಉಜಿರೆಯಲ್ಲಿ ಅಗ್ರಿಲೀಫ್ ಉದ್ಯೋಗ ಮೇಳ-2026

ನಿದ್ದೆ: ಪರಿಸರ ಸ್ನೇಹಿ ಸಂಸ್ಥೆ ‘ಆಗ್ರಿ ಲೀಫ್’ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳ -2026 ಆ. 15ರಂದು ಉಜಿರೆಯ ಓಷ್ಯನ್ ಪರ್ಲ್ ಹೊಟೇಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ಥಳೀಯವಾಗಿ ನೇಮಕಾತಿ, ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಎಂಬ ಧ್ಯೇಯವಾಕ್ಯದೊಂದಿಗೆ ಈ ಮೇಳ ನಡೆಯಲಿದೆ.

ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಅಂತರರಾಷ್ಟ್ರೀಯ ಮಟ್ಟದ ಪರಿಣಿತರಿಂದ ಸಂದರ್ಶನ ನಡೆಯಲಿದೆ.

ಉದ್ಯೋಗಕಾಂಕ್ಷಗಳಿಗೆ ಸಾಫ್ಟ್ವೇರ್ ಸರ್ವೀಸ್, ಇಂಜಿನಿಯರಿಂಗ್ ಮತ್ತು ಟೆಕ್ನಿಕಲ್ ಸರ್ವೀಸ್, ಉತ್ಪಾದನೆ, ಮಾರಾಟ ಮತ್ತು ಮಾರ್ಕೆಟಿಂಗ್, ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ, ಸಂಶೋಧನೆ ಮತ್ತು ಹೊಸ ಉತ್ಪನ್ನ ಅಭಿವೃದ್ಧಿ, ಸಪ್ಲೈ ಚೈನ್ ಮತ್ತು ಪ್ರೊಕ್ಯುರ್‌ಮೆಂಟ್, ಅಡ್ಮಿನ್, ಹೆಚ್.ಆರ್. ಮತ್ತು ಎಕ್ಸಿಕ್ಯೂಟಿವ್ ಸಪೋರ್ಟ್ ಮುಂತಾದ ಕ್ಷೇತ್ರಗಳಲ್ಲಿ ಅವಕಾಶವಿದೆ.

ಭಾಗವಹಿಸುವ ಪ್ರತಿಯೊಬ್ಬರಿಗೂ ಉಜಿರೆಯ ‘ದಿ ಓಷಿಯನ್ ಪರ್ಲ್ ಹೋಟೆಲ್’ ನಿಂದ 25% ರಿಯಾಯಿತಿ ಹೊಂದಿರುವ ಕುಟುಂಬದ ಆಹಾರ ಕೂಪನ್ ಸಿಗಲಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯವಾಗಿದೆ. ಇ-ಮೇಲ್: jobs@ agrileaf.in, ವೆಬ್‌ಸೈಟ್: agrileaf.in ಸಂಪರ್ಕ ಸಂಖ್ಯೆಗಳು: +91 9606023005 +91 9606092137

Related posts

ಬೆಳ್ತಂಗಡಿ: ತುಳುನಾಡ ಪೋರ್ಲು ಸೇವಾ ಟ್ರಸ್ಟ್ ನಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಪಟ್ರಮೆ ಗ್ರಾ.ಪಂ. ಹಾಗೂ ಸಂಜೀವಿನಿ ಒಕ್ಕೂಟದ ವತಿಯಿಂದ ಸ್ವಚ್ಛತಾ ಆಂದೋಲನ

Suddi Udaya

ಬೆಳ್ತಂಗಡಿ: ಜಲಪಾತದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ: ಮೂವರು ಕಾಸರಗೋಡು ಮೂಲದ ಯುವಕರನ್ನು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

Suddi Udaya

ಬದನಾಜೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವ: ಸುಜ್ಞಾನ ಸಭಾಂಗಣ ಲೋಕಾರ್ಪಣೆ

Suddi Udaya

ಓಡಿಲ್ನಾಳ : ಯುವವಾಹಿನಿ ಡೆನ್ನಾನ ಡೆನ್ನನ 2024 ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಗುವಿಗೆ ಲ್ಯಾಪ್ರೋಸ್ಕೋಪಿಕ್ ಅಪೆಂಡಿಸೈಟಿಸ್ ಯಶಸ್ವಿ ಶಸ್ತ್ರಚಿಕಿತ್ಸೆ

Suddi Udaya
error: Content is protected !!