23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತೆಕ್ಕಾರು ಇಬ್ಬನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

ತೆಕ್ಕಾರು ಇಬ್ಬನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷೆ ಪದ್ಮಾವತಿ ಹೆಚ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೀನ ಎ ಗ್ರಾಮ ಪಂಚಾಯಿತಿಯಿಂದ ಸಿಗುವ ಸೌಲಭ್ಯದ ಬಗ್ಗೆ ಮತ್ತು ಹೊಸ ಸ್ವ ಸಹಾಯ ಸಂಘ ರಚನೆ ಆಗಲಿ ಎಂದು ಹಾರೈಸಿದರು,. ತಾಲೂಕು ಆರೋಗ್ಯ ಅಧಿಕಾರಿ ಅಮ್ಮಿ ಎ ಇವರು ಮಹಿಳೆಯರಿಗೆ ಆರೋಗ್ಯದ ಬಗ್ಗೆ, ಗರ್ಭಕೋಶ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಉಷಾ ಒಕ್ಕೂಟದ ವಾರ್ಷಿಕ ವರದಿ ಹಾಗೂ ಜಮಾ ಖರ್ಚಿನ ವರದಿಯನ್ನು ಪವಿತ್ರ ಮಂಡಿಸಿ ಸರ್ವ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು .

ಸಂಜೀವಿನಿ ಯೋಜನೆಯ ಉದ್ದೇಶದ ಬಗ್ಗೆ ಸವಿವರವಾಗಿ ವಲಯ ಮೇಲ್ವಿಚಾರಕರು ಮಾಹಿತಿ ನೀಡಿದರು. ಮುಂದೆ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್ ನಡೆಸಿಕೊಟ್ಟರು. ಉತ್ತಮ ಸಂಘವನ್ನು ಗುರುತಿಸಲಾಯಿತು. ಪುಷ್ಪಗುಚ್ಚ ತಂದ ಸಂಘದ ಸದಸ್ಯರಿಗೆ ಬಹುಮಾನ ವಿತರಣೆ ಮಾಡಲಾಯಿತು.ನಿರ್ಗಮಿತ ಪದಾಧಿಕಾರಿಗಳನ್ನು ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೀನ ಎ,ತಾಲೂಕು ಅರೋಗ್ಯ ಅಧಿಕಾರಿ ಅಮ್ಮಿ ಎ ಹಾಗೂ ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್ ಇವರಿಗೆ ಒಕ್ಕೂಟದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಅಧ್ಯಕ್ಷರಾದ ಪದ್ಮಾವತಿ ಹಚ್ ಇವರು ತಮ್ಮ ಅನುಭವಗಳನ್ನು ಹಂಚಿಕೊಂಡು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಗುರುಕೃಪಾ ಸಂಜೀವಿನಿ ಸಂಘದ ಸದಸ್ಯರಾದ ಮಮತಾ ಪ್ರಾರ್ಥಿಸಿ, ಕೃಷಿ ಸಖಿ ದಿವ್ಯಾ ಸ್ವಾಗತಿಸಿದರು. ಎಲ್ ಸಿ ಆರ್ ಪಿ ಲೀಲಾವತಿ ಧನ್ಯವಾದ ನೀಡಿದರು. ಒಕ್ಕೂಟದ ಸಿಬ್ಬಂದಿಯಾದ ಪಶು ಸಖಿ ವಸಂತಿ ಬಿ ಒಕ್ಕೂಟದ ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು, ಕಾರ್ಯಕ್ರಮಕ್ಕೆ ಸಹಕರಿಸಿದರು. ಎಲ್ಲಾ ಸಂಘದಿಂದ ಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಮುಗ್ಗ ಗುತ್ತು ಮನೆಯಲ್ಲಿ ವೈಭವದ ನವರಾತ್ರಿ ಪೂಜೆ

Suddi Udaya

ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಅನುಗ್ರಹ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Suddi Udaya

ಪಟ್ರಮೆ: ಕೆರೆಮನೆ ನಿವಾಸಿ ಸದಾಶಿವ ನಿಧನ

Suddi Udaya

ಬೆಳ್ತಂಗಡಿಯಲ್ಲಿ ಸಮಾನ ಮನಸ್ಕರೊಂದಿಗೆ ಸಂವಾದ

Suddi Udaya

ಜೇಸಿ ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ: ಸ್ಥಾಪಕ ಚೇರ್ಮನ್ ಆಗಿ ಅಭಿನಂದನ್ ಹರೀಶ್ ಪದ ಸ್ವೀಕಾರ

Suddi Udaya

ಗುರುವಾಯನಕೆರೆ ಪ್ರಾ.ಕೃ.ಪ.ಸ. ಸಂಘದಿಂದ ಭಗೀರಥ ಜಿ. ರವರಿಗೆ ಸನ್ಮಾನ

Suddi Udaya
error: Content is protected !!