25.2 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೊಕೆಡಾಮ – ಜಪಾನಿನ ವಿಶಿಷ್ಟ ಸಸ್ಯ ನೆಡುವ ಕಲೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲಲ್ಲಿ ಕೊಕೆಡಾಮ ಜಪಾನ್ ನ ವಿಶಿಷ್ಟ ಸಸ್ಯ ನೆಡುವ ಕಲೆ ಎಂಬ ಸೃಜನಾತ್ಮಕ ಚಟುವಟಿಕೆಯನ್ನು ಆಯೋಜಿಸಲಾಯಿತು. ವಿಜ್ಞಾನ , ಗಣಿತ , ಪರಿಸರ ಸಂಯೋಜನ ಸಂಘ , ಇಂಟರಾಕ್ಟ್ ಕ್ಲಬ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ. ಆರ್. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಶಾಲೆಯ ಕಲಾ ಶಿಕ್ಷಕರಾದ ಜಯರಾಮ್ ಅವರು ಕೊಕೆಡಾಮ ತಯಾರಿಸುವ ವಿಧಾನವನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಮಾದರಿಯ ಮೂಲಕ ಪ್ರದರ್ಶಿಸಿ, ಅದರ ವಿವಿಧ ಹಂತಗಳನ್ನು ವಿವರಿಸಿದರು.

ಶಿಕ್ಷಕಿ ಶ್ರೀಮತಿ ಪ್ರಮೀಳಾ ಎನ್. ಅವರು ಕೊಕೆಡಾಮದಲ್ಲಿ ಬಳಸಬಹುದಾದ ವಿವಿಧ ಬಣ್ಣ ಹಚ್ಚುವ ಹಾಗೂ ಅಲಂಕಾರಿಕ ವಿಧಾನಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾಹಿತಿಯನ್ನು ನೀಡಿದರು.

ಈ ಚಟುವಟಿಕೆಯಲ್ಲಿ ಶಿಕ್ಷಕರಾದ ಸೌಮ್ಯ ಪಿ., ನಯನ, ಕವನ, ಪ್ರಮೀಳಾ ಎನ್., ಮಂಜುನಾಥ್ ಹಾಗೂ ವಾಗ್ದೇವಿ ಅವರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ವಿದ್ಯಾರ್ಥಿಗಳಿಗೆ ಸಸ್ಯಗಳು, ಪ್ರಕೃತಿ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಪ್ರಾಯೋಗಿಕ ಜ್ಞಾನವನ್ನು ನೀಡಿದ ಈ ಚಟುವಟಿಕೆಯು ಅತ್ಯಂತ ಆಸಕ್ತಿದಾಯಕ ಹಾಗೂ ಶೈಕ್ಷಣಿಕವಾಗಿ ಉಪಯುಕ್ತವಾಗಿತ್ತು. ಜಪಾನಿನ ಸಾಂಪ್ರದಾಯಿಕ ಕೊಕೆಡಾಮ ಕಲೆಯನ್ನು ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕಲಾತ್ಮಕ ಅಭಿರುಚಿ ಹಾಗೂ ಪರಿಸರ ಪ್ರೇಮವನ್ನು ಬೆಳೆಸುವಲ್ಲಿ ಕಾರ್ಯಕ್ರಮವು ಯಶಸ್ವಿಯಾಯಿತು.

Related posts

ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಆಟೋಮೊಬೈಲ್ ಪ್ರಯೋಗಾಲಯದ ಉದ್ಘಾಟನೆ

Suddi Udaya

ಎನ್‌ಎಸ್‌ಎಸ್ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಶಿಬಿರಕ್ಕೆ ಟಿ. ಸುದರ್ಶನ್ ನಾಯಕ್ ಆಯ್ಕೆ

Suddi Udaya

ಧರ್ಮಸ್ಥಳ‌ ಭಜನಾ ಕಮ್ಮಟದ‌ ತರಬೇತುದಾರರಿಂದ ಬೆಂಗಳೂರಿನಲ್ಲಿ ಪ್ರಾರಂಭಗೊಂಡ ಶ್ರೀ ಬೈಲಾಂಜನೇಯ ಕುಣಿತ‌ ಭಜನಾ ಮಂಡಳಿ ಉದ್ಘಾಟನೆ

Suddi Udaya

ಉಜಿರೆ ಎಸ್‌ಡಿಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಸಂಭ್ರಮ ಶನಿವಾರ’ ಆಚರಣೆ

Suddi Udaya

ಕರ್ನೋಡಿ ಸ.ಉ.ಹಿ.ಪ್ರಾ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸಲು ಶಿಕ್ಷಣ ಇಲಾಖೆಯಿಂದ ಅನುಮತಿ ದೊರಕಿಸಿ ಕೊಡುವಂತೆ ಶಾಸಕರಿಗೆ ಮನವಿ

Suddi Udaya

ಎಂ.ಡಿ.ಎಂ.ಎ. ಮಾದಕ ವಸ್ತು ಮಾರಾಟ: ಆರೋಪಿ ಕೊಕ್ಕಡ ನಿವಾಸಿ ಯಹ್ಯಾ ಬಂಧನ

Suddi Udaya
error: Content is protected !!