31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ತಿಂಗಳ ತಿರುಳು ಕಾರ್ಯಕ್ರಮ; ಸೀತಾಂತರಂಗ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನಲ್ಲಿ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ಮತ್ತು ಕನ್ನಡ ವಿಭಾಗದ ಸಹಯೋಗದೊಂದಿಗೆ ಪ್ರಸ್ತುತ ಪಡಿಸಿದ ತಿಂಗಳ ತಿರುಳು ಕಾರ್ಯಕ್ರಮ ಸೀತಾಂತರಂಗ ವೈಭವದಿಂದ ನಡೆಯಿತು

ಉದ್ಘಾಟನೆಯನ್ನು ಎಸ್.ಡಿ.ಎಂ (ಸ್ವಾಯತ್ತ) ಕಾಲೇಜು ಪ್ರಾಂಶುಪಾಲರು ಪ್ರೊ. ವಿಶ್ವನಾಥ ಪಿ. ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಪ್ರೊ. ಪವನ್ ಕಿರಣಕೆರೆ ಪ್ರಸಿದ್ಧ ಯಕ್ಷಗಾನ ಪ್ರಸಂಗಕರ್ತರು, ಅರ್ಥಧಾರಿಗಳು, ಪ್ರಾಂಶುಪಾಲರು (ಆಸೆಮ್ಸ್ ಶಿಕ್ಷಣ ಸಂಸ್ಥೆ, ಕಲ್ಮಾಡಿ, ಉಡುಪಿ), ಎಸ್.ಡಿ.ಎಂ ಕಾಲೇಜು ಕುಲಸಚಿವರು ಪ್ರೊ. ಶ್ರೀಧರ್ ಭಟ್ , ಕನ್ನಡ ವಿಭಾಗ ಮುಖ್ಯಸ್ಥರು ಡಾ. ಬೋಜಮ್ಮ ಕೆ. ಎನ್ , ಹಿರಿಯ ಯಕ್ಷಗಾನ ಸಂಘಟಕರು ಭುಜಬಲಿ ಧರ್ಮಸ್ಥಳ , ಕನ್ನಡ ಉಪನ್ಯಾಸಕ ಡಾ. ಶ್ರೀನಾಥ್, ಎಸ್.ಡಿ.ಎಂ ಕಲಾಕೇಂದ್ರ ಮುಖ್ಯಸ್ಥರು ತೃಪ್ತ ಕುಮಾರ್ ಜೈನ್ , ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಮಾನವ ಸಂಪನ್ಮೂಲ ವ್ಯವಸ್ಥಾಪಕ ಪುನೀತ್, ಸಂಸ್ಕೃತ ಉಪನ್ಯಾಸಕ ಶ್ರೇಯಸ್ ಪಾಳಂದೆರು, ಕನ್ನಡ ಉಪನ್ಯಾಸಕ ರವಿಶಂಕರ್ ಉಪಸ್ಥಿತರಿದ್ದರು.

ಅನನ್ಯ, ಯಶ್ಮಿತ, ಮನಸ್ವಿ ಪ್ರಾರ್ಥಿಸಿ, ಸಹನ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಮುಖ್ಯಸ್ಥರು ಡಾ. ನಾಗಣ್ಣ ಡಿ. ಎ ಸ್ವಾಗತಿಸಿದರು. ಎಸ್.ಡಿ.ಎಂ ಕಲಾಕೇಂದ್ರ ಯಕ್ಷಗಾನ ತರಬೇತುದಾರರು ಅರುಣ್ ಕುಮಾರ್ ಧರ್ಮಸ್ಥಳ ಧನ್ಯವಾದವಿತ್ತರು.

ಈ ವೇಳೆ “ಸೀತಾಂತರಂಗ” ಅಂದರೆ ಸೀತೆಯ ಅಂತರಂಗದ ದರ್ಶನವನ್ನು ಪ್ರೊ . ಪವನ್ ಕಿರಣಕೆರೆ ಯವರು ಸರಳ ಸುಂದರವಾಗಿ ಪ್ರಸ್ತುತ ಪಡಿಸಿದರು.

Related posts

ಸೆ.14: ಇಂದಬೆಟ್ಟು-ನಾವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ಮುಂಡಾಜೆ ಮಾಲತಿ ಪ್ರಭು ನಿಧನ

Suddi Udaya

ಎಸ್‌ಡಿಎಂ ಪ.ಪೂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ದೀಕ್ಷಾ ಸಮಾರಂಭ ಮತ್ತು ಸಂಸ್ಥಾಪನ ದಿನಾಚರಣೆ

Suddi Udaya

ಕುಣಿತ ಭಜನೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಭಜಕರ ಬೃಹತ್ ಸಮಾವೇಶ: ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಖಂಡನಾ ಮೆರವಣಿಗೆ

Suddi Udaya

ಉದಯವಾಣಿ ಪತ್ರಿಕೆಯ ಮಡಂತ್ಯಾರು ವಲಯದ ಬಿಡಿ ವರದಿಗಾರ ರಾಗಿ ಕೆ.ಎನ್ ಗೌಡ ನೇಮಕ

Suddi Udaya

ನೆರಿಯ ಒಂಟಿ ಸಲಗ ಕಾರಿನ ಮೇಲೆ ದಾಳಿ ಪ್ರಕರಣ: ಇಬ್ಬರಿಗೆ ಗಾಯ ಐದು ಮಂದಿ ಪ್ರಾಣಾಪಾಯದಿಂದ ಪಾರು

Suddi Udaya
error: Content is protected !!