28 C
ಪುತ್ತೂರು, ಬೆಳ್ತಂಗಡಿ
September 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಂಡಿಂಜೆ : ಮಲ್ಲಿಗೆ ಮತ್ತು ಅಣಬೆ ಕೃಷಿ ತರಬೇತಿ ಕಾರ್ಯಕ್ರಮ

ಅಂಡಿಂಜೆ : ಗ್ರಾಮ ಪಂಚಾಯತ್ ಅಂಡಿಂಜೆ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಇದರ ಆಶ್ರಯದಲ್ಲಿ ಮಲ್ಲಿಗೆ ಮತ್ತು ಅಣಬೆ ಕೃಷಿ ತರಬೇತಿ ಕಾರ್ಯಕ್ರಮವು ಒಕ್ಕೂಟದ ಅಧ್ಯಕ್ಷೆ ಸುದರ್ಶಿನಿ ಹೆಗ್ಡೆ ಉಪಸ್ಥಿತಿಯಲ್ಲಿ ನಡೆಯಿತು.

ಕೃಷಿ ಅಧಿಕಾರಿ ಗಣೇಶ್ ಆಡಿಗ ಸಂಕ್ಷಿಪ್ತವಾಗಿ ಕೃಷಿ ಇಲಾಖೆಯ ಮಾಹಿತಿಯನ್ನು ತಿಳಿಸಿದರು. ಕಾರ್ಯಕ್ರಮವನ್ನು ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸುಲೈಮಾನ್ ಬೆಳಾಲು ಅಣಬೆ ಕೃಷಿಯ ಬಗ್ಗೆ ತರಬೇತಿ ನೀಡಿದರು. ತಾಲೂಕು ಕೃಷಿ ವ್ಯವಸ್ಥಾಪಕ ಬಂಗಾರಪ್ಪ ಸಂಜೀವಿನಿ ಯೋಜನೆಯ ಬಗ್ಗೆ ಮತ್ತು ಸಾಲ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು .

ಇನ್ನೋರ್ವ ಪ್ರಗತಿಪರ ಕೃಷಿಕ ಪ್ರಭಾಕರಮಯ್ಯ ಮಲ್ಲಿಗೆ ಕೃಷಿಯನ್ನು ಮಾಡುವ ಬಗ್ಗೆ ಮಾಹಿತಿ ನೀಡಿದರು.. ಕೃಷಿ ಅಧಿಕಾರಿ ಗಣೇಶ ಅಡಿಗ ನೈಸರ್ಗಿಕ ಕೃಷಿಗೆ ಸಂಬಂಧಿಸಿದಂತೆ ಮಣ್ಣು ಪರೀಕ್ಷೆ ಕಾರ್ಡನ್ನು ಸಾಂಕೇತಿಕವಾಗಿ ವಿತರಿಸಿದರು.. ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ರಮಣಿ ಹೆಗ್ಡೆ ಇವರ ಪ್ರಾರ್ಥನೆಯೊಂದಿಗೆ ಮತ್ತು ಕೃಷಿ ಸಖಿ ಶ್ರೀಮತಿ ವತ್ಸಲ ಸ್ವಾಗತಿಸಿದರು. ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಮಲ್ಲಿಕಾ ನಿರೂಪಿಸಿ, ಸುರೇಖಾ ಧನ್ಯವಾದ ನೀಡಿದರು .

Related posts

ವಾಣಿ ಶಿಕ್ಷಣ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಶೈಕ್ಷಣಿಕ ವರ್ಷದಲ್ಲಿ 8 ರಿಂದ 10ನೇ ತರಗತಿ ಮಕ್ಕಳಿಗೆ ತೆರೆದ ಪುಸ್ತಕ ಪರೀಕ್ಷೆ

Suddi Udaya

20 ವರ್ಷಗಳ ಯಶಸ್ವಿ ಪಯಣ: ಜು.10- ಮಡಂತ್ಯಾರಿನಲ್ಲಿ ಲುಕ್ ಆಪ್ಟಿಕ್ಸ್ ಮರು ಉದ್ಘಾಟನೆ:

Suddi Udaya

ಎಸ್ ಡಿ ಎಮ್ ಕಾಲೇಜಿನಲ್ಲಿ ವಾಣಿಜ್ಯ “ವ್ಯವಹಾರ “ಹಬ್ಬ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ

Suddi Udaya

ಭಾರತೀಯ ಜೈನ್ ಮಿಲನ್ ನ ಕೆನಡಾ ಘಟಕವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ವೆಬಿನಾರ್ ಮೂಲಕ ಉದ್ಘಾಟನೆ

Suddi Udaya
error: Content is protected !!