27.8 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಬೆಳ್ತಂಗಡಿ ಮುಳಿಯದಲ್ಲಿ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ: ನೂರಾರು ಕೃಷ್ಣವೇಷ ಸ್ಪರ್ಧಿಗಳು ಭಾಗಿ

ಬೆಳ್ತಂಗಡಿ: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನ ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಬೆಳ್ತಂಗಡಿ ಮುಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುಳಿಯ ಗೋಲ್ಡ್ & ಡೈಮಂಡ್ ಪ್ರಸ್ತುತ ಪಡಿಸುವ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆಯ ಉದ್ಘಾಟನಾ ಸಮಾರಂಭ ಸೆ. 12ರಂದು ಬೆಳ್ತಂಗಡಿ ರಕ್ಷಾ ಆರ್ಕೆಡ್ ನ ಆವರಣದಲ್ಲಿ ನಡೆಯಿತು.

ಮುಳಿಯ ಗೋಲ್ಡ್ & ಡೈಮಂಡ್ ನ ಮಾರ್ಕೆಟಿಂಗ್ ಮ್ಯಾನೇಜರ್ ಕೃಷ್ಣ ಕುಮಾರ್ ಜೊತೆಯಾಗಿ ಮುದ್ದು ಕೃಷ್ಣ ಸ್ಪರ್ಧೆಗಳು ದೀಪ ಪ್ರಜ್ವಲನೆಗೊಳಿಸಿದರು. ನೂರಕ್ಕೂ ಅಧಿಕ ಕೃಷ್ಣವೇಷ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ವೇದಿಕೆಯಲ್ಲಿ ತೀರ್ಪುಗಾರರಾದ ಪೂಂಜಾಲಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಹೇಮಾವತಿ ಕೆ., ವಾಣಿ ಕಾಲೇಜಿನ ಕನ್ನಡ ಉಪನ್ಯಾಸಕ ಬೆಳ್ಳಿಯಪ್ಪ, ಶಾಖಾ ಉಪ ವ್ಯವಸ್ಥಾಪಕ ಸುಧೀರ್ ಸುವರ್ಣ ಉಪಸ್ಥಿತರಿದ್ದರು. ಖ್ಯಾತ ನಿರೂಪಕಿ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮವನ್ನು ನಿರೂಪಿಸಿದರು. ಮುಳಿಯದ ಸಿಬ್ಬಂದಿಗಳು ಸಹಕರಿಸಿದರು.

Related posts

ಬೆಳ್ತಂಗಡಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಸತೀಶ್ ಹೃದಯಾಘಾತದಿಂದ ನಿಧನ

Suddi Udaya

ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೃಢ ಕಲಶಾಭಿಷೇಕ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಅರಿವಿನ ದೀವಿಗೆ ‘ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ’ ವಿಶೇಷ ಉಪನ್ಯಾಸ

Suddi Udaya

ಸಾಯಿ ರಾಮ್ ಫ್ರೆಂಡ್ಸ್ ಗುರುವಾಯನಕೆರೆ ವತಿಯಿಂದ ಸುಹಾಸ್ ಶೆಟ್ಟಿಗೆ ನುಡಿ ನಮನ

Suddi Udaya

​ವಿದ್ಯಾಮಾತಾ ಅಕಾಡೆಮಿ, ಪುತ್ತೂರು: GPSTR, PSTR ಹಾಗೂ HSTR ಸರಕಾರಿ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಚಿತ ತರಬೇತಿ ಕಾರ್ಯಾಗಾರ!

Suddi Udaya

ಉಜಿರೆ ರಬ್ಬರ್ ಸೊಸೈಟಿಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಪ್ರಸಾದ್ ಐ.ಎಸ್, ವಿಶೇಷಾಧಿಕಾರಿಯಾಗಿ ರಾಜು ಶೆಟ್ಟಿ ಅಧಿಕಾರ ಸ್ವೀಕಾರ

Suddi Udaya
error: Content is protected !!