25.2 C
ಪುತ್ತೂರು, ಬೆಳ್ತಂಗಡಿ
October 9, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಬೆಳ್ತಂಗಡಿ ಸೇವಾ ಸಾಧನ ವತಿಯಿಂದ ಮಾದಕ ವಸ್ತು ಜಾಗೃತಿ ಹಾಗೂ ಡ್ರ್ಯಾಗನ್ ಫ್ರೂಟ್ಸ್ ವಿತರಣೆ

ಬೆಳ್ತಂಗಡಿ : ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಬೆಳ್ತಂಗಡಿ ಸೇವಾ ಸಾಧನ 2026-27 ಇದರ ವತಿಯಿಂದ ಮಾದಕ ವಸ್ತು ಜಾಗೃತಿ ಹಾಗೂ ಲಯನ್ ಗೋಪಾಲಕೃಷ್ಣ ಕಾಂಚೋಡು ಇವರ ಪ್ರಾಯೋಜಕತ್ವದಲ್ಲಿ ಡ್ರ್ಯಾಗನ್ ಫ್ರೂಟ್ಸ್ ವಿತರಣೆ ಕಾರ್ಯಕ್ರಮವು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕನ್ಯಾಡಿ ll ಇಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ನಂದ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಘುರಾಮ ಶೆಟ್ಟಿ ಇವರು ಮಾದಕ ವಸ್ತು ಸೇವನೆಯಿಂದ ಆಗುವ ಪರಿಣಾಮಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ನಿವೃತ್ತ ಯೋಧರು ಪ್ರಗತಿಪರ ಕೃಷಿಕ ಲಯನ್ ಗೋಪಾಲಕೃಷ್ಣ ಕಾಂಚೋಡು ಇವರು ಸಾವಯವ ಕೃಷಿಯ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ನಿವೃತ್ತ ಯೋಧರಾದ ಅರುಣ್ ಶೆಟ್ಟಿ, ಲಯನ್ಸ್ ಕ್ಲಬ್ ಕೋಶಾಧಿಕಾರಿ ನಾಣ್ಯಪ್ಪ ನಾಯ್ಕ, ಲಯನ್ ಪ್ರಭಾಕರ ಗೌಡ ಬೊಲ್ಮಾ, ಲಯನ್ ರಾಜೇಂದ್ರ ಅಜ್ರಿ, ಲಯನ್ ಭುಜಬಲಿ ಧರ್ಮಸ್ಥಳ, ಲಿಯೋ ಕ್ಲಬ್ ಅಧ್ಯಕ್ಷರಾದ ಅಭಿಜ್ಞಾ ಬೊಲ್ಮಾ, ಲಿಯೋ ಕೋಶಾಧಿಕಾರಿ ರೋಹನ್ ಪವಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪುಷ್ಪಾ ಎನ್ ಸ್ವಾಗತಿಸಿ, ಶಾಲಾ ಶಿಕ್ಷಕಿ ತೇಜಸ್ವಿನಿ ವಂದನಾರ್ಪಣೆ ಗೈದರು. ಶಾಲಾ ಶಿಕ್ಷಕಿ ಶ್ರೀಮತಿ ವಿಜಯಾ ಕಾರ್ಯಕ್ರಮವನ್ನು ನಿರ್ವಹಿಸಿದರು.

Related posts

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ನಾವೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಅದ್ಭುತ ಸಾಧನೆ

Suddi Udaya

ಬೆಂಗಳೂರಿನ ದಾಸನಪುರದಲ್ಲಿ ಬೆಳ್ತಂಗಡಿ ಭಜನಾ ತರಬೇತುದಾರರಿಂದ ವಿಶೇಷ ಭಜನಾ ಕಾರ್ಯಕ್ರಮ

Suddi Udaya

ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ, ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ

Suddi Udaya

ಉಜಿರೆ : ಪ್ರಗತಿ ಮಹಿಳಾ ಮಂಡಲ ನೇತೃತ್ವದಲ್ಲಿ ಚಿಲಿಪಿಲಿ 2024 ಬೇಸಿಗೆ ಶಿಬಿರದ ಸಮಾರೋಪ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ತಿಳಿದಿರುವ ವ್ಯಕ್ತಿ ಠಾಣೆಗೆ ಶರಣಾಗಲು ಸಿದ್ದ: ಬೆಂಗಳೂರಿನ ವಕೀಲರನ್ನು ಸಂಪರ್ಕಿಸಿದ ಪೊಲೀಸರು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಯಧನದ ಮಂಜೂರಾತಿ ಪತ್ರ ವಿತರಣೆ

Suddi Udaya
error: Content is protected !!