23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸಂಸದ ಕ್ಯಾ. ಬ್ರಿಜೇಶ್ ಚೌಟರಿಂದ ಶಿಶಿಲದಲ್ಲಿ ರೂ. 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಹರ್ಷಿ ವಾಲ್ಮೀಕಿ ಆದಿವಾಸಿ ಶಾಲೆಯ ಉದ್ಘಾಟನೆ

ಬೆಳ್ತಂಗಡಿ: ಶಿಶಿಲದಲ್ಲಿ ರೂ.4 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಾಲ್ಮೀಕಿ ಆಶ್ರಮ ಶಾಲೆಯನ್ನು ಸೆ.29 ರಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.

ಸಭಾ ಕಾರ್ಯಕ್ರಮದಲ್ಲಿ ಹತ್ಯಡ್ಕ ಪ್ಯಾಕ್ಸ್ ಅಧ್ಯಕ್ಷ ರಾಘವೇಂದ್ರ ನಾಯಕ್, ಧರ್ಮಸ್ಥಳ ಗ್ರಾ. ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಮಲೆಕುಡಿಯರ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಎಳನೀರು, ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್, ವೈಕುಂಠಪುರ ದುರ್ಗಾಪರಮೇಶ್ವರಿ ಯುವಕ ಮಂಡಲ ಅಧ್ಯಕ್ಷ ಹರೀಶ್ ಕೊಳನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಪ.ಪಂ ಮಾಜಿ ಸದಸ್ಯ ಶರತ್, ಮುಂಡಾಜೆ ಪ್ಯಾಕ್ಸ್ ಅಧ್ಯಕ್ಷ ಪ್ರಕಾಶ್ ನಾರಾಯಣ್ ಚಾರ್ಮಾಡಿ, ತಾ.ಪಂ ಮಾಜಿ ಸದಸ್ಯ ಕೊರಗಪ್ಪ ಗೌಡ, ಪ್ರಮುಖರಾದ ಸೀತಾರಾಮ ಬೆಳಾಲು, ಬಾಲಕೃಷ್ಣ ನೈಮಿಷ, ಯಶವಂತ್, ರಾಜೇಶ್ ಮಲೆಕುಡಿಯ, ಬಾಲಕೃಷ್ಣ ಮುಗೇರಡ್ಕ, ಚಂದ್ರಕಾಂತ್ ನಿಡ್ಡಾಜೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕರುಣಾಕರ ಶಿಶಿಲ ಸ್ವಾಗತಿಸಿ, ರಮೇಶ್ ಬೈರಕಟ್ಟ ನಿರೂಪಿಸಿದರು. ಆಶ್ರಮ ಶಾಲೆಯ ಮಕ್ಕಳೊಂದಿಗೆ ಸಂಸದರು ಹಾಗೂ ಶಾಸಕರು ಉಪಹಾರ ಸೇವಿಸಿದರು.

Related posts

ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ನಲ್ಲಿ ಭಜನಾ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ

Suddi Udaya

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಕಲರವ-2025 ಕಾರ್ಯಕ್ರಮ ಉದ್ಘಾಟನೆ

Suddi Udaya

ಇಚಿಲಂಪಾಡಿ‌ ನಿವಾಸಿ ಜಯಂತ್ ಟಿ. ಧರ್ಮಸ್ಥಳ ಠಾಣೆಗೆ ದೂರು: ಪ್ರಕರಣ ದಾಖಲು

Suddi Udaya

ಕೊಯ್ಯೂರು: ಹರ್ಪಳದಲ್ಲಿ ಅಡ್ಡಲಾಗಿರುವ ಮರವನ್ನು ಸರಿಸಿ ದಾರಿಯನ್ನು ಸರಿಪಡಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಸೌಜನ್ಯ ಅತ್ಯಾಚಾರ ಪ್ರಕರಣ: ನೈಜ ಆರೋಪಿಗಳ ಪತ್ತೆಗಾಗಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅವಹೇಳನ ಮಾಡದಂತೆ ಮೇಲಂತಬೆಟ್ಟು ಶ್ರೀ ಭಗವತಿ ಅಮ್ಮ ದೇವಸ್ಥಾನದಲ್ಲಿ ಪ್ರಾರ್ಥನೆ

Suddi Udaya
error: Content is protected !!