ಉಜಿರೆ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಬೆಳ್ತಂಗಡಿ ತಾಲೂಕು ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ಸೆ.13ರಿಂದ ಸೆ.15ರವರೆಗೆ ಬ್ರಹ್ಮಶ್ರೀ ಶಿರೋಮಣಿ ಶ್ರೀ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ 29ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವವು ಉಜಿರೆ ಕುಂಜರ್ಪದಲ್ಲಿ ಜರುಗಲಿದೆ ಎಂದು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅಧ್ಯಕ್ಷ ಮೋಹನ್ ಶೆಟ್ಟಿ ಪಾಣ್ಯಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.15 ಧಾರ್ಮಿಕ ಸಭಾ ಕಾರ್ಯಕ್ರಮ:
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮಹೇಶ್ ಸಂಸ್ಥಾಪಕರಾದ ಮಹೇಶ್ ಶೆಟ್ಟಿ, ತಿಮರೋಡಿ ವಹಿಸಲಿದ್ದಾರೆ. ನ್ಯಾಯವಾದಿಗಳಾದ ಪ್ರಸಾದ್ ಕುಮಾರ್ ಅವರು ಧಾರ್ಮಿಕ ಉಪನ್ಯಾಸವನ್ನು ನೀಡಲಿರುವರು. ಕರ್ನಾಟಕ ದಕ್ಷಿಣ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್, ರಾಷ್ಟ್ರ ಸೇವಿಕಾ ಸಮಿತಿಯ ಭಗಿನಿ ಮೀನಾಕ್ಷಿ ಅವರು ದಿಕ್ಸೂಚಿ ಭಾಷಣ ಮಾಡಲಿರುವರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮೋಹನ್ ಶೆಟ್ಟಿ ಪಾಣ್ಯಾಲ್ ಉಪಸ್ಥಿತರಿರುವರು.
ಸೆ.13 ಬೆಳಿಗ್ಗೆ 10-30ಕ್ಕೆ ಸಾಮೂಹಿಕ ಗೌರಿ ಪೂಜೆ ಪ್ರಾರಂಭ,
ಮಧ್ಯಾಹ್ನ 12-30ಕ್ಕೆ ಮಹಾಪೂಜೆ ನಂತರ ಸಾಮೂಹಿಕ ಅನ್ನಸಂತರ್ಪಣೆ, ಸಂಜೆ 7-30ರಿಂದ ರಾಜೇಶ್ ಆಚಾರ್ಯ ಸವಣಾಲು ನಿರ್ದೇಶನದ ಶ್ರೀ ಮಾಯ ಮಹಾದೇವ ಕಲಾತಂಡ ಮಾಯ ಬೆಳಾಲು ಅಭಿನಯದ ಸಾಂಸಾರಿಕ ಹಾಸ್ಯಮಯ ತುಳು ನಾಟಕ “ಆರ್ ಬುಡಿಯೆರ್” ನಡೆಯಲಿದೆ.
ಸೆ.14 ಸೋಮವಾರ ಬೆಳಿಗ್ಗೆ 8-00ಕ್ಕೆ ಗಣಪತಿ ಮೂರ್ತಿ ಪ್ರತಿಷ್ಠೆ, 8-30ಕ್ಕೆ ಗಣಹೋಮ, 9-30ಕ್ಕೆ ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12-30ಕ್ಕೆ ಮಧ್ಯಾಹ್ನದ ಮಹಾಪೂಜೆ, 1-00ಕ್ಕೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, 1-15ಕ್ಕೆ VSD Show Masterz Dance Studio Ujire ಇವರಿಂದ ‘ನೃತ್ಯ ವೈವಿದ್ಯಮಯ ಕಾರ್ಯಕ್ರಮ’, ಸಂಜೆ 4-00ರಿಂದ ಭಜನಾ ಕಾರ್ಯಕ್ರಮ, 6-00ಕ್ಕೆ ಮಹಾಪೂಜೆ, 6-15ರಿಂದ ಶ್ರೀ ಶಾರದ ಅಂಧರ ಗೀತಾ-ಗಾನ ಕಲಾ ಸಂಘ (ರಿ.) ಶೃಂಗೇರಿ ಇವರಿಂದ “ಭಕ್ತಿ ರಸಮಂಜರಿ”, ರಾತ್ರಿ 8-00ರಿಂದ ನಿತಿನ್ ಹೊಸಂಗಡಿ ನಿರ್ದೇಶನದ ಶ್ರೀ ದುರ್ಗಾ ಕಲಾತಂಡ ಪುಗರ್ತೆ ಕಲಾವಿದೆರ್ ವಿಟ್ಲ ಮೈರ ಕೇಪು ಅಭಿನಯಿಸುವ ಅದ್ಧೂರಿ ಭಕ್ತಿ ಪ್ರಧಾನ ತುಳು ನಾಟಕ ‘ಕಬ್ಬಿಗದ ಕಾಳಿ ಮಂತ್ರದೇವತೆ’ ಜರುಗಲಿದೆ.
ಸೆ.15 ಮಂಗಳವಾರ ಬೆಳಿಗ್ಗೆ 8-00ಕ್ಕೆ ಬೆಳಗ್ಗಿನ ಪೂಜೆ, 9-00ಕ್ಕೆ 108 ತೆಂಗಿನಕಾಯಿ ಗಣಹೋಮ, 10-30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ 12-30ಕ್ಕೆ ಮಧ್ಯಾಹ್ನದ ಮಹಾಪೂಜೆ, 12-45ಕ್ಕೆ “ಯಕ್ಷಗಾನ ವೈಭವ”, ಭಾಗವಹಿಸುವ ಭಾಗವತರು : ಸತೀಶ್ ಶೆಟ್ಟಿ ಪಟ್ಲ, ಸತ್ಯನಾರಾಯಣ ಪುಣಿಚಿತ್ತಾಯ, ತೆಂಕಬೈಲು ಮುರಳಿ ಶಾಸ್ತಿ, ಚೆಂಡೆ ಮದ್ದಳೆ : ಗುರುಪ್ರಸಾದ್, ಕೌಶಿಕ್ ರಾವ್, ಸಂಯೋಜನೆ ನಿರೂಪಣೆ : ಡಿ. ಮಾಧವ ಬಂಗೇರ, 1-00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6-00ಕ್ಕೆ ಮಹಾಪೂಜೆ, 6-30ಕ್ಕೆ ವಿಘ್ನ ವಿನಾಶಕನ ವರ್ಣರಂಜಿತ ಶೋಭಾಯಾತ್ರೆ ಪ್ರಾರಂಭ, ರಾತ್ರಿ 8-00ಕ್ಕೆ ಉಜಿರೆ ಪೇಟೆಯಲ್ಲಿ ಕಲರ್ಸ್ ಕನ್ನಡ ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಹಾಗೂ ಬಳಗದವರಿಂದ “ಭಕ್ತಿ ಗಾನಾಮೃತ” ನಡೆಯಲಿದೆ. ಶೋಭಾಯಾತ್ರೆಯ ಸಮಯದಲ್ಲಿ ಭಜನಾ ತಂಡಗಳಿಂದ ಭಜನೆ, ಚೆಂಡೆ, ನಾಸಿಕ್ ಬ್ಯಾಂಡ್, ಟ್ಯಾಟೋ, ಕೀಲುಕುದುರೆ. ಸುಡುಮದ್ದು ಪ್ರದರ್ಶನ ನಡೆಯಲಿದೆ.












