24.2 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಶ್ಚಿಮ ವಲಯ ಮಟ್ಟದ 8ನೇ ಪೊಲೀಸ್ ಕರ್ತವ್ಯ ಕೂಟ : ಬೆಳ್ತಂಗಡಿ ವೃತ್ತ ನೀರಿಕ್ಷಕ ರವಿ ಬಿಎಸ್, ಹೆಡ್ ಕಾನ್‌ಸ್ಟೇಬಲ್ ವಿಜಯ್ ಕುಮಾರ್, ಪೊಲೀಸ್ ಕಾನ್‌ಸ್ಟೇಬಲ್ ಪ್ರಸನ್ನ, ಮೋಹನ್‌ರಿಗೆ ಪ್ರಶಸ್ತಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೊರೆನ್ಸಿಕ್ಸ್ ಸೆಂಟರ್ ಕೆಎಂಸಿ ಮಣಿಪಾಲ ವತಿಯಿಂದ ಕೆಎಂಸಿ ಡಾ.ಟಿ.ಎಂ.ಎ ಪೈ ಸಭಾಂಗಣದಲ್ಲಿ ಸೆ.೧ರಂದು ಪಶ್ಚಿಮ ವಲಯ ಮಟ್ಟದ 8ನೇ ಪೊಲೀಸ್ ಕರ್ತವ್ಯ ಕೂಟ 2026 ಸಮಾರಂಭ ನಡೆಯಿತು.

ವೈಜಾನಿಕ ತನಿಖಾ ವಿಭಾಗ ಸ್ಪರ್ಧೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ವೃತ್ತ ನೀರಿಕ್ಷಕ ರವಿ.ಬಿಎಸ್‌ಅವರಿಗೆ ಐದು ಪ್ರಶಸ್ತಿ, ಅಪಾರಾಧ ಸ್ಥಳ ನೀರೀಕ್ಷಣೆ ಹಾಗೂ ಪೊಟ್ರೆಟ್ ವಿಭಾಗದಲ್ಲಿ ಪುಂಜಾಲಕಟ್ಟೆ ಠಾಣೆಯ ಹೆಡ್ ಕಾನ್‌ಸ್ಟೇಬಲ್ ವಿಜಯಕುಮಾರ್ ರೈ ಎರಡು ಪ್ರಶಸ್ತಿ ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ಪ್ರಸನ್ನ ಮತ್ತು ವೇಣೂರು ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಮೋಹನ್ ಅವರಿಗೆ ಜಾವ ಪ್ರೋಗ್ರಮಿಂಗ್ ವಿಭಾಗದಲ್ಲಿ ಪಶ್ಚಿಮ ವಲಯ ಐಜಿಪಿ ಆರ್ ಚೇತನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಮಣಿಪಾಲ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮಂಗಳೂರು ವಲಯ ಅಭಿಯೋಜನೆ ಇಲಾಖೆ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್ ಆಳ್ವ ಕೆ., ಮಂಗಳೂರು ಆರ್.ಎಫ್.ಎಸ್.ಎಲ್. ಉಪನಿರ್ದೇಶಕಿ ಸುಜಾತಾ ಕೆ.ಎಂ. ಉಪಸ್ಥಿತರಿದ್ದರು. ಪಶ್ಚಿಮ ವಲಯ ಬೆರಳಚ್ಚು ಘಟಕದ ಪೊಲೀಸ್ ಇನ್‌ಸ್ಪೆಕ್ಟರ್ ಸೋಮ ಶೇಖರ್ ಸ್ವಾಗತಿಸಿದರು. ಶಿವಾನಂದ ನಾಯರಿ ನಿರೂಪಿಸಿದರು.

Related posts

ಶಿಬಾಜೆ : ಶಿವಪ್ಪ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ನೆರ್ತನೆ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪವನ್, ಕಾರ್ಯದರ್ಶಿ ಸಂದೀಪ್ ಆಯ್ಕೆ

Suddi Udaya

ಮುಂಡಾಜೆ ವಲಯದ ಭಜನಾ ಪರಿಷತ್ತಿನ ಸಭೆ

Suddi Udaya

ಪ್ರಕೃತಿಯ ವಿಸ್ಮಯ: ತೊತಪುರಿ ಮಾವಿನ ಕಾಯಿಯಂತೆ ಕಂಡು ಬಂದ ಪಪ್ಪಾಯಿ ಹಣ್ಣು

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಹಸಿರುವಾಣಿ ಹೊರೆ ಕಾಣಿಕೆ

Suddi Udaya

ಆ.27: ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ನೂತನ ಗರ್ಭಗುಡಿಗಳಿಗೆ ಶಿಲಾನ್ಯಾಸ

Suddi Udaya
error: Content is protected !!