31.2 C
ಪುತ್ತೂರು, ಬೆಳ್ತಂಗಡಿ
September 30, 2026
ಸಂಘ-ಸಂಸ್ಥೆಗಳು

ಜೆಸಿಐ ಮಡಂತ್ಯಾರಿನ ಜೇಸಿ ಸಪ್ತಾಹ ಉದ್ಘಾಟನೆ

ಜೆಸಿಐ ಮಡಂತ್ಯಾರಿನ 36 ನೇ ಸಾಲಿನ ವರ್ಣರಂಜಿತ ಜೇಸಿ ಸಪ್ತಾಹ ಶ್ರೀ ಗಣಪತಿ ಮಂಟಪ ಮಡಂತ್ಯಾರಿನಲ್ಲಿ ಉದ್ಘಾಟನೆಗೊಂಡಿತು. ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರಯ, ವರ್ತಕ ಬಂಧು ಸಹಕಾರಿ ಬ್ಯಾಂಕ್ ನ ಅಧ್ಯಕ್ಷರೂ ಆದ ಜೇಸಿ ಜಯಂತ್ ಶೆಟ್ಟಿ ಜೇಸಿ ಸಪ್ತಾಹವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.

ಗ್ರಾಮ ಪಂಚಾಯತ್ ಮಡಂತ್ಯಾರು ಮತ್ತು ಗ್ರಾಮ ಪಂಚಾಯತ್ ಮಾಲಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಮಡಂತ್ಯಾರು ವಲಯ), ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ. ಯುನಿಟ್, ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು, ಎನ್.ಎಸ್.ಎಸ್.ರೋವರ್ಸ್ ರೇಂಜರ್ ಮತ್ತು ರೆಡ್ ಕ್ರಾಸ್ ಯುನಿಟ್, ಸರಕಾರಿ ಪ್ರಥಮದರ್ಜೆ ಕಾಲೇಜು ಪುಂಜಾಲಕಟ್ಟೆ, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಮಡಂತ್ಯಾರು, ಆರಕ್ಷಕ ಠಾಣೆ ಪುಂಜಾಲಕಟ್ಟೆ, ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ, ಮಡಂತ್ಯಾರು, ವರ್ತಕ ಬಂಧು ಸಹಕಾರಿ ಬ್ಯಾಂಕ್ ಮಡಂತ್ಯಾರು, ಶೌರ್ಯ ವಿಪತ್ತು ನಿರ್ವಹಣಾ ಘಟಕ, ಮಡಂತ್ಯಾರು ಮತ್ತು ಮಚ್ಚಿನ ಘಟಕ (ಮಡಂತ್ಯಾರು ವಲಯ) ಇವರ ಸಹಯೋಗದೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನ, ರ್ಯಾಲಿ, ಅಪಘಾತ ತಡೆ ಮಾಹಿತಿ ಕಾರ್ಯಕ್ರಮ, ಮಾನವ ಸರಪಳಿ ನಡೆಯಿತು.

ಜೆಸಿಐ ಮಡಂತ್ಯಾರಿನ ಅಧ್ಯಕ್ಷರಾದ ಜೇಸಿ ಸಾಯಿಸುಮಾ ನಾವಡ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸರ್ವರನ್ನೂ ಸ್ವಾಗತಿಸಿದರು. ಜೇಸಿ ಭವ್ಯ ಟಿ ಪೈ ಜೇಸಿ ವಾಣಿಯನ್ನು ವಾಚಿಸಿದರು. ಆರಕ್ಷಕ ಠಾಣೆ ಪುಂಜಾಲಕಟ್ಟೆಯ ಎ.ಎಸ್.ಐ ಶ್ರೀ ಚಿದಾನಂದ ಅವರು ಅಪಘಾತ ತಡೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಮಡಂತ್ಯಾರಿನ ಪಿ.ಡಿ.ಒ. ಶ್ರೀ ಶ್ರೀನಿವಾಸ್, ಗ್ರಾಮ ಪಂಚಾಯತ್ ಮಾಲಾಡಿಯ ಪಿ.ಡಿ.ಒ ಶ್ರೀ ರಾಜಶೇಖರ್ ರೈ, ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ಎನ್.ಸಿ.ಸಿ. ಆಫೀಸರ್ ಆಗಿರುವಂತಹ ಲೆಫ್ಟಿನೆಂಟ್ ಆಲ್ವಿನ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ವಚ್ಛತಾ ಜಾಗೃತಿಯ ಕುರಿತು ತಿಳಿಸಿದರು. ವೇದಿಕೆಯಲ್ಲಿ ಜೆಸಿಐ ಮಡಂತ್ಯಾರಿನ ನಿಕಟ ಪೂರ್ವಾಧ್ಯಕ್ಷರು ಹಾಗೂ ಜೆಸಿಐ ಭಾರತ ವಲಯ ಸಂಯೋಜಕರಾದ ಜೇಸಿ ಅಮಿತಾ ಅಶೋಕ್, ಹಾಲು ಉತ್ಪಾದಜರ ಸಂಘ ಮಡಂತ್ಯಾರಿನ ಅಧ್ಯಕ್ಷರಾದ ಶ್ರೀ ರವಿರಾಜ್ ಶೆಟ್ಟಿ, ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ಎನ್.ಎಸ್.ಎಸ್. ಅಧಿಕಾರಿಯಾಗಿರುವ ಶ್ರೀ ಪ್ರಶಾಂತ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಶ್ರೀ ಕೇಶವ, ಜೆಸಿಐ ಮಡಂತ್ಯಾರಿನ ಕಾರ್ಯದರ್ಶಿ ಜೇಸಿ ಯತೀಶ್ ರೈ, ಜೇಸಿ ಸಪ್ತಾಹದ ಸಂಯೋಜಕರಾದ ಜೇಸಿ ಪ್ರಶಾಂತ್ ಹಟ್ಟತ್ತೋಡಿ, ಮಹಿಳಾ ಜೇಸಿ ಸಂಯೋಜಕರಾದ ಜೇಸಿ ಭವ್ಯ ಟಿ. ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೆಸಿಐ ಮಡಂತ್ಯಾರಿನ ಪೂರ್ವಾಧ್ಯಕ್ಷರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಜೇಸಿ ಸದಸ್ಯರು, ಜೇಸಿ ಬಂಧುಗಳು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೇಸಿ ಯತೀಶ್ ರೈ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸುಸಂಪನ್ನಗೊಂಡಿತು.

— ಜೇಸಿ ಸಾಯಿಸುಮಾ ಎಂ ನಾವಡ
ಅಧ್ಯಕ್ಷರು
ಜೆಸಿಐ ಮಡಂತ್ಯಾರು

Related posts

ಅಭಿವೃದ್ದಿ ಹೊಂದುತ್ತಿರುವ ಉಜಿರೆ ಹಳೆಪೇಟೆ ಸರಕಾರಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ ಶ್ರಮದಾನ

Suddi Udaya

ಎ.18: ಮುಂಡಾಜೆಯಲ್ಲಿ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಮತ್ತು ಶಟಲ್ ಬ್ಯಾಡ್‌ಮಿಂಟನ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ತ್ರೋಬಾಲ್ ಪಂದ್ಯಾಟ ಕ್ರೈಸ್ಟ್‌ ಟ್ರೋಫಿ 2026

Suddi Udaya

ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ ಗೃಹ ರಕ್ಷಕ ಘಟಕದಸಿಬ್ಬಂದಿಗ ಳಿಂದ ಸ್ವಚ್ಛತಾ ಕಾರ್ಯಕ್ರಮ ಮೂಲಕ ಗಾಂಧಿ ಜಯಂತಿ ಆಚರಣೆ

Suddi Udaya

ಎಸ್‌ಡಿಪಿಐ ವತಿಯಿಂದ ಪೆರಾಲ್ದರಕಟ್ಟೆಯಲ್ಲಿ ಕಂಡಡ್ ಒಂಜಿದಿನ ಕ್ರೀಡಾಕೂಟ.

Suddi Udaya

ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಂದ ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆಯ ಆಮಂತ್ರಣ ಪತ್ರ ಬಿಡುಗಡೆ

Suddi Udaya
error: Content is protected !!