30.9 C
ಪುತ್ತೂರು, ಬೆಳ್ತಂಗಡಿ
October 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮಶೀಲತಾ ಅಭಿವೃದ್ಧಿ- ಮದುಮಗಳ ಶೃಂಗಾರ ತರಬೇತಿಯ ಸಮಾರೋಪ

ಉಜಿರೆ: ಪ್ರತಿಯೊಂದು ಕೆಲಸದಲ್ಲೂ ಸ್ಪರ್ಧೆ ಇದೆ. ಆದ್ದರಿಂದ ನಾವು ಮಾಡುವ ಕೆಲಸಕ್ಕೆ ಹೆಚ್ಚು ಗಮನಕೊಟ್ಟು ಅದರಲ್ಲಿ ತನ್ನದೇ ಆದ ಹೊಸತನವನ್ನು, ವಿಶೇಷತೆಯನ್ನು ತರಬೇಕು ಎಂದು ಉಜಿರೆಯ ಸಂಧ್ಯಾ ಫ್ರೆಶ್ ಇದರ ಮಾಲಕಿ ಶ್ರೀಮತಿ ಅರ್ಚನಾ ರಾಜೇಶ್ ಪೈ ಅಭಿಪ್ರಾಯಪಟ್ಟರು.

ಇವರು ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆಯಲ್ಲಿ 6 ದಿನಗಳ ಕಾಲ ನಡೆದ ಉದ್ಯಮಶೀಲತಾ ಅಭಿವೃದ್ಧಿ- ಮದುಮಗಳ ಶೃಂಗಾರ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಮಹಿಳೆಯರು ಸಾಂಸಾರಿಕ ಬದುಕು ಮತ್ತು ವ್ಯವಹಾರಿಕ ಬದುಕನ್ನು ಸಮತೋಲನದಿಂದ ಕೊಂಡೊಯ್ಯಬೇಕಾಗುತ್ತದೆ. ಕಲಿತ ಕೌಶಲ್ಯವನ್ನು ಮನೆಯಲ್ಲೇ ಉಳಿಸದೆ, ಸ್ವಂತ ಬ್ಯೂಟಿ ಪಾರ್ಲರ್ ಆರಂಭಿಸಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಅವರು ಶಿಬಿರಾರ್ಥಿಗಳಿಗೆ ಕರೆ ನೀಡಿದರು.


ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆ, ಉಜಿರೆಯ ನಿರ್ದೇಶಕ ಸುನೀಲ್ ಜಿ. ನಾಯ್ಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ನಿರೂಪಿಸಿದರು, ಹಿರಿಯ ಉಪನ್ಯಾಸಕ ಕರುಣಾಕರ್ ಜೈನ್ ಧನ್ಯವಾದ ಸಲ್ಲಿಸಿದರು. ಕು. ರಮ್ಯಾ ಅವರು ಪ್ರಾರ್ಥನೆ ಮಾಡಿದರು. ಶಿಬಿರಾರ್ಥಿಗಳಾದ ಸೌಮ್ಯ ಪಿ. ಮತ್ತು ಶ್ವೇತಾ ತರಬೇತಿಯ ಅನುಭವವನ್ನು ಹಂಚಿಕೊಂಡರು.

Related posts

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಮತ್ತು ಯೋಧ ನಮನ ಕಾರ್ಯಕ್ರಮ

Suddi Udaya

ಭರತನಾಟ್ಯ ವಿಧ್ವತ್ ಅಂತಿಮ ಪರೀಕ್ಷೆ : ಗುರುವಾಯನಕೆರೆಯ ಸುಕನ್ಯಾ ಕಾಮತ್ ಉತ್ತೀರ್ಣ

Suddi Udaya

ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ ವತಿಯಿಂದ ತಾಳಮದ್ದಳೆ ಮತ್ತು ಕಲಾವಿದರಿಗೆ ನುಡಿ ನಮನ

Suddi Udaya

ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಕೊಲ್ಲಿ: ನೋಣಯ್ಯ ದೇವಾಡಿಗ ನಿಧನ

Suddi Udaya

ಕಾಲ್ತುಳಿತ ದುರಂತ: ಪೂರ್ವ ತಯಾರಿ ಇಲ್ಲದೆ ರಾಜ್ಯ ಸರ್ಕಾದಿಂದ ಬೇಜವಾಬ್ದಾರಿ ಸಂಭ್ರಮಾಚರಣೆ: ಹರೀಶ್ ಪೂಂಜ

Suddi Udaya
error: Content is protected !!