25.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಪಿಲಿಚಾಮುಂಡಿಕಲ್ಲು ದೊಂಪದಬಲಿ ಉತ್ಸವ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್ ನಿಧನ

ಕುವೆಟ್ಟು: ಗುರುವಾಯನಕೆರೆ ಪಾಡ್ಯಾರು ನಿವಾಸಿ, ಪಿಲಿಚಾಮುಂಡಿಕಲ್ಲು ದೊಂಪದಬಲಿ ಉತ್ಸವ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷರಾಗಿದ್ದ, ವಿಶ್ವನಾಥ ಕೋಟ್ಯಾನ್(63ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಸೆ.1ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಇವರು ಸೆಂಟ್ರಿಂಗ್ ಕಂಟ್ರಾಕ್ಟ್ ಕೆಲಸವನ್ನು ಮಾಡುತ್ತಿದ್ದು, ಸ್ಥಳೀಯವಾಗಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಇವರು ದೊಂಪದಬಲಿ ಉತ್ಸವ ಸಮಿತಿ, ಪಿಲಿಚಾಮುಂಡಿಕಲ್ಲು ಇದರ ನಿಕಟಪೂರ್ವ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇವರ ನಿಧನಕ್ಕೆ ದೊಂಪದಬಲಿ ಉತ್ಸವ ಸಮಿತಿ ಪಿಲಿಚಾಮುಂಡಿಕಲ್ಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

Related posts

ಬೆಳ್ತಂಗಡಿ: ಜೀವನ್ ಜ್ಯೋತಿ ಸುರಕ್ಷಾದಿಂದ ಸಹಾಯಧನ ಹಸ್ತಾಂತರ

Suddi Udaya

ಮಚ್ಚಿನ: ಅಪಾಯದಂಚಿನಲ್ಲಿರುವ ವಿದ್ಯುತ್ ಕಂಬ

Suddi Udaya

ಎ.30 ಉಜಿರೆಯಲ್ಲಿ‌ ಬೃಹತ್ ರಕ್ತದಾನ ಶಿಬಿರ

Suddi Udaya

ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭ ಹಾಗೂ ಆಟಿದ ಕೂಟ

Suddi Udaya

ಕಲ್ಮಂಜ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನಾಗಬನದಲ್ಲಿ ನಾಗರ ಪಂಚಮಿ

Suddi Udaya

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮರಗಳು ಉರುಳಿ ಎರಡು ಗಂಟೆ ಟ್ರಾಫಿಕ್ ಜಾಮ್- ವಾಹನ ಸವಾರರ ಪರದಾಟ- ಮರಗಳು ತೆರವು

Suddi Udaya
error: Content is protected !!