32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು : ಮುಖ್ಯೋಪಾಧ್ಯಾಯ ರಾಧಾಕೃಷ್ಣ ಟಿ. ರವರಿಗೆ ಬಿಳ್ಕೋಡುಗೆ, ಹಾಗೂ ಶಿಕ್ಷಣ ಸಾಧಕರಿಗೆ ಸನ್ಮಾನ

ಕೊಯ್ಯೂರು : ಕೊಯ್ಯೂರು ನಾಗರಿಕ ಸನ್ಮಾನ ಸಮಿತಿ, ಕೊಯ್ಯೂರು ಸರಕಾರಿ ಪ್ರೌಢಶಾಲೆ, ಕೊಯ್ಯೂರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ಕೊಯ್ಯೂರು ಇಲ್ಲಿ ಪ್ರಭಾರ ಮುಖ್ಯೋಪಾಧ್ಯಾಯರಾಗಿ 24 ವರ್ಷಗಳ ಸುದೀರ್ಘಕಾಲ ಉತ್ಕೃಷ್ಟ ಸೇವೆ ಸಲ್ಲಿಸಿ ಖಾಯಂ ಮುಖ್ಯೋಪಾಧ್ಯಾಯರಾಗಿ ಮುಂಬಡ್ತಿ ಹೊಂದಿ ಪುತ್ತಿಲ ಪ್ರೌಢಶಾಲೆಗೆ ವರ್ಗಾವಣೆಗೊಂಡಿರುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ ಟಿ. ಅವರಿಗೆ ಬಿಳ್ಕೋಡುಗೆ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅ.4ರಂದು ನಡೆಯಿತು.

ಸಮಾಜದಲ್ಲಿ ಮತ್ತು ವೃತ್ತಿ ಜೀವನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಶಿಕ್ಷಣ ಸಂಸ್ಥೆ, ಪಠ್ಯೇತರ ಚಟುವಟಿಕೆಗಳನ್ನು ಒಳಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಕೊಯ್ಯೂರು ಶಾಲೆಯ ಶಿಕ್ಷಕರಾಗಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ವ್ಯಕ್ತಿಯೇ ಮರೆಯಲಾಗದ ಮಾಣಿಕ್ಯ ಎಂದು ಅಶೋಕ್‌ ಕುಮಾರ್‌‌ ಅಗ್ರಸಾಲೆ ಕೊಯ್ಯೂರು ಅಭಿಪ್ರಾಯ ವ್ಯಕ್ತಪಡಿಸಿದರು.

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಕನ್ನಡ ಸಹಪ್ರಾಧ್ಯಾಪಕರಾದ ಡಾ.ದಿವ ಕೊಕ್ಕಡ, ಸನ್ಮಾನಿತರ ಅಭಿನಂದನಾ ಭಾಷಣ ಮಾಡಿದರು. ರಾಜ್ಯ ಉತ್ತಮ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ವಿಜಯ್ ಕುಮಾರ್ ಎಂ. ಅಭಿನಂದನಾ ಪತ್ರ ವಾಚಿಸಿದರು.
ಕೊಯ್ಯೂರು ಪ್ರೌಢ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ 24 ವರ್ಷಗಳ ಕಾಲ ಗಣನೀಯ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸರ್ವತೋಮುಖ ಬೆಳವಣಿಗೆ ಶ್ರಮಿಸಿದ ನಿಮಗೆ ಊರಿನ ನಾಗರಿಕರಿಂದ ಸಂದ ಗೌರವ ಅವಿಸ್ಮರಣೀಯ. ಗ್ರಾಮೀಣ ಪ್ರದೇಶಗಳಲ್ಲಿ ಬಡ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಗರಿಷ್ಠ ಕೆ.ಪಿ.ಎಸ್. ಶಾಲೆಗಳು ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಹಾಗೂ ಬೀಳ್ಕೋಡುಗೆ ಸವಿನೆನಪಿಗಾಗಿ ಫ್ರೌಢ ಶಾಲಾ ಸಭಾಂಗಣದ ವೇದಿಕೆ ರಚನೆಗಾಗಿ 10 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಹೇಳುತ್ತಾ, ರಾಜ್ಯ ಪ್ರಶಸ್ತಿ ವಿಜೇತ ರಾಧಾಕೃಷ್ಣ ತಚ್ಚಮೆ ಅವರನ್ನು ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನಿಸಿ ಶಾಸಕ ಹರೀಶ್ ಪೂಂಜ ಮಾತಾನಾಡಿದರು.


ನಮ್ಮ ಕುಟುಂಬದ ಪರಂಪರೆಯನ್ನು ಅಳವಡಿಸಿ ಕೊಂಡು ವೃತ್ತಿ ಜೀವನದಲ್ಲಿ ಮುಂದುವರಿದಾಗ ನಮ್ಮ ಕಾರ್ಯಕ್ರಮಗಳು ಯಶಸ್ವಿಯಾಗಿ ನಿರ್ವಹಿಸುವುದಕ್ಕೆ ಪ್ರೇರಣೆ ನೀಡಿತು ಎಂದು ನಾಗರಿಕ ಸನ್ಮಾನ ಸ್ವೀಕರಿಸಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸೃತ ರಾಧಾಕೃಷ್ಣ ಟಿ. ಅಭಿಪ್ರಾಯ ವ್ಯಕ್ತಪಡಿಸಿದರು.


2024-25 ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿಧ್ಯಾರ್ಥಿ, ವಿಧ್ಯಾರ್ಥಿನಿಯರನ್ನು ಗೌರವಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ವಿಭಾಗದ ಮ್ಯಾನೇಜರ್ ಬಿ.ಬಾಲಕೃಷ್ಣ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು.


ಕೊಯ್ಯೂರು ನಾಗರಿಕ ಸನ್ಮಾನ ಸಮಿತಿ ಅಧ್ಯಕ್ಷ ದಾಮೋದರ ಗೌಡ ಬೆರ್ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ಕ್ಷೇತ್ರ ಸಮನ್ವಯಾಧಿಕಾರಿ ಬಿ. ಆರ್. ಸಿ. ಕೇಂದ್ರ ಬಸವಲಿಂಗಪ್ಪ ಟಿ.ಬಿ., ಕೊಯ್ಯೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರವೀಂದ್ರನಾಥ ಗೌಡ ಪಿ., ಪ್ರಗತಿಪರ ಕೃಷಿಕ ಪಾಂಬೇಲು ಪ್ರಚಂಡಭಾನು ಭಟ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರೀಯಾಜ್, ಕೊಯ್ಯೂರು ಸ.ಪ.ಪೂರ್ವ ಕಾಲೇಜು ಪ್ರಾಂಶುಪಾಲರಾದ ಮೋಹನ ಗೌಡ, ಮಹಮ್ಮದ್ ಹಾರೂನ್ ಬಜಿಲ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷರಾದ ಲೋಹಿತಾಶ್ವ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧನಂಜಯ ಗೌಡ ಪಾಂಬೇಲು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ತಾಲೂಕು ಪಂಚಾಯತ್ ಮಾಜಿ ಸದಸ್ಯ, ಹಿರಿಯ ವಿಧ್ಯಾರ್ಥಿ ಪ್ರವೀಣ್ ಗೌಡ ಮಾವಿನಕಟ್ಟೆ ಹಾಗೂ ಶಾಲಾ ವಿದ್ಯಾರ್ಥಿ ನಾಯಕ ಸಂಕೇತ್ ಉಪಸ್ಥಿತರಿದ್ದರು.

ಶಾಲಾ ಸಹ ಶಿಕ್ಷಕರು, ಮಕ್ಕಳ ಪೋಷಕರು, ವಿವಿಧ ಸಂಘ,ಸಂಸ್ಥೆಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಕೊಯ್ಯೂರು ಪ್ರೌಢ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಸುಧಾಕರ ಶೆಟ್ಟಿ ಸ್ವಾಗತಿಸಿದರು.
ಶಾಲಾ ಸಹ ಶಿಕ್ಷಕ ರಾಮಚಂದ್ರ ದೊಡಮನಿ ನಿರೂಪಣೆ ಮಾಡಿದರು. ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯ ಲೋಕೇಶ್ ಗೌಡ ಟಿ. ವಂದಿಸಿದರು.
ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ದಿನೇಶ್ ಕೊಡಪದವು ನೇತೃತ್ವದ ಯಕ್ಷ ಹಾಸ್ಯ ಸಾಹಿತ್ಯ ಸಂಭ್ರಮ ಮೌಲ್ಯಾಧಾರಿತ ಕಥಾ ಪ್ರಸಂಗ ಮಹಾನುಭಾವ ಜರಗಿತು.

Related posts

ವೇಣೂರು: ದಶಲಕ್ಷಣ ಪರ್ವ ಉದ್ಘಾಟನಾ ಸಮಾರಂಭ: ಮಹಾಮಸ್ತಕಾಭಿಷೇಕದೊಂದಿಗೆ ಜನಮಂಗಳ ಕಾರ್ಯಕ್ರಮ : ಡಾ. ಪದ್ಮಪ್ರಸಾದ ಅಜಿಲ

Suddi Udaya

ಬೆಳ್ತಂಗಡಿ ಮಂಜುಶ್ರೀ ಜೆಸಿಐ ವತಿಯಿಂದ ಜೂನಿಯರ್ ಜೇಸಿ ಪದಗ್ರಹಣ ಹಾಗೂ ಯೂತ್ ಡೇ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲೆಯಲ್ಲಿ ಪೋಷಕರ ಸಭೆ

Suddi Udaya

ನೆರಿಯ: ನರ್ಸಿಂಗ್ ವಿದ್ಯಾರ್ಥಿನಿ ಹೃದಯಾಘಾತದಿಂದ ನಿಧನ

Suddi Udaya

ಮಚ್ಚಿನ ಸ. ಪ್ರೌ.ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಪಡಂಗಡಿಯ ಮುಬಿನ್ ರವರಿಂದ ಕುಂಭಶ್ರೀ ವಿದ್ಯಾಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ.ಹೆಚ್ ರಿಗೆ ಫ್ಯಾನ್‌ ಕೊಡುಗೆ

Suddi Udaya
error: Content is protected !!