26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕನ್ನಾಜೆ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೋತ್ಸವ – ಉದ್ಯಮಿ ಶಶಿಧರ್ ಶೆಟ್ಟಿ ಅವರ ಮಾತೃಶ್ರೀ ಕಾಶಿ ಶೆಟ್ಟಿಯವರ ಸ್ಮರಣಾರ್ಥ ಮಹಿಳೆಯರಿಗೆ ವಸ್ತ್ರದಾನ

ಬೆಳ್ತಂಗಡಿ: ಕನ್ನಾಜೆ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಮಹೋತ್ಸವವು ಆ. 28ರಂದು ಭಜನಾ ಮಂಡಳಿ ಅಧ್ಯಕ್ಷ ಜಗದೀಶ್ ಕನ್ನಾಜೆ ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ವೈಭವದಿಂದ ಜರುಗಿತು.

ಪೂಜಾ ಮಹೋತ್ಸವದ ವಿಶೇಷ ಅಂಗವಾಗಿ ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ ಅವರ ಮಾತೃಶ್ರೀ ಶ್ರೀಮತಿ ಕಾಶಿ ಶೆಟ್ಟಿ ಅವರ ದಿವ್ಯ ಸ್ಮರಣಾರ್ಥವಾಗಿ ಆಗಮಿಸಿದ ಮಹಿಳೆಯರಿಗೆ ಜಗದೀಶ್ ಕನ್ನಾಜೆ ಇವರ ಸಹಕಾರದೊಂದಿಗೆ ವಸ್ತ್ರದಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಗದೀಶ್ ಕನ್ನಾಜೆ ಮಾತನಾಡಿ, “ಸಹೃದಯಿ ಬಂಧು, ಶಶಿಧರ್ ಶೆಟ್ಟಿ ಬರೋಡಾ ಅವರ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಭಗವಂತನು ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸಿದರು.

ಬಳಿಕ, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿಯವರು ಮಾತನಾಡಿ, ವರಮಹಾಲಕ್ಷ್ಮೀ ಹಬ್ಬವು ನಾಡಿನೆಲ್ಲೆಡೆ ಸಂಭ್ರಮವನ್ನು ತಂದಿದೆ. ಈ ಹಬ್ಬದ ಮೂಲಕ ದೇಶ ಸೇವೆಯ ಪ್ರತಿಜ್ಞೆ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಶ್ರೀಮತಿ ಕಾಶಿ ಶೆಟ್ಟಿ ಅವರ ಸ್ಮರಣೆಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದು, ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

Related posts

ವೇಣೂರು ಕಾಲೇಜು ವಿದ್ಯಾರ್ಥಿನಿ ಅಸೌಖ್ಯದಿಂದ ನಿಧನ: ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ

Suddi Udaya

ಸವಣಾಲು : ನೊಣಯ್ಯ ನಾಯ್ಕರವರ ಮನೆ ಹಿಂಭಾಗ ಗುಡ್ಡ ಕುಸಿತ: ಗ್ರಾ.ಪಂ. ನಿಂದ ಅಪಾಯಕಾರಿ ಮರ ತೆರವು

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಂಡೋವೆನಸ್ ಲೇಸರ್ ಯಶಸ್ವಿ ಶಸ್ತ್ರಚಿಕಿತ್ಸೆ

Suddi Udaya

ಹಿರಿಯ ಪತ್ರಕರ್ತ ಪ್ರೊ. ನಾ ’ವುಜಿರೆ’ಯವರಿಗೆ ಬೆಳ್ತಂಗಡಿ ಪತ್ರಕರ್ತರ ಸಂಘದಿಂದ ನುಡಿ ನಮನ

Suddi Udaya

ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು: ಮಂಗಳೂರಿನ ಕೇಂದ್ರಕ್ಕೆ ರೂ. 1.49 ಕೋಟಿ ಅನುದಾನ ಮೀಸಲು: ಸಂಸದ ಕ್ಯಾ. ಚೌಟ

Suddi Udaya

ತಣ್ಣೀರುಪಂತ ಶಾರದಾಂಭ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!