September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯಲ್ಲಿ ಹಿಂದಿ ದಿವಸ್‌ನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು, ಉಜಿರೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಶೃತಿ ಮನ್ಕೀಕರ್ ಅವರು ಆಗಮಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿಂದಿ ಭಾಷೆಯ ಮಹತ್ವವನ್ನು ತಿಳಿಸಿ, ಭಾಷೆಯ ಬಗ್ಗೆ ಗೌರವ ಮತ್ತು ಅಭಿಮಾನ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಹಿಂದಿ ದಿವಸದ ಅಂಗವಾಗಿ ಪ್ರಬಂಧ ರಚನೆ, ಭಾಷಣ, ಹಿಂದಿ ಗೀತೆ ಹಾಗೂ ಭಿತ್ತಿಪತ್ರ ರಚನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ.ಆರ್. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 10ನೇ ತರಗತಿಯ ಶ್ರೀರಕ್ಷಾ ಸ್ವಾಗತಿಸಿದರು. ರಿತಿಕಾ ಶೈಣೈ ನಿರೂಪಿಸಿದರು. ಬೃಂದಾ ವಂದನಾರ್ಪಣೆ ನೆರವೇರಿಸಿದರು.

ಹಿಂದಿ ಶಿಕ್ಷಕಿ ಶ್ರೀಮತಿ ಮೇನಿತಾ ಶೆಟ್ಟಿ ಅವರು ಕಾರ್ಯಕ್ರಮದ ಯೋಜನೆ, ಸ್ಪರ್ಧೆಗಳ ಆಯೋಜನೆ ಹಾಗೂ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಗೆ ಮಾರ್ಗದರ್ಶನ ನೀಡಿ, ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖವಾಗಿ ಸಹಕರಿಸಿದರು. ಹಿಂದಿ ಶಿಕ್ಷಕರಾದ ಮಂಜುನಾಥ ರವರ ಪೂರ್ಣ ಸಹಕಾರ ಸಂಯೋಜನೆಯೊಂದಿಗೆ ಕಾರ್ಯಕ್ರಮವು ಯಶಸ್ವಿಗೊಂಡಿತು

ಶಿಕ್ಷಕ ವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ನಾರಾವಿಯಲ್ಲಿ ಹೆಗ್ಗಡೆ ಸಂಗಮ 2023 ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya

ಚಿಬಿದ್ರೆ – ಧರ್ಮಸ್ಥಳ ರಸ್ತೆಯಲ್ಲಿ ಬಿದ್ದ ಮರ : ಶೌರ್ಯ ವಿಪತ್ತು ಘಟಕದಿಂದ ತೆರವು

Suddi Udaya

ವೇಣೂರು: ಪಲ್ಗುಣಿ ನದಿಯಿಂದ ಅಕ್ರಮ ಮರಳು ಸಾಗಟ: ವೇಣೂರು ಪೊಲೀಸರಿಂದ ದಾಳಿ: ಆರೋಪಿಗಳ ಸಹಿತ ಪಿಕಪ್‌ ವಾಹನ ವಶ

Suddi Udaya

ಕೊಕ್ಕಡ: ಟೀಮ್ ಭವಾನಿ ತಂಡದಿಂದ ಧನಸಹಾಯ ಹಸ್ತಾಂತರ

Suddi Udaya

ಚಿಕ್ಕಮಗಳೂರಿನಲ್ಲಿ ಕಳ್ಳತನವಾದ ಓಮಿನಿ ಕಾರು ಉಜಿರೆಯಲ್ಲಿ ಪತ್ತೆ: ಮಾಲೀಕನ ಸ್ನೇಹಿತರ ಮೂಲಕ 10 ದಿನದಲ್ಲಿ ಕಾರು ಪತ್ತೆ

Suddi Udaya

ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ವ್ಯಕ್ತಿ ಆತ್ಮಹತ್ಯೆ

Suddi Udaya
error: Content is protected !!