25.5 C
ಪುತ್ತೂರು, ಬೆಳ್ತಂಗಡಿ
October 15, 2026
ಪ್ರಮುಖ ಸುದ್ದಿಬೆಳ್ತಂಗಡಿ

ವೇಣೂರು ಎಕ್ಸೆಲ್ ಶಾಲೆಯಲ್ಲಿ ವಲಯ ಮಟ್ಟದ ವಾಲಿಬಾಲ್ ಕ್ರೀಡಾಕೂಟ-ಕ್ರೀಡೆ ದೈಹಿಕ–ಮಾನಸಿಕ ಕ್ಷಮತೆ ಹೆಚ್ಚಿಸುತ್ತದೆ: ಸುಮಂತ್ ಕುಮಾರ್ ಜೈನ್

ವೇಣೂರು: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹಾಗೂ ಎಕ್ಸೆಲ್ ಟೆಕ್ನೋ ಸ್ಕೂಲ್ ವಿದ್ಯೋದಯ ಕ್ಯಾಂಪಸ್ ವೇಣೂರು ಇದರ ಸಹಯೋಗದಲ್ಲಿ ನಿಟ್ಟಡೆ, ಬಜಿರೆ ಮತ್ತು ಪಡ್ಡಂದಡ್ಕ ವಲಯ ಮಟ್ಟದ ಬಾಲಕ–ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ಆ.29ರಂದು ಎಕ್ಸೆಲ್ ಟೆಕ್ನೋ ಸ್ಕೂಲ್ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರಾಜಶ್ರೀ ಬಿ. ಉದ್ಘಾಟಿಸಿ‌ ಮಾತನಾಡಿದ ಅವರು, ಎಕ್ಸೆಲ್ ಸಂಸ್ಥೆಯು ಈ ಬಾರಿ ವಲಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಎರಡೆರಡು ಕ್ರೀಡಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಇಲಾಖೆಯ ವತಿಯಿಂದ ಸಂಸ್ಥೆಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವುದರ ಜತೆಗೆ ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡದ ಮನೋಭಾವ ಬೆಳೆಸುತ್ತದೆ. ಶಿಕ್ಷಣದೊಂದಿಗೆ ಕ್ರೀಡೆಗೂ ಸಮಾನ ಪ್ರೋತ್ಸಾಹ ನೀಡಬೇಕು ಎಂದರು.

ವಲಯ ಸಂಘಟನಾ ಅಧಿಕಾರಿ ಆರತಿ ಪ್ರಸ್ತಾವನೆಗೈದರು. ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಮುಖ್ಯ ಶಿಕ್ಷಕ ಶಾಂತಿರಾಜ್ ಜೈನ್ ಸ್ವಾಗತಿಸಿದರು. ಬೆಳ್ತಂಗಡಿ ತಾಲೂಕು ಇ.ಆರ್.ಟಿ.ಇ. ಜಗದೀಶ್ ಬಿ., ನಾರಾವಿ ವಲಯ ಸಂಘಟನಾ ಅಧಿಕಾರಿ ಲೋಕಯ್ಯ ಎನ್., ಅಳದಂಗಡಿಯ ಸೈಂಟ್ ಪೀಟರ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ರಾಜ್ಯ ಮಟ್ಟದ ವಾಲಿಬಾಲ್ ತೀರ್ಪುಗಾರ ಕೆವನ್ ಉಪಸ್ಥಿತರಿದ್ದರು.

ಕನ್ನಡ ಶಿಕ್ಷಕಿ ಅಕ್ಷತ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಶಿಕ್ಷಕ ಅಶೋಕ್ ಧನ್ಯವಾದವಿತ್ತರು. ವಿದ್ಯಾರ್ಥಿಗಳಾದ ಸಾನ್ವಿ, ಪ್ರಣಮ್ಯ ಎಂ.ಎಸ್., ಹರ್ಷಿತಾ, ಅನ್ವಿತಾ ಹಾಗೂ ರಶ್ಮಿತಾ ದೇವಾಡಿಗ ಪ್ರಾರ್ಥಿಸಿದರು.

ಬಾಲಕಿಯರ ವಿಭಾಗದಲ್ಲಿ ಕಾಶಿಪಟ್ನ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ, ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಲಕರ ವಿಭಾಗದಲ್ಲಿ ನವಚೇತನ ಆಂಗ್ಲ ಮಾಧ್ಯಮ ಶಾಲೆ ವೇಣೂರು ಪ್ರಥಮ ಹಾಗೂ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ದ್ವಿತೀಯ ಸ್ಥಾನ ಗಳಿಸಿತು.

ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಶಿಕ್ಷಣ ಸಂಯೋಜಕಿ ಕಾವ್ಯಶ್ರೀ ಎನ್. ವಿಜೇತರನ್ನು ಅಭಿನಂದಿಸಿದರು. ಸಮಾಜ ವಿಜ್ಞಾನ ಶಿಕ್ಷಕ ದಾಮೋದರ್ ಸಮಗ್ರ ನಿರ್ವಹಣೆ ಮಾಡಿದರು.ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ ಸಹಕರಿಸಿದರು.

Related posts

ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಹಿಂಬದಿ ಕೊಳಕು ನೀರು, ಗಬ್ಬು ವಾಸನೆ, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ

Suddi Udaya

ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ್ ಪೂಜಾರಿಯವರಿಂದ ಹರೀಶ್ ಕೆ ಪೂಜಾರಿಯವರಿಗೆ ಅಭಿನಂದನೆ

Suddi Udaya

ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಗುರುವಾಯನಕೆರೆ ಶಾಖೆಯ ವ್ಯವಸ್ಥಾಪಕ ಪ್ರಶಾಂತ್ ಎಚ್ ಆಚಾರ್ಯರಿಗೆ ಬೀಳ್ಕೊಡುಗೆ

Suddi Udaya

ಉರುವಾಲು ಗ್ರಾಮದ ಬನಾರಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ

Suddi Udaya

ಬಿ.ಜೆ.ಪಿ ಕಾರ್ಯದರ್ಶಿ ಹುದ್ದೆಯಿಂದ ಸೆಲೆಸ್ಟಿನ್ ಡಿಸೋಜ ವಜಾ

Suddi Udaya

ಇಂದಬೆಟ್ಟುನಲ್ಲಿ ಮೆಸ್ಕಾಂ 33ಕೆವಿ ಸಬ್‌ಸ್ಟೇಷನ್ ನಿರ್ಮಾಣಕ್ಕೆ 66 ಸೆಂಟ್ಸ್ ಜಾಗ ಮಂಜೂರು

Suddi Udaya
error: Content is protected !!