ಬೆಳ್ತಂಗಡಿ : ಕರ್ನಾಟಕ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಪ್ರಾಥಮಿಕ ವಿಭಾಗದ ಎರಡು
ಸಂಘಗಳ ಪೈಕಿ ರಾಜ್ಯದ ಎರಡನೇ ಅತಿದೊಡ್ಡ ಸಂಘ ಕರ್ನಾಟಕ ರಾಜ್ಯ (6-8)ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ರಿ) ಬೆಂಗಳೂರು. ಇದರ ತಾಲೂಕು ಘಟಕ -ಬೆಳ್ತಂಗಡಿಗೆ 2026-31 ರ ಅವಧಿಗೆ ಸಂಘದ ರಾಜ್ಯ ಚುನಾವಣಾ ಅಧಿಕಾರಿಗಳು ಸೆ. 20 ರಂದು ಚುನಾವಣಾ ಅಧಿಸೂಚನೆ ಹೊರಡಿಸಿದ್ದರು.
ಚುನಾವಣಾ ಮಾರ್ಗಸೂಚಿ ಹಾಗೂ ಸಂಘದ ಬೈಲಾ ನಿಯಮಾವಳಿಗಳಂತೆ ಬೆಳ್ತಂಗಡಿ ತಾಲೂಕಿನಲ್ಲಿ 180 ಕ್ಕೂ ಹೆಚ್ಚು ಜಿಪಿಟಿ ಶಿಕ್ಷಕ ಮತದಾರರಿದ್ದ ಕಾರಣ 13 ಮಂದಿ ನಿರ್ದೇಶಕರ ಸ್ಥಾನಗಳು ಲಭ್ಯವಾಗಿದ್ದು, ಆ ಸ್ಥಾನಗಳಿಗೆ ಸೆ.27 ರಂದು ಚುನಾವಣೆ ನಡೆದು ಎಲ್ಲಾ 13 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆ ಪೈಕಿ ರವಿಕುಮಾರ್ ಬಿ.ಆರ್ ಉಂಬೆಟ್ಟು ಶಾಲೆ, ಅಭಿಷೇಕ್ ಆರ್ ಎನ್ ಸರಳಿಕಟ್ಟೆ ಶಾಲೆ, ಶುಭಾ ಕೆ ಪಿ.ಎಂ.ಶ್ರೀ ಮಾದರಿ ಶಾಲೆ, ಉಷಾ ಕೆ ಕರ್ನೋಡಿ ಶಾಲೆ, ಸತೀಶಾಚಾರ್ ಬರಂಗಾಯ ಶಾಲೆ, ಪ್ರಭಾಕರ ಜಿ ಶಾಲೆತ್ತಡ್ಕ ಶಾಲೆ, ಕವನ್ ಕುಮಾರ್ ಅಂಡಿಂಜೆ ಶಾಲೆ, ಹರೀಶ್ ವಿ.ಜಿ ಪರಿಯೊಟ್ಟು ಶಾಲೆ, ಮಲ್ಲಿಕಾರ್ಜುನ್ ಆರ್ ಬಳಂಜ ಶಾಲೆ, ರಂಗನಾಥ್ ಬಿ.ಕೆ ಕಜಕ ಶಾಲೆ, ಸಚಿನ್ ಬೇಗೂರು ತಿಮ್ಮಣ್ಣ ಬೆಟ್ಟು ಶಾಲೆ, ಗಣೇಶ್ ಹಳೆಪೇಟೆ ಉಜಿರೆ ಶಾಲೆ ಹಾಗೂ ಯೋಗೇಶ ಹೆಚ್ ಆರ್ ಮಾಯ ಶಾಲೆ ಇವರೆಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇವರಿಗೆ ತಾಲೂಕು ಚುನಾವಣಾ ಅಧಿಕಾರಿಗಳಾಗಿದ್ದ ಸುರೇಶ್ ಎಂ ಇವರು ಅವಿರೋಧವಾಗಿ ಆಯ್ಕೆಯಾದ ಪ್ರಮಾಣ ಪತ್ರ ನೀಡಿದರು.












