31.2 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೊಚ್ಚ ಪ್ರಕಾಶ್ ಶೆಟ್ಟಿ ರವರಿಗೆ ಉಜಿರೆ ನಾಗರಿಕರಿಂದ ಅಭಿವಂದನ ಕಾರ್ಯಕ್ರಮ “ಪ್ರಕಾಶಾಭಿವಂದನಮ್” : 20ಕ್ಕೂ ಅಧಿಕ ಸಂಘ ಸಂಸ್ಥೆಗಳಿಂದ ಗೌರವ

ಉಜಿರೆ: ನೊಚ್ಚ ಶ್ರೀ ಪ್ರಕಾಶ್ ಶೆಟ್ಟಿ ಅಭಿವಂದನ ಸಮಿತಿ, ಉಜಿರೆ ಗ್ರಾಮ ಪಂಚಾಯತ್ ಉಜಿರೆ ವತಿಯಿಂದ ಉಜಿರೆ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ನೊಚ್ಚ ಪ್ರಕಾಶ್ ಶೆಟ್ಟಿಯವರಿಗೆ ಉಜಿರೆ ನಾಗರಿಕರಿಂದ ಅಭಿವಂದನ ಕಾರ್ಯಕ್ರಮ “ಪ್ರಕಾಶಾಭಿವಂದನಮ್” ಸೆ.30ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಜರುಗಿತು.

ಅಧ್ಯಕ್ಷತೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರು, ನೊಚ್ಚ ಶ್ರೀ ಪ್ರಕಾಶ ಶೆಟ್ಟಿ ಅಭಿವಂದನ ಸಮಿತಿ ಅಧ್ಯಕ್ಷರಾದ ಯು. ಶರತ್‌ ಕೃಷ್ಣ ಪಡುವೆಟ್ನಾಯ ವಹಿಸಿದ್ದರು.

ವಿಧಾನಸಭಾ ಉಪ ಸಭಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ಎನ್. ವಿಜಯಪ್ರಕಾಶ ಅವರು ‘ಪ್ರಕಾಶ ಪರ್ವ’
ಕೃತಿ ಬಿಡುಗಡೆಗೊಳಿಸಿದರು. ನೊಚ್ಚ ಶ್ರೀ ಪ್ರಕಾಶ್ ಶೆಟ್ಟಿ ಅಭಿವಂದನ ಸಮಿತಿ ಉಜಿರೆ ಮತ್ತು ಗ್ರಾಮ ಪಂಚಾಯತ್ ಉಜಿರೆ ವತಿಯಿಂದ ನೊಚ್ಚ ಪ್ರಕಾಶ್ ಶೆಟ್ಟಿ ಮತ್ತು ಧರ್ಮಪತ್ನಿ ಶ್ರೀಮತಿ ಪ್ರವೀಣಾ ದಂಪತಿಗಳನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಬಳಿಕ 20ಕ್ಕೂ ಅಧಿಕ ಸಂಘ ಸಂಸ್ಥೆಗಳು ನೊಚ್ಚ ಪ್ರಕಾಶ್ ಶೆಟ್ಟಿ ದಂಪತಿಗಳನ್ನು ಗೌರವಿಸಿದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಎನ್., ಉಜಿರೆ ವರ್ತಕರ ಸಂಘದ ಅಧ್ಯಕ್ಷ ಬಿ.ಎಸ್. ಪ್ರಸಾದ್, ಉಜಿರೆ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಮಹಾವೀರ್ ಸೇಬಣ್ಣ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೊಚ್ಚ ಶ್ರೀ ಪ್ರಕಾಶ್ ಶೆಟ್ಟಿ ಅಭಿವಂದನ ಸಮಿತಿ ಉಜಿರೆ ಇದರ ಸಂಚಾಲಕರು ಹಾಗೂ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಉಜಿರೆ ಸಿಬ್ಬಂದಿ ವರ್ಗದವರು, ಪ್ರಕಾಶ್ ಶೆಟ್ಟಿ ಅವರ ಕುಟುಂಬಸ್ಥರು, ಊರಿನ ನಾಗರಿಕರು, ಅಧಿಕಾರಿಗಳು ಉಪಸ್ಥಿತರಿದ್ದರು.

ಉಜಿರೆ ಶ್ರೀ ಧ. ಮಂ. ಸ್ವಾಯತ್ತ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಕುಮಾರ ಹೆಗ್ಡೆ ಅಭಿವಂದನ ನುಡಿಗಳನ್ನಾಡಿದರು. ಸೋಮಶೇಖರ್ ಶೆಟ್ಟಿ ಮತ್ತು ರವೀಂದ್ರ ಶೆಟ್ಟಿ ಬಲಂಜ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಭಾಷಿಣಿ ಪ್ರಾರ್ಥಿಸಿದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಘುರಾಮ್ ಶೆಟ್ಟಿ ಸಾಧನ ಪ್ರಸ್ತಾವಿಸಿ, ಸ್ವಾಗತಿಸಿದರು.

Related posts

ದಯಾ ವಿಶೇಷ ಮಕ್ಕಳ ಪಾಲನ ಕೇಂದ್ರ ವಿಮುಕ್ತಿಯಲ್ಲಿ “ಪವರ್ ಆನ್” ಸಂಸ್ಥೆಯ ಕ್ಯಾಲೆಂಡರ್ ಬಿಡುಗಡೆ

Suddi Udaya

ಪಂಚಾಯತ್ ಮಟ್ಟದಲ್ಲಿ ಜನಸಾಮಾನ್ಯರಿಗೆ ಕಾಂಗ್ರೆಸ್ ಸರಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಜೂ.23 ರಂದು ದ.ಕ ಜಿಲ್ಲೆಯಲ್ಲಿ ಬಿಜೆಪಿ ಪ್ರತಿಭಟನೆಯ ಪೂರ್ವಭಾವಿ ಸಭೆ

Suddi Udaya

ಉಜಿರೆ : ಅತ್ತಾಜೆಯಲ್ಲಿರುವ ಎಮ್. ಆರ್. ಎಫ್ ಘಟಕದಲ್ಲಿ ಒಣ ಕಸ ವಿಲೇವಾರಿ ಕುರಿತು ಅರಸಿನಮಕ್ಕಿ, ಶಿಬಾಜೆ ಗ್ರಾಮ ಪಂಚಾಯತ್ ನಲ್ಲಿ ಮಾಹಿತಿ ಕಾರ್ಯ

Suddi Udaya

ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಜಯದಶಮಿಯ ವಿಶೇಷ ಪೂಜೆ ಹಾಗೂ ಆಡಳಿತ ಟ್ರಸ್ಟ್ ವತಿಯಿಂದ ಊರವರ ಭಕ್ತರ ಸಭೆ

Suddi Udaya

ಮಂಗಳೂರು-ಉಡುಪಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ಕುಮಾರಚಂದ್ರ ಬೆಳ್ತಂಗಡಿ ನಿಯೋಜನೆ

Suddi Udaya

ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ನಿಂದ ಅತ್ಯುತ್ತಮ ಗ್ರಾಮ ಪಂಚಾಯತ್ ಆಗಿ ಆಯ್ಕೆಯಾದ ಉಜಿರೆ ಗ್ರಾಮ ಪಂಚಾಯತ್ ಗೆ ಡಾ|| ಚಿಕ್ಕ ಕೋಮರಿ ಗೌಡ ದತ್ತಿ ಪ್ರಶಸ್ತಿ ಪ್ರದಾನ

Suddi Udaya
error: Content is protected !!