25.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೆ.3: ಬೈಂದೂರಿನಲ್ಲಿ ಶ್ರೀರಾಮ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 18ನೇ ವರ್ಧಂತ್ಯುತ್ಸವ

ಬೆಳ್ತಂಗಡಿ: ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿ ಹೊಂದಿರುವ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ಕೃತಿ ಸ್ವಾಮೀಜಿಯವರ ಪಟ್ಟಾಭಿಷೇಕದ 18ನೇ ವರ್ಧಂತಿ ಸೆ.3ರಂದು ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯಲಿದೆ.

ಕ್ಷೇತ್ರದ ನಿರ್ಮಾತೃ ಜಗದ್ಗುರು ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ ಪೀಠಾರೋಹಣ ಮಾಡಿದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ 13ನೇ ವಯಸ್ಸಿನಲ್ಲಿಯೇ ತನ್ನ ತಂದೆಯವರಿಂದಲೇ ಓಂಕಾರ ದೀಕ್ಷೆ, ಯೋಗ ದೀಕ್ಷೆ ಪಡೆದು ಸುಮಾರು 25 ವರ್ಷಗಳಿಂದ ನಿರಂತರ ಹಿಮಾಲಯ ಪವಿತ್ರ ತಪೋಭೂಮಿಗಳಾದ ಮಾನಸ ಸರೋವರ, ಕೈಲಾಸ ಯಾತ್ರೆ, ನೇಪಾಳದ ಪಶುಪತಿನಾಥ, ಚಾರ್‌ಧಾಮಗಳಾದ ಗಂಗೋತ್ರಿ, ಯಮುನೇತ್ರಿ, ಬದರಿ, ಕೇದಾರಗಳ ಪರ್ಯಟನ, ಅಮರನಾಥ, ವೈಷ್ಟೋದೇವಿ, ಕಾಶ್ಮೀರದ ಶಂಕರಾಚಾರ್ಯ ಜ್ಞಾನಪೀಠ ಇನ್ನೂ ಅನೇಕ ಕಡೆ ಮತ್ತು ಹರಿದ್ವಾರ, ಇಲಹಾಬಾದ್, ಉಜ್ಜಯಿನಿ, ನಾಸಿಕ್ ನಲ್ಲಾಗುವ ಎಲ್ಲಾ ಕುಂಭಮೇಳಗಳಲ್ಲಿ ಭಾಗವಹಿಸಿ ಮಹಾನ್ ತಪಸ್ವಿ, ಪುಣ್ಯ ಪುರುಷರ ಸಂಪರ್ಕದಲ್ಲಿರುವವರು. ಭಾರತಾದ್ಯಂತ 9 ಕಡೆ ಶಾಖಾ ಮಠಗಳನ್ನು ಮಾಡಬೇಕೆಂಬ ಶ್ರೀ ಆತ್ಮಾನಂದ ಸರಸ್ಕೃತಿ ಸ್ವಾಮೀಜಿಯವರ ಸಂಕಲ್ಪದಂತೆ ಶ್ರೀಗಳು ಉಡುಪಿ ಬಾರ್ಕೂರಿನ ಬಿಲ್ಲಾಡಿಯಲ್ಲಿ 15 ಎಕರೆ ಸ್ಥಳದಲ್ಲಿ ಒಂದು ಸುಸಜ್ಜಿತವಾದ ಐಟಿಐ ನಿರ್ಮಾಣವಾಗಿ ಇಲ್ಲಿ ವಸತಿ ಸೌಲಭ್ಯದೊಂದಿಗೆ ಮಕ್ಕಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ.

ಭಟ್ಕಳದಲ್ಲಿ 800 ವರ್ಷದ ಹಿಂದೆ ರಾಮಾನುಚಾಚಾರ್ಯರಿಂದ ಸ್ಥಾಪನೆಯಾದ ಗುರುಮಠ ಇಂದು ಪೀಠದ ವತಿಯಿಂದ ಕೆಲಸ ನಿರ್ವಹಿಸುತ್ತಿದೆ. ಗುರು ಪರಂಪರೆಯನ್ನು ದಕ್ಷಿಣದಿಂದ ಉತ್ತರಕ್ಕೆ ವಿಸ್ತರಿಸಿ ಹಿಮಾಲಯದ ದೇವಭೂಮಿ ಹರಿದ್ವಾರದಲ್ಲಿ ಮಠ ನಿರ್ಮಾಣ ಮಾಡಿ ಲೋಕಾರ್ಪಣೆಗೊಳಿಸಿ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಮುದ್ರಿಸಲ್ಪಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಕರಿಕ್ಕಲ್ ಸಮುದ್ರ ತಟದಲ್ಲಿ ಒಂದು ಧ್ಯಾನ ಮಂದಿರ ಲೋಕಾರ್ಪಣೆಗೊಂಡಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಒಂದು ಎಕ್ರೆ ಜಾಗ ಖರೀದಿ ಮಾಡಿ ಅಲ್ಲಿ ಸುಮಾರು ರೂ. 20 ಕೋಟಿ ವೆಚ್ಚದ ಶಾಖಾ ಮಠದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಹೊನ್ನಾವರ, ಕುಮಟಾದಲ್ಲಿ ಶಾಖಾ ಮಠ ನಿರ್ಮಾಣದ ಕೆಲಸಗಳು ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ತಿರುಪತಿ, ಶಬರಿಮಲೆ, ಶಿವಮೊಗ್ಗ, ದೆಹಲಿಯಲ್ಲಿ ಶಾಖಾಮಠ ಪ್ರಾರಂಭಿಸುವರೇ ಸಿದ್ಧತೆಗಳು ನಡೆಯುತ್ತಿದೆ. ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವದ 2018ರಲ್ಲಿ ಶ್ರೀ ರಾಮ ಕ್ಷೇತ್ರದಲ್ಲಿ ರಾಷ್ಟ್ರೀಯ ಧರ್ಮ ಸಂಸದ್ ನೆರವೇರಿಸಿ ಧರ್ಮ ಸಾಮ್ರಾಜ್ಯವಾಗಿ ಪರಿವರ್ತನೆ ಮಾಡಿದರು. ಈ ಸಂದರ್ಭದಲ್ಲಿ ದೇಶ ವಿವಿಧ ಭಾಗಗಳಿಂದ ಸಾವಿರಾರು ಸಂತರು, ಗಣ್ಯರು ಭಾಗವಹಿಸಿದ್ದರು. ಈ ವರ್ಷ ಶ್ರೀಗಳ 7ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆ ಗುರುಪೌರ್ಣಮಿಯ ಜುಲೈ 29ರಿಂದ ಪ್ರಾರಂಭಗೊಂಡಿದ್ದು ಸೆ.14ರವರೆಗೆ ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಷ್ಯ ವಿನಾಯಕ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ, ಭಾಗವತ ಸಪ್ತಾಹ, ಭಜನೆ ಮೊದಲಾದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.
ಪ್ರತಿದಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ.

ಸೆ.3ರಂದು ನಡೆಯುವ ಪಟ್ಟಾಭಿಷೇಕದ 18ನೇ ವರ್ಧಂತ್ಯುತ್ಸವ ಸಮಾರಂಭದಲ್ಲಿ ರಾಜ್ಯದ ವಿವಿಧ ಸಚಿವರು, ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಂಸದರು, ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸೆ. 14ರಂದು ಚಾತುರ್ಮಾಸ್ಯ ವ್ರತಾಚರಣೆ ಮುಕ್ತಾಯಗೊಳ್ಳಲಿದ್ದು ಆ ದಿನ ಬೆಳಿಗ್ಗೆ ಶ್ರೀಗಳ ಸೀಮೋಲ್ಲಂಘನ ಕಾರ್ಯಕ್ರಮ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ತಟದಲ್ಲಿರುವ ಸುಮನಾವತಿ-ನದಿಯಲಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಸಮಾಪನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಮಳೆ ಹಿನ್ನೆಲೆ: ನಾಳೆ(ಆ.3) ಮಂಗಳೂರು ಉಪ ವಿಭಾಗದ ತಾಲೂಕು – ಪುತ್ತೂರು ಉಪ ವಿಭಾಗದ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಪಟ್ರಮೆ: ಬರಮೇಲು ನಿವಾಸಿ ಪುಟ್ಟಣ್ಣ ಗೌಡ ನಿಧನ

Suddi Udaya

ವೃತ್ತಿ ಕೀಳರಿಮೆ ಬೇಡ, ಗೌರವವನ್ನು ಬೆಳೆಸಿಕೊಳ್ಳಿ : ಡಿ ಹರ್ಷೇಂದ್ರ ಕುಮಾರ್

Suddi Udaya

ನಿಡ್ಲೆ: ನಾಟಿ ವೈದ್ಯ ಬಾಬು ನಿಧನ

Suddi Udaya

ಸಚಿವ ಮಧು ಬಂಗಾರಪ್ಪರವರನ್ನು ಭೇಟಿ ಮಾಡಿದ ರಕ್ಷಿತ್ ಶಿವರಾಂ

Suddi Udaya

ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜೆ

Suddi Udaya
error: Content is protected !!