31.2 C
ಪುತ್ತೂರು, ಬೆಳ್ತಂಗಡಿ
September 30, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕರಾಟೆ ಕ್ರೀಡಾಕೂಟ: ಬೆಳ್ತಂಗಡಿ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ತಾಲೂಕು ಮಟ್ಟದ ಕರಾಟೆ ಕ್ರೀಡಾಕೂಟ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಂಗಾಡಿಯಲ್ಲಿ ಜರಗಿತ್ತು. ಪ್ರಾಥಮಿಕ ಶಾಲಾ ಬಾಲಕರ ವಿಭಾಗದ ಕರಾಟೆ ಕ್ರೀಡಾಕೂಟದಲ್ಲಿ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿ ಮೊಹಮ್ಮದ್ ಅಫ್ನಾನ್ ಪ್ರಥಮ ಸ್ಥಾನ, ಮೊಹಮ್ಮದ್ ಸಫ್ವಾನ್ ದ್ವಿತೀಯ ಸ್ಥಾನ ಮತ್ತು ಬಾಲಕಿರ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಭೂಮಿಕ ಎನ್ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕರಾದ ಹೇಮಲತಾ ಎಂ. ಆ‌ರ್. ಅವರ ನೇತೃತ್ವದಲ್ಲಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್‌ ಎನ್. ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಿಂದ ವಿದ್ಯಾರ್ಥಿಗಳು ಈ ಗಮನಾರ್ಹ ಸಾಧನೆ ಮಾಡಿದ್ದಾರೆ.

Related posts

ಅಂಡಿಂಜೆ: ಕಾರು ಡಿಕ್ಕಿ ಹೊಡೆದು 5 ವರ್ಷದ ಬಾಲಕ ಸಾವು

Suddi Udaya

ಡಿ.24-25: ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ನರ್ತನ ಸೇವೆ

Suddi Udaya

ಬೆಳ್ತಂಗಡಿ: ನೀರಿಕ್ಷಾ ಎನ್ ನಾವರ ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

Suddi Udaya

ಹೊಸಪಟ್ಣ: ಶ್ರೀ ಸತ್ಯನಾರಾಯಣ ರಂಗ ಮಂದಿರದ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ

Suddi Udaya

ಜೆಸಿಐ ಕೊಕ್ಕಡ ಕಪಿಲಾ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ರಿತೇಶ್ ಎಂ. ಸ್ಟ್ರೆಲ್ಲಾ, ಕಾರ್ಯದರ್ಶಿಯಾಗಿಜೋಯೆಲ್ ಪಿರೇರಾ ಆಯ್ಕೆ

Suddi Udaya

ಆ.2 : ಬಜಿರೆ ಮುದ್ದಾಡಿಯ ಮಂಗಿನಿಬೆಟ್ಟು ಗದ್ದೆಯಲ್ಲಿ ಆಟಿಡೊಂಜಿ ಕೆಸರ್‌ದ ಗೊಬ್ಬು 2026

Suddi Udaya
error: Content is protected !!