23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲೋಬೊ ಟಿವಿಎಸ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ: ನಿವೃತ್ತ ಯೋಧ ಜಾನ್ ಮೆನೆಜಸ್‌ಗೆ ಸನ್ಮಾನ

ಬೆಳ್ತಂಗಡಿ: ಬೆಳ್ತಂಗಡಿ ವರ್ತಕರ ಸಂಘ, ಸೀನಿಯರ್ ಚೇಂಬರ್ ಹಾಗೂ ಲೋಬೊ ಟಿವಿಎಸ್, ಪವರ್ ಒನ್ ಮತ್ತು ಸೋಜಾ ಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ಮಾಜಿ ಸೈನಿಕ ಜಾನ್ ಮೆನೆಜಸ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ದೇಶಸೇವೆಯಲ್ಲಿ ಸಲ್ಲಿಸಿದ ಸೇವೆಯನ್ನು ಗೌರವಿಸಿ ನಿವೃತ್ತ ಯೋಧ ಜಾನ್ ಮೆನೆಜಸ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೊ, ಸೀನಿಯರ್ ಚೇಂಬರ್ ಅಧ್ಯಕ್ಷ ಜಾನ್ ಅರ್ವಿನ್ ಡಿಸೋಜಾ, ವರ್ತಕರ ಸಂಘದ ಉಪಾಧ್ಯಕ್ಷ ಶಶಿಧರ್ ಪೈ, ಭಾರತ ಸೇವಾ ದಳದ ಸಂಚಾಲಕ ಅಲ್ಫೋನ್ಸ್ ಫ್ರಾಂಕೋ ಉಪಸ್ಥಿತರಿದ್ದರು.

ವರ್ತಕರ ಸಂಘದ ಕಾರ್ಯದರ್ಶಿ ಲ್ಯಾನ್ಸಿ ಪಿರೇರ ಕಾರ್ಯಕ್ರಮವನ್ನು ನಿರೂಪಿಸಿದರು. ವರ್ತಕರ ಸಂಘದ ಸದಸ್ಯರು, ಸೀನಿಯರ್ ಚೇಂಬರ್ ಸದಸ್ಯರು ಹಾಗೂ ಲೋಬೊ ಟಿವಿಎಸ್, ಪವರ್ ಆನ್ ಮತ್ತು ಸೋಜಾ ಎಲೆಕ್ಟ್ರಾನಿಕ್ಸ್‌ನ ಸಿಬ್ಬಂದಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹೆಚ್ಚಿಸಿದರು.

Related posts

ಅಕ್ರಮ ಪ್ರವೇಶ ಮಾಡಿ ಯುವಕನಿಗೆ ಹಲ್ಲೆ ಮಾಡಿ ಜೀವ ಬೆದರಿಕೆ

Suddi Udaya

ಇಂದಬೆಟ್ಟು: ವಿದ್ಯುತ್ ಕಾಮಗಾರಿ ವೇಳೆ ಅವಘಡ: ಕಾರ್ಮಿಕ ಅಕ್ಬರ್ ಅಲಿ ಮೃತ್ಯು

Suddi Udaya

ಬೆಳ್ತಂಗಡಿ ಸ.ಪ.ಪೂ. ಕಾಲೇಜಿನಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳಿಗೆ ದ್ವಿತೀಯ ಸೋಪಾನ ಹಾಗೂ ದ್ವಿತೀಯ ಚರಣ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya

ಜಾನಪದ ಗೀತೆ ಸ್ಪರ್ಧೆ : ಧರ್ಮಸ್ಥಳದ ಸಾನ್ವಿ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿಯವರ ಮನೆಗೆ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಭೇಟಿ

Suddi Udaya
error: Content is protected !!