September 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮೆಸ್ಕಾಂನಲ್ಲಿ 395 ಪವರ್‌ಮ್ಯಾನ್‌ ಗಳ ನೇಮಕಾತಿ

ಬೆಳ್ತಂಗಡಿ: ಮೆಸ್ಕಾಂ ವ್ಯಾಪ್ತಿಗೆ 395 ಹೊಸ ಪವರ್‌ಮ್ಯಾನ್‌ ಗಳನ್ನು ನೇಮಕ ಮಾಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 430 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಸದ್ಯ 395 ಮಂದಿಗೆ ನೇಮಕಾತಿ ಆದೇಶ ನೀಡಲಾಗಿದೆ. ಇನ್ನೂ 35 ಪವರ್‌ಮನ್‌ಗಳ ಕೊರತೆಯಿದ್ದು, ಹೆಚ್ಚುವರಿ ನೇಮಕಾತಿಗೆ ಸರಕಾರ ಅನುಮತಿ ನೀಡಿದೆ ಎಂದರು.

ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 28.10 ಲಕ್ಷ ವಿದ್ಯುತ್ ಸಂಪರ್ಕಗಳಿವೆ. ಸುಮಾರು 97 ಸಾವಿರ ಕಿ. ಮೀ. ಕಡಿಮೆ ಒತ್ತಡದ ಹಾಗೂ 59 ಸಾವಿರ ಕಿ. ಮೀ. 11 ಕೆವಿ ಉನ್ನತ ಒತ್ತಡದ ವಿದ್ಯುತ್ ಮಾರ್ಗಗಳಿವೆ. ಮಂಗಳೂರು ನಗರದಲ್ಲಿ ಭೂಗತ ವಿದ್ಯುತ್ ಕೇಬಲ್ ವ್ಯವಸ್ಥೆ ಮತ್ತು ಲಿಂಕ್‌ಲೈನ್ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ವಿದ್ಯುತ್ ಸುರಕ್ಷೆಗಾಗಿ ಸುಮಾರು 5,270 ದ್ವಿಮುಖ ಕಟ್ ಔಟ್‌ಗಳನ್ನು ಅಳವಡಿಸುವ ವ್ಯವಸ್ಥೆಯೂ ಜಾರಿಯಲ್ಲಿದೆ. ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗುತ್ತಿದ್ದು, ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ವಿದ್ಯುತ್ ಬಳಕೆ, ದೈನಂದಿನ ಬಳಕೆಯ ಪ್ರಮಾಣ ಹಾಗೂ ಬಿಲ್ ವಿವರಗಳನ್ನು ಪರಿಶೀಲಿಸಬಹುದು ಎಂಬ ಮಾಹಿತಿ ನೀಡಿದರು.

ಈ ಪೂರ್ವ ಮುಂಗಾರು, ಅವಧಿಯಲ್ಲಿ ಗಾಳಿ ಮಳೆಯಿಂದಾಗಿ ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 17,770 ವಿದ್ಯುತ್ ಕಂಬ, 496.37 ಕಿ.ಮೀ. ವಿದ್ಯುತ್ ಮಾರ್ಗ ಹಾನಿ ಯಾಗಿದ್ದು, 25.77 ಕೋ. ರೂ. ನಷ್ಟ ಉಂಟಾಗಿದೆ. ಮಳೆಗಾಲದಲ್ಲಿ ತುರ್ತು ನಿರ್ವಹಣ ಕೆಲಸ ನಿರ್ವಹಿಸಲು 489 ಮಂದಿಯ ಕಾರಪಡೆ, 62 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ. ದೂರವಾಣಿ ಕರೆಗಳ ನಿರ್ವ ಹಣೆಗೆ 23 ಮಂದಿಯ ವಿಶೇಷ ಪಡೆ ಸಜ್ಜುಗೊಳಿಸಲಾಗಿದೆ ಎಂದರು.

Related posts

ಗ್ರಾಮ ಪಂಚಾಯತ್ ನೌಕರರ ಶ್ರೇಯ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾಗಿ ಸತೀಶ್ ನಾರಾವಿ ಆಯ್ಕೆ

Suddi Udaya

ಬಳಂಜ: ಗಾಳಿಯ ರಭಸಕ್ಕೆ ಹಾರಿ ಹೋದ ಹಟ್ಟಿಯ ಶೀಟ್ : ಅಪಾರ ಹಾನಿ

Suddi Udaya

ಪದ್ಮುoಜ : ಬಂದಾರು, ಮೊಗ್ರು,ಕಣಿಯೂರು, ಉರುವಾಲು, ಇಳoತಿಲ ಶಕ್ತಿಕೇಂದ್ರ ಚುನಾವಣಾ ಅವಲೋಕನ ಸಭೆ

Suddi Udaya

ಜೂ.18-23: ಉಜಿರೆಯಲ್ಲಿ ಬೆಂಗಳೂರು ಜೀವನ ಕಲೆ ಪ್ರತಿಷ್ಠಾನ ಸಂಸ್ಥೆ ವತಿಯಿಂದ ‘ಆನಂದೋತ್ಸವ ಶಿಬಿರ’

Suddi Udaya

ಬೆಳ್ತಂಗಡಿ ಸಂತ ತೆರೇಸಾ ಪ್ರೌಢಶಾಲೆಯಲ್ಲಿ ತ್ರಿವಳಿ ಸಂಭ್ರಮ

Suddi Udaya

ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ ಡಾ. ಶ್ಯಾಮ್ ಪ್ರಸಾದ ಮುಖರ್ಜಿ ಯವರ ಪುಣ್ಯಸ್ಮರಣೆ

Suddi Udaya
error: Content is protected !!