26 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವೇಣೂರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಮುದಾಯ ಭವನ ನಿರ್ಮಾಣದ ಪೂರ್ವಭಾವಿ ಸಮಾಲೋಚನಾ ಸಭೆ

ವೇಣೂರು : ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ವೇಣೂರು ಇದರ ಸಮುದಾಯ ಭವನ ನಿರ್ಮಾಣದ ಪೂರ್ವಭಾವಿ ಸಮಾಲೋಚನಾ ಸಭೆಯು ಸೆ. 26 ರಂದು ವೇಣೂರು ಬಿಲ್ಲವ ಸಂಘದಲ್ಲಿ ವಲಯ ಅಧ್ಯಕ್ಷ ಹರೀಶ್ ಕುಮಾರ್ ಪದ್ಮಲಕ್ಷ್ಮೀ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಸಂಜೀವ ಸುವರ್ಣ ಸಿದ್ಧಿಶ್ರೀ ಬಜಿರೆ, ನಾರಾಯಣ ಪೂಜಾರಿ ಶ್ರೀ ಗುರು ಧೋಟ, ರಮೇಶ್ ಪೂಜಾರಿ ಪಡ್ಡ್ಡಾಯಿಮಜಲು, ಲೋಕಯ ಪೂಜಾರಿ ಕಂಗಿತ್ತಿಲು, ಗೌರವಾಧ್ಯಕ್ಷ ಪೂವಪ್ಪ ಪೂಜಾರಿ ಪರನೀರು, ಬೆಳ್ತಂಗಡಿ ಬಿಲ್ಲವ ಸಂಘದ ಪ್ರ. ಕಾರ್ಯದರ್ಶಿ ನಿತೀಶ್ ಹೆಚ್. ನಿರ್ದೇಶಕ ವಿಶ್ವನಾಥ್ ಪೂಜಾರಿ ದಡ್ಡಲಪಲ್ಕೆ, ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಗಿರೀಶ್ ಕೆ. ಎಸ್, ದೇಲಂಪುರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತೀಶ್ ಚಿಗುರು, ಸಂಘದ ಸಲಹೆಗಾರರಾದ ರಾಜೇಶ್ ಪೂಜಾರಿ ಮೂಡುಕೋಡಿ, ಕೊಡುಗೈದಾನಿ ನವೀನ್ ಪಚ್ಚೇರಿ, ಯುವ ಉದ್ಯಮಿಗಳಾದ ನಾರಾಯಣ ಪೂಜಾರಿ ಪೊಸಲಾಯಿ, ರಕ್ಷಿತ್ ಬಜಿರೆ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಹರೀಶ್ ಪಿ ಎಸ್ ,ಸುನೀಲ್ ಬಜಿರೆ, ವೇಣೂರು ಸಿಎ ಬ್ಯಾಂಕ್ ನಿರ್ದೇಶಕ ಪ್ರವೀಣ್ ಪೂಜಾರಿ ಪೆರಿಯೊಟ್ಟು , ಬಿಲ್ಲವ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಸಲಹೆಗಾರರು, ಗ್ರಾಮ ಪಂಚಾಯತ್ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರತಿ ಗ್ರಾಮದಲ್ಲಿಯೂ ಸಮಾಜ ಬಂಧುಗಳ ಸಮಾಲೋಚನೆ ಸಭೆ ನಡೆದು ಸಮುದಾಯ ಭವನದ ರಚನೆಗೆ ಸಹಕಾರ ಯಾಚನೆಗೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಂಘಕ್ಕೆ ತನ್ನ ಸ್ವಂತ ಖರ್ಚಿನಿಂದ ಬೋರ್ವೆಲ್ ಕೊರೆಸುವ ವಾಗ್ದಾನ ನೀಡಿದ ಸೌದಿ ಅರೇಬಿಯಾ ಬಿಲ್ಲವ ಸಂಘದ ಉಪಾಧ್ಯಕ್ಷ ಗಿರೀಶ್ ಪೂಜಾರಿ ನ್ಯೂಹಲೆಕ್ಕಿ ಮೂಡುಕೋಡಿ ಅವರ ಸೇವೆಯನ್ನು ಶ್ಲಾಘಿಸಲಾಯಿತು. ಸಂಘದ ಪ್ರ. ಕಾರ್ಯದರ್ಶಿ ರಾಕೇಶ್ ಕುಮಾರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸತೀಶ್ ಪೂಜಾರಿ ಉಜಿರ್ದಡ್ದ ಧನ್ಯವಾದವಿತ್ತರು.

Related posts

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya

ಆನೆ ಹಾವಳಿ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಜಯರಾಮ ನೆಲ್ಲಿತ್ತಾಯ ರವರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Suddi Udaya

ಮೈಸೂರಿನಲ್ಲಿ ಬಾಲಕಿಯರ ವಿಭಾಗದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ: ಜಿದ್ದಾಜಿದ್ದಿನ ಪಂದ್ಯಾವಳಿಯಲ್ಲಿ ಸತತ 9ನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಂದಾರು ಶಾಲೆ

Suddi Udaya

ನಾಲ್ಕೂರು: ಸೂಳಬೆಟ್ಟು ಶ್ರೀ ಕೃಷ್ಣ ಕುಣಿತ ಭಜನಾ ಮಂಡಳಿ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ಮಡಂತ್ಯಾರು ಗ್ರಾ.ಪಂ. ನ ಪ್ರಥಮ ಹಂತದ ಗ್ರಾಮ ಸಭೆ

Suddi Udaya

ಕಳೆಂಜ ದೇವಸ್ಥಾನದಲ್ಲಿ ಬೃಹತ್ ನೇಜಿ ನಾಟಿ ಕಾರ್ಯಕ್ರಮ

Suddi Udaya
error: Content is protected !!