23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಎಸ್‌ಡಿಟಿಯು ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ವಿವಿಧೆಡೆ 80ನೇ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ, ಆ.15: 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ವಿವಿಧೆಡೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಟಿ.ಬಿ. ಕ್ರಾಸ್, ಗುರುವಾಯನಕೆರೆ ಹಾಗೂ ವೇಣೂರು ವ್ಯಾಪ್ತಿಯಲ್ಲಿ ಎಸ್‌ಡಿಟಿಯು ಆಟೋ ಯೂನಿಯನ್ ವತಿಯಿಂದ ಧ್ವಜಾರೋಹಣ ನೆರವೇರಿಸಲಾಯಿತು. “ಸ್ವಾತಂತ್ರ್ಯ ಸಶಕ್ತವಾಗಲಿ, ಕಾರ್ಮಿಕನ ಕನಸು ನನಸಾಗಲಿ” ಎಂಬ ಸಂದೇಶದೊಂದಿಗೆ ನಡೆದ ಕಾರ್ಯಕ್ರಮಗಳಲ್ಲಿ ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನಬದ್ಧ ಹಕ್ಕುಗಳು ಹಾಗೂ ಸಮಾನತೆಯ ಮಹತ್ವವನ್ನು ಸಾರಲಾಯಿತು.

ಕಾರ್ಯಕ್ರಮಗಳಲ್ಲಿ ಎಸ್‌ಡಿಟಿಯು ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಹನೀಫ್ ಟಿ.ಎಸ್., ಜಿಲ್ಲಾ ಸದಸ್ಯ ಮಾರ್ಟಿನ್, ಎಸ್‌ಡಿಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ ಆರೀಫ್ ಉಜಿರೆ, ತಾಲೂಕು ಉಪಾಧ್ಯಕ್ಷ ಬಶೀರ್ ಅತ್ತಾಜೆ, ಕೋಶಾಧಿಕಾರಿ ಅಬ್ದುಲ್ಲಾ ಜಿ.ಕೆ., ಆಟೋ ಯೂನಿಯನ್ ಅಧ್ಯಕ್ಷ ಸಲೀಂ ಕುಂಟಿನಿ, ಹೈದರ್ ಜಿ.ಕೆ., ನವಾಝ್ ವೇಣೂರು, ಯೂನಿಯನ್ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Related posts

ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನಲ್ಲಿ 3 ದಿನ ನಡೆಯಲಿರುವ ಮೀನು ಮೇಳಕ್ಕೆ ಚಾಲನೆ: ವಿಶೇಷ ಆಕರ್ಷಣೆ ಮೀನಿಗೆ ಗಾಳ ಹಾಕುವ ಸ್ಪರ್ಧೆ

Suddi Udaya

‘ ಟೆಕ್ನೋತ್ಸವ- 2026’ ರಾಜ್ಯಮಟ್ಟದ ಐಟಿ ಉತ್ಸವ : ಉಜಿರೆಯ ಎಸ್.ಡಿ.ಎಂ ಕಾಲೇಜಿಗೆ ರನ್ನರ್ ಆಫ್ ಚಾಂಪಿಯನ್

Suddi Udaya

ಸಿರಿ ಸಂಸ್ಥೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಹಾಗೂ “ಸಿರಿ ಕ್ಲಬ್” ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಎಲ್ .ಸಿ.ಆರ್ ವಿದ್ಯಾ ಸಂಸ್ಥೆ : ಶಾಲಾ ಸಂಸತ್ತು ಚುನಾವಣೆ

Suddi Udaya

ಉಜಿರೆ: ‘ಎಕೊ-ವಿಶನ್ 2023’ ಅಂತರ್ ವಿಭಾಗೀಯ ಹಾಗೂ ಅಂತರ್ ತರಗತಿ ಸ್ಪರ್ಧೆ ಉದ್ಘಾಟನೆ

Suddi Udaya

ಎಸ್.ಡಿ.ಎಂ ಈಜುಕೊಳ : ಎನ್.ಡಿ.ಆರ್. ಎಫ್ ವತಿಯಿಂದ ವಿಶೇಷ ವಿಪತ್ತು ನಿರ್ವಹಣಾ ತರಬೇತಿ

Suddi Udaya
error: Content is protected !!