31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಸ್ತೂರಿರಂಗನ್ ವರದಿ ಭಾದಿತ ಗ್ರಾಮಗಳನ್ನು ಅರಣ್ಯ ಗ್ರಾಮ ಮತ್ತು ಕಂದಾಯ ಗ್ರಾಮಗಳಾಗಿ ವಿಭಜಿಸುವಂತೆ ಶೈಲೇಶ್ ಆರ್. ಜೆ ರವರಿಂದ ಮುಖ್ಯಮಂತ್ರಿಗೆ ಮನವಿ

ಬೆಳ್ತಂಗಡಿ: ಕಸ್ತೂರಿರಂಗನ್ ವರದಿ ಭಾದಿತ ಗ್ರಾಮಗಳನ್ನು ಅರಣ್ಯ ಗ್ರಾಮ ಮತ್ತು ಕಂದಾಯ ಗ್ರಾಮಗಳಾಗಿ ವಿಭಜಿಸಿ ಜನರ ಆತಂಕವನ್ನು ನಿವಾರಿಸುವಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರಿಗೆ ತುಳುನಾಡ್ ಒಕ್ಕೂಟದ ಸಂಸ್ಥಾಪಕ ಶೈಲೇಶ್ ಆರ್. ಜೆ. ಮನವಿ ಸಲ್ಲಿಸಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದ ಇಕ್ಕೆಲಗಳಲ್ಲಿ ತಲೆತಲಾಂತರ ಗಳಿಂದ ಜನರು ಕೃಷಿ ಮಾಡಿಕೊಂಡು ಬದುಕುತ್ತಿದ್ದು. ಇದೀಗ ಕಸ್ತೂರಿ ರಂಗನ್ ವರದಿಯ ಮೂಲಕ ಈ ಪ್ರದೇಶಗಳ ಜನರು ಬದುಕನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಪಶ್ಚಿಮ ಘಟ್ಟದಲ್ಲಿ ಇರುವ ಗ್ರಾಮಗಳು ಅರಣ್ಯ ಪ್ರದೇಶವನ್ನು ಒಳಗೊಂಡು ಮತ್ತು ಜನವಸತಿ ಹಾಗೂ ಕೃಷಿ ಭೂಮಿಯನ್ನು ಒಳಗೊಂಡು ರಚಿತವಾದ ಕಂದಾಯ ಗ್ರಾಮಗಳಾಗಿವೆ. ಈ ಪ್ರದೇಶದ ಜನರು ನಿರಂತರವಾಗಿ ಅರಣ್ಯ ಕಾಯ್ದೆಗಳಿಂದಾಗಿ ರಸ್ತೆ,ವಿದ್ಯುತ್, ಮನೆ ನಿರ್ಮಾಣ ಸೇರಿದಂತೆ ಬದುಕಿನ ಅವಶ್ಯಕತೆಗಳಿಗೆ ಆತಂಕಿತರಾಗಿದ್ದಾರೆ.

ಆದುದರಿಂದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳನ್ನೊಳಗೊಂಡ ಗ್ರಾಮದ ಭಾಗವನ್ನು ಅರಣ್ಯ ಗ್ರಾಮವೆಂದು, ಜನವಸತಿ ಹಾಗೂ ಕೃಷಿ ಭೂಮಿಯನ್ನು ಒಳಗೊಂಡ ಗ್ರಾಮದ ಭಾಗವನ್ನು ಕಂದಾಯ ಗ್ರಾಮವೆಂದು ಪ್ರತ್ಯೇಕ ಗ್ರಾಮಗಳಾಗಿ ವಿಭಜಿಸಿ ಕಸ್ತೂರಿ ರಂಗನ್ ವರದಿಯ ಆತಂಕದಿಂದ ಜನರನ್ನು ರಕ್ಷಿಸಬೇಕು.ವಿಭಜಿತ ಅರಣ್ಯ ಗ್ರಾಮವನ್ನು ಕಸ್ತೂರಿ ರಂಗನ್ ವರದಿ ಅನುಷ್ಠಾನದ ವ್ಯಾಪ್ತಿಯಲ್ಲಿ ಬರುವಂತೆ ಮತ್ತು ವಿಭಜಿತ ಕಂದಾಯ ಗ್ರಾಮವನ್ನು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಿಂದ ಹೊರಗಿರಿಸಬೇಕು ಹಾಗೂ ಈ ರೀತಿ ವಿಭಜಿಸಿದ್ದಲ್ಲಿ ಭವಿಷ್ಯದಲ್ಲಿ ಬರುವ ಎಲ್ಲಾ ಅರಣ್ಯ ಕಾಯ್ದೆಗಳಿಂದ ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳು ಹೊರಗುಳಿಯುತ್ತವೆ ಮತ್ತು ಜನರು ನೆಮ್ಮದಿಯಿಂದ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬದುಕಲು ಅನುಕೂಲವಾಗುತ್ತದೆ. ಈ ವಿಷಯವನ್ನು ಪರಿಶೀಲಿಸಿ ಸೂಕ್ತ ರೀತಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಇಕ್ಕೆಲಗಳಲ್ಲಿ ವಾಸಿಸುತ್ತಿರುವ ಜನರಿಗೆ ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಕಾಯ್ದೆಗಳಿಂದ ರಕ್ಷಣೆ ಒದಗಿಸಬೇಕಾಗಿ ವಿನಂತಿಸಿದ್ದಾರೆ.

Related posts

ಗೇರುಕಟ್ಟೆ ಸಮೀಪದ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನ ವರ್ಷಂಪ್ರತಿ ನಡೆಯುವ ಉರೂಸ್ ಸಮಾರಂಭದ ಪೋಸ್ಟರ್ ಬಿಡುಗಡೆ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 13504 ಅಂತರದಿಂದ ಮುನ್ನಡೆ

Suddi Udaya

ಸಂತ ತೆರೇಸಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ದ್ರವ್ಯ ಜಾಗೃತಿ ಕಾರ್ಯಾಗಾರ

Suddi Udaya

ಮಡಂತ್ಯಾರು ಸಿ ಎ ಬ್ಯಾಂಕಿನ ಮಾಜಿ ಅಧ್ಯಕ್ಷ ಮಹಾವೀರ ಬಲ್ಲಾಳ್ ನಿಧನ

Suddi Udaya

ಕಿಲ್ಲೂರು ನಿವಾಸಿ ಗೀತಾ ಹೋಟೆಲ್ ಮಾಲಕ ಶಿವಾನಂದ ಪೂಜಾರಿ ನಿಧನ

Suddi Udaya
error: Content is protected !!