30.6 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆಯಲ್ಲಿ 28ನೇ ವರ್ಷದ ಭಜನಾ ಕಮ್ಮಟಕ್ಕೆ ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಚಾಲನೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ 28ನೇ ವರ್ಷದ ಭಜನಾ ಕಮ್ಮಟವು ಸೆ.28ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶುಭಾರಂಭಗೊಂಡಿತು.

ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಭಜನಾ ಕಮ್ಮಟವನ್ನು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಶ್ರೀ ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿದ್ದರು.


ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದಿವ್ಯ ಉಪಸ್ಥಿತಿ ವಹಿಸಿದ್ದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ಉಪಾಧ್ಯಕ್ಷರಾದ ಡಾ. ಹೇಮಾವತಿ ವೀ. ಹೆಗ್ಗಡೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀಮತಿ ಸುಪ್ರೀಯ ಹಷೇ೯ಂದ್ರ‌ ಕುಮಾರ್, ಎಸ್ .ಡಿ.ಎಂ. ಹಣಕಾಸು ವಿಭಾಗದ ನಿರ್ದೇಶಕ ನಿಶ್ಚಲ್ ಕುಮಾರ್, ಐಶ್ವರ್ಯ ನಿಶ್ಚಲ್ ಕುಮಾರ್, ಭಜನಾ ಕಮ್ಮಟದ ಸಂಚಾಲಕ ಜಿ. ಸುಬ್ರಹ್ಮಣ್ಯ ಪ್ರಸಾದ್, ಶ್ರೀ ಧ.ಮಂ. ಪ್ರಾದೇಶಿಕ ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಕಾರ್ಯದರ್ಶಿ ಎ.ವಿ. ಶೆಟ್ಟಿ, ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಉಪಸ್ಥಿತರಿದ್ದರು.

ಕು. ಸುಪ್ರೀತಾ ಧಮ೯ಸ್ಥಳ ಇವರ ಪ್ರಾಥ೯ನೆ ಬಳಿಕ ಭಜನಾ ಕಮ್ಮಟದ ಸಂಚಾಲಕ ಜಿ. ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಸಮನ್ವಯಾಧಿಕಾರಿ ಸಂತೋಷ್ ಅಳಿಯೂರು‌ ವಂದಿಸಿದರು. ಪುದುವೆಟ್ಟು ಶ್ರೀ ಧ.ಮಂ. ಶಾಲಾ ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರೂಪಿಸಿದರು. ಯೋಗ ನಿರ್ದೇಶಕ ಡಾ.ಐ ಶಶಿಕಾಂತ್ ಜೈನ್ ಸ್ವಸ್ತಿ ಮಂತ್ರ ಪಠಿಸಿದರು. ವಿದುಷಿ ಶ್ರೀಮತಿ ಚೈತ್ರಾ ಧಮ೯ಸ್ಥಳ ಮತ್ತು ತಂಡದವರಿಂದ ದೃಶ್ಯ ರೂಪಕ ನಡೆಯಿತು.

Related posts

ಬೆಳ್ತಂಗಡಿ : ಆಭರಣ ಜ್ಯುವೆಲರಿಗೆ ಐಟಿ ದಾಳಿ ಪ್ರಕರಣ: ಬೆಳ್ತಂಗಡಿ ಆಭರಣ ಶಾಪ್ ನ ಐಟಿ ದಾಳಿ ಮುಕ್ತಾಯ

Suddi Udaya

ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಾದ ಇಸ್ರೊ ಕೈಗೊಂಡ ಚಂದ್ರಯಾನ-3 ಯಶಸ್ವಿ: ಕೇದಾರನಾಥ ಯಾತ್ರೆ ಕೈಗೊಂಡಿದ್ದ ಬೆಳ್ತಂಗಡಿಯ ಯುವಕರು ಹರಿದ್ವಾರದಲ್ಲಿ ಸಂಭ್ರಮಾಚರಣೆ

Suddi Udaya

ಕನಾ೯ಟಕ ಜೈನ್ ಅಸೋಸಿಯೇಷನ್ ವತಿಯಿಂದ “ನಮ್ಮ ನಡೆ ಧರ್ಮಸ್ಥಳದ ಕಡೆ” ಅಭಿಯಾನ: 14 ಜೈನ ಮಠಗಳ ಭಟ್ಟಾರಕ ಸ್ವಾಮೀಜಿಗಳು ಹಾಗೂ 10 ಸಾವಿರ ಸಂಖ್ಯೆಯಲ್ಲಿ ಜೈನ ಬಾಂಧವರು ಭಾಗಿ

Suddi Udaya

ಬೆಳ್ತಂಗಡಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾಬಂಧನ ಆಚರಣೆ

Suddi Udaya

ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಭೆ

Suddi Udaya

ಉಜಿರೆ ಹಳೆಪೇಟೆ ಶಾಲೆಯಲ್ಲಿ ಎಸ್‌ಡಿಎಂ ಆಸ್ಪತ್ರೆ ವತಿಯಿಂದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!