26.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಾಯರ್ತಡ್ಕ ಪ್ರೌಢ ಶಾಲೆಯಲ್ಲಿ “ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಗಾರ

ಕಾಯರ್ತಡ್ಕ: “ಶ್ರೀ ಕೃಷ್ಣ ಆಸ್ಪತ್ರೆ, ಕಕ್ಕಿಂಜೆ ಶ್ರೀ ಕೃಷ್ಣ ಹೆಲ್ತ್ ಸೆಂಟರ್, ಕಾಯರ್ತಡ್ಕ ಕೆ.ಎಂ.ಸಿ ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗ
ಇವರ ಸಂಯುಕ್ತ ಆಶ್ರಯದಲ್ಲಿ, ಕಾಯರ್ತಡ್ಕ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ “ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಶಿಬಿರವು ನಡೆಯಿತು.

ಕಾರ್ಯಕ್ರಮದಲ್ಲಿ ತುರ್ತು ಸಂದರ್ಭಗಳಲ್ಲಿ ಹಾಗೂ ಇನ್ನಿತರ ಅನಾರೋಗ್ಯ ಅಥವಾ ಅನಾಹುತಗಳು ಸಂಭವಿಸುವ ಸಮಯದಲ್ಲಿ ಜೀವ ಉಳಿಸಲು ಧೈರ್ಯದಿಂದ ಹಾಗೂ ಎದೆಗುಂದದೆ ಪ್ರಥಮ ಚಿಕಿತ್ಸೆ ನೀಡಬೇಕು, ಹೃದಯಾಘಾತ, ಪಾರ್ಶ್ವವಾಯು, ನೀರಿನಲ್ಲಿ ಮುಳುಗುವುದು, ಅಗ್ನಿ ಅವಘಡ ಹಾಗೂ ಅಪಘಾತಗಳು/ಆಘಾತ, ಹಾವು ಕಡಿತ, ನಾಯಿ ಕಡಿತ, ವಿದ್ಯುತ್ ಆಘಾತ ಮತ್ತು ಸುಟ್ಟಗಾಯಗಳು, ಸಿಡಿಲು/ಮಿಂಚು,ರಕ್ತಸ್ರಾವದ ಗಾಯಗಳು ಮುಂತಾದ ಸಂದರ್ಭಗಳಲ್ಲಿ ಪ್ರತಿಯೊಬ್ಬ ಏನು ಮಾಡಬೇಕು ಮತ್ತು ಏನು ತಪ್ಪು ಮಾಡಬಾರದು ಎಂಬುದರ ಬಗ್ಗೆ ಇನ್ನಿತರ ತುರ್ತು ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿದರು. ಹೃದಯ ಸ್ತಂಭನ ಸಂದರ್ಭದಲ್ಲಿ CPR ಕೊಡುವುದರ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿಯನ್ನು ನಡೆಸಿಕೊಟ್ಟರು. ವೈದ್ಯಕೀಯ ತುರ್ತು ಪರಿಸ್ಥಿತಿಗಳು ಮತ್ತು ವಿಪತ್ತುಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ರೋಗಿಗಳನ್ನು ಅಥವಾ ಸಂತ್ರಸ್ತರನ್ನು ನಿಭಾಯಿಸಲು ಕನಿಷ್ಠ ಮೂಲಭೂತ ಜ್ಞಾನ ಅತ್ಯಗತ್ಯ, ಜೀವ ಉಳಿಸಲು ವೈದ್ಯರೇ ಆಗಬೇಕೆಂದಿಲ್ಲ ಸಾಮಾಜಿಕ ಕಳಕಳಿ ಇರುವವರು ಯಾರು ಬೇಕಾದರೂ ಈ ಕಾರ್ಯವನ್ನು ಮಾಡಬಹುದು. ಮುಖ್ಯವಾಗಿ ವಿದ್ಯಾರ್ಥಿಗಳು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ ಮುಖ್ಯಶಿಕ್ಷಕರಾದ ಯಾಕುಬ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು, ಕೆಎಂಸಿ ತುರ್ತು ಚಿಕಿತ್ಸಾ ವಿಭಾಗದ ಸಿಬ್ಬಂದಿ ಬಾಲಾಜಿ ಮಾಹಿತಿ ನೀಡಿದರು,
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಹೆಲ್ತ್ ಸೆಂಟರ್,ಕಾಯರ್ತಡ್ಕ ಇಲ್ಲಿನ ಅನಿಶ್ ಕೃಷ್ಣ ಇರ್ವತ್ರಾಯ,ಕೆ ಎಂ ಸಿ ಜನಸಂಪರ್ಕಾಧಿಕಾರಿ ಸುಪ್ರೀತಾ, ಶ್ರೀ ಕೃಷ್ಣ ಆಸ್ಪತ್ರೆಯ ಸಿಬ್ಬಂದಿಗಳಾದ ಗಣೀಶ್. ಬಿ, ಜಿಲ್ಸನ್ ಮ್ಯಾಥ್ಯೂ ಮೊದಲಾದವರು ಉಪಸ್ಥಿತರಿದ್ದರು.

Related posts

ಬಂಟ ಕಲಾ ಸಂಭ್ರಮ ಭಾರತ ದರ್ಶನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ ತಂಡಕ್ಕೆ ದ್ವಿತೀಯ ಸ್ಥಾನ

Suddi Udaya

ಬೆಳ್ತಂಗಡಿ: ರೆಂಕೆದಗುತ್ತು ನಿವಾಸಿ ಪಟ್ಟಣ ಪಂಚಾಯಿತ್ ನಾಮನಿರ್ದೇಶನ ಸದಸ್ಯರ ಅಬ್ದುಲ್ ಬಶೀರ್ ಆತ್ಮಹತ್ಯೆ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣ ಗೋಡೆ ಕುಸಿತ: ನೀರಿನ ಪಂಪ್ ಶೆಡ್ ಹಾಗೂ ವಿದ್ಯುತ್ ಕಂಬಕ್ಕೆ ಹಾನಿ

Suddi Udaya

ಉಪ ನಿರೀಕ್ಷಕರಾಗಿ ಭಡ್ತಿಗೊಂಡ ದೇವಪ್ಪ ಎಂ ಉಪ್ಪಿನಂಗಡಿ ಠಾಣಾ ಸಂಚಾರಿ ವಿಭಾಗದಲ್ಲಿ ಅಧಿಕಾರ ಸ್ವೀಕಾರ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತಿನಲ್ಲಿ ನಿವೃತ್ತ ಅಂಚೆ ಪಾಲಕರಾದ ವಿಶ್ವನಾಥ ಪೂಜಾರಿ ಹಾಗೂ ವಿಜಯ ರಾಜ್ ಜೈನ್ ರಿಗೆ ನಾಗರೀಕ ಸನ್ಮಾನ

Suddi Udaya

ಯಶೋಧ ಕೃಷ್ಣ ವೀಡಿಯೋ ಸ್ಪರ್ಧೆ: ಕಲ್ಮಂಜದ ರಿದ್ವಿ ಡಿ.ಆರ್ ಹಾಗೂ ಭಕ್ತಿ ಜಿ. ವಿನ್ನರ್

Suddi Udaya
error: Content is protected !!