ಬಂದಾರು : ಪದ್ಮುಂಜದಲ್ಲಿ ಹಲವಾರು ವರ್ಷಗಳಿಂದ ಟೈಲರ್ ವೃತ್ತಿ ನಡೆಸುತ್ತ ಬಂದಾರು ಗ್ರಾಮದ ಅಂಡಿಲ ನಿವಾಸಿ ರಾಘವ ಟೈಲರ್ ಸೆ. 14 ರಂದು ನಿಧನರಾದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರು ಗೇರುಕಟ್ಟೆ ಟೈಲರ್ ಅಸೋಸಿಯೇಷನ್ ವಲಯ ಸಮಿತಿಯ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಓರ್ವ ಪುತ್ರಿ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.











