September 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೈಂದೂರಿನಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 18ನೇ ವರ್ಧಂತಿ

ಧರ್ಮಸ್ಥಳ : ದಕ್ಷಿಣದ ಅಯೋಧ್ಯೆ ಎಂಬ ಖ್ಯಾತಿಯನ್ನು ಹೊಂದಿರುವ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 18ನೇ ವರ್ಧಂತಿ ಸೆ.3ರಂದು ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀಗಳ ಚಾತುರ್ಮಸ್ಯ ವ್ರತಾಚರಣೆಯ ಸಂದರ್ಭದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಶ್ರೀಗಳ ಪಾದುಕ ಪೂಜೆ, ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು. ನಾಗ ಸಾಧು ಕೇಶವ ಮಹಾರಾಜ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದ. ಕ. ಸಂಸದ ಬ್ರಿಜೇಶ್ ಚೌಟ, ಉಡುಪಿ ಮಾಜಿ ಶಾಸಕ ರಘುಪತಿ ಭಟ್, ಮಂಗಳೂರು ಮೆಸ್ಕಾಂ ಅಧ್ಯಕ್ಷ ಗುರುದೇವ ಮಠದ ಟ್ರಷ್ಟಿ ಕೆ. ಹರೀಶ್ ಕುಮಾರ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವೈದ್ಯ ಡಾ. ಸದಾನಂದ ಪೂಜಾರಿ, ಮಂಗಳೂರು ಮಾಜಿ ಕಾರ್ಪೋರೇಟರ್ ಕಿರಣ್, ಬಿಜೆಪಿ ಪ್ರಭಾರಿ ಜಯಂತ ಕೋಟ್ಯಾನ್, ಬೈಂದೂರು ಶಾಸಕ ಚಾತುರ್ಮಸ್ಯ ಸಮಿತಿ ಅಧ್ಯಕ್ಷ ಗುರುರಾಜ ಗಂಟಿಹೊಳೆ, ಟ್ರಷ್ಟಿ ತುಕಾರಾಮ ಸಾಲಿಯಾನ್, ಬೇಬಿ ಕುಂದ‌ರ್, ಭುವನೇಶ್ ಪಚ್ಚಿನಡ್ಕ, ಹೆಚ್. ಆರ್. ನಾಯ್ಕ, ವಾಮನ ನಾಯ್ಕ, ಶ್ರೀಧರ ನಾಯ್ಕ, ಅನಿತಾ ಆರ್ಕೆ, ಓಬು ಪೂಜಾರಿ, ಇನ್ನಿತರ ಗಣ್ಯರು, ಟ್ರಷ್ಟಿಗಳು ಶಿಷ್ಯ ವೃಂದದವರು, ಶ್ರೀ ರಾಮ ಕ್ಷೇತ್ರ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Related posts

ನಿಡ್ಲೆ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಜಯಂತ್ ಟಿ ಹಾಜರು: ಒಳದಾರಿಯಲ್ಲಿ ಓಡಿ ಹೋಗಿ ಕಚೇರಿ ಪ್ರವೇಶ

Suddi Udaya

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಓಣಂ ಆಚರಣೆ

Suddi Udaya

ಕರಳು ಬೇನೆ /ಕಾಲರಾ ಬಗ್ಗೆ ಎಚ್ಚರ ವಹಿಸುವಂತೆ ಬೆಳ್ತಂಗಡಿ ತಾ.ಪಂ. ನಿಂದ ಸಾರ್ವಜನಿಕರಲ್ಲಿ ವಿನಂತಿ

Suddi Udaya

ಅತ್ಯುತ್ತಮ ಸೇವೆಗೆ ಹೆಸರುವಾಸಿ ಗುರುವಾಯನಕೆರೆಯ ಹೋಟೆಲ್ ರೇಸ್ ಇನ್

Suddi Udaya

“ಲೋಕಾಯುಕ್ತ ಜನ ಸಂಪರ್ಕ ಸಭೆ: ಗ್ರಾಮ ಮಟ್ಟದಲ್ಲಿ ಭ್ರಷ್ಟಚಾರದ ಕುರಿತು ಜಾಗೃತಿ-ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ

Suddi Udaya
error: Content is protected !!