30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅ.8-9: ಎಸ್‌ಡಿಎಂ ಕಾಲೇಜಿನಲ್ಲಿ ‘ChemSyn-2026’ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ

ಉಜಿರೆ: ಆರೋಗ್ಯ, ಪರಿಸರ ಸುಸ್ಥಿರತೆ ಹಾಗೂ ಕೈಗಾರಿಕಾ ಪರಿವರ್ತನೆಗೆ ರಸಾಯನಶಾಸ್ತ್ರದ ನವೀನ ಸಂಶೋಧನೆಗಳು ಮತ್ತು ತಂತ್ರಜ್ಞಾನಗಳ ಕೊಡುಗೆಯನ್ನು ಅನ್ವೇಷಿಸುವ ಉದ್ದೇಶದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ರಸಾಯನಶಾಸ್ತ್ರ ವಿಭಾಗದ ವತಿಯಿಂದ “Chemical Synergies: Innovations for Health, Environmental Sustainability and Industrial Transformation (ChemSyn-2026)” ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಅಕ್ಟೋಬರ್ 8 ಮತ್ತು 9ರಂದು ಆಯೋಜಿಸಲಾಗಿದೆ.

ಅಕ್ಟೋಬರ್ 8ರಂದು ಬೆಳಿಗ್ಗೆ 10 ಗಂಟೆಗೆ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಮಾಜಿ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಬಿ. ಶಿವರಾಮ ಹೊಳ್ಳ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಪುಣೆಯ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ (CSIR-NCL)ಯ ಫಿಸಿಕಲ್/ಮೆಟೀರಿಯಲ್ ಕೆಮಿಸ್ಟ್ರಿ ವಿಭಾಗದ ಮುಖ್ಯ ವಿಜ್ಞಾನಿ ಡಾ. ಭಗವತುಲ ಎಲ್.ವಿ. ಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಮ್ಮೇಳನದ ಅಧ್ಯಕ್ಷತೆಯನ್ನು ಎಸ್‌ಡಿಎಂ ಕಾಲೇಜು (ಸ್ವಾಯತ್ತ), ಉಜಿರೆಯ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಅವರು ವಹಿಸಲಿದ್ದಾರೆ. ಎರಡು ದಿನಗಳ ಸಮ್ಮೇಳನದಲ್ಲಿ ರಸಾಯನಶಾಸ್ತ್ರ ಕ್ಷೇತ್ರದ ವಿವಿಧ ಆಯಾಮಗಳು, ಆರೋಗ್ಯ ಕ್ಷೇತ್ರದಲ್ಲಿ ರಾಸಾಯನಿಕ ಸಂಶೋಧನೆಗಳ ಅನ್ವಯ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ರಸಾಯನಶಾಸ್ತ್ರದ ಪಾತ್ರ ಹಾಗೂ ಕೈಗಾರಿಕಾ ಕ್ಷೇತ್ರದ ಪರಿವರ್ತನೆಗೆ ಅಗತ್ಯವಾದ ನವೀನ ತಂತ್ರಜ್ಞಾನಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ.

ರಸಾಯನಶಾಸ್ತ್ರವು ಆರೋಗ್ಯ, ಪರಿಸರ, ಕೃಷಿ, ಕೈಗಾರಿಕೆ ಹಾಗೂ ದೈನಂದಿನ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಪ್ರಮುಖ ವಿಜ್ಞಾನ ಕ್ಷೇತ್ರವಾಗಿದ್ದು, ಪ್ರಸ್ತುತ ಜಾಗತಿಕ ಸವಾಲುಗಳಿಗೆ ವೈಜ್ಞಾನಿಕ ಹಾಗೂ ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಅದರ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ChemSyn-2026 ಸಮ್ಮೇಳನವು ಸಂಶೋಧಕರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ರಸಾಯನಶಾಸ್ತ್ರ ಕ್ಷೇತ್ರದ ಆಸಕ್ತರಿಗೆ ತಮ್ಮ ಸಂಶೋಧನಾ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಹೊಸ ವೈಜ್ಞಾನಿಕ ಸಹಯೋಗಗಳಿಗೆ ವೇದಿಕೆಯಾಗಲಿದೆ.

ಸಮ್ಮೇಳನದ ಸಮಾರೋಪ ಸಮಾರಂಭವು ಅಕ್ಟೋಬರ್ 9ರಂದು ಮಧ್ಯಾಹ್ನ 3.15ಕ್ಕೆ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿದೆ. ಮೈಸೂರಿನ CSIR-CFTRIಯ Plantation Products, Spices and Flavour Technology ವಿಭಾಗದ ಹಿರಿಯ ವಿಜ್ಞಾನಿ ಡಾ. ಸುಹಾಸ್ ಆರ್. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ವಿಶ್ವನಾಥ ಪಿ. ಅವರು ವಹಿಸಲಿದ್ದಾರೆ.

ಸಮ್ಮೇಳನದ ಕನ್ವೀನರ್ ಆಗಿ ರಸಾಯನಶಾಸ್ತ್ರ ವಿಭಾಗದ ಉಪಪ್ರಾಂಶುಪಾಲರು ಹಾಗೂ ಮುಖ್ಯಸ್ಥರಾದ ನಂದಾ ಕುಮಾರಿ ಕೆ.ಪಿ., ಆರ್ಗನೈಸಿಂಗ್ ಸೆಕ್ರೆಟರಿಯಾಗಿ ಸಹಾಯಕ ಪ್ರಾಧ್ಯಾಪಕಿ ಡಾ. ಗಾನವಿ ಡಿ., ಕೋ-ಕನ್ವೀನರ್ ಆಗಿ ಸಹಾಯಕ ಪ್ರಾಧ್ಯಾಪಕಿ ದಿವ್ಯಾ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಅವರು ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಎಂದು ಕಾಲೇಜಿನ ಉಪಪ್ರಾಂಶುಪಾಲೆ, ಸಹಸಂಯೋಜಕಿ ದಿವ್ಯ ತಿಳಿಸಿದ್ದಾರೆ. ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಬಿ.ಶಿವರಾಮ ಹೊಳ್ಳ ಅವರು 8ರಂದು ಬೆಳಿಗ್ಗೆ 10ಕ್ಕೆ ವಿಚಾರಸಂಕಿರಣ ಉದ್ಘಾಟಿ ಸುವರು. ಪುಣೆಯ ಹಿರಿಯ ವಿಜ್ಞಾನಿ ಭಾಗವತುಲಪ್ರಸಾದ್ ಭಾಗವಹಿಸುವರು. ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ವಿಶ್ವನಾಥ ಅಧ್ಯಕ್ಷತೆ ವಹಿಸುವರು. ಹಿರಿಯ ವಿಜ್ಞಾನಿ ಸಮಾರೋಪ ಭಾಷಣ ಮಾಡುವರು ಎಂದರು. ವಿಚಾರ ಸಂಕಿರಣದ ಸಂಯೋಜಕಿ ಪ್ರೊ.ನಂದಕುಮಾರಿ ಕೆ.ಪಿ., ಸಂಘಟನಾ ಕಾರ್ಯದರ್ಶಿ ಗಾನವಿ ಡಿ. , ಸಹ ಸಂಯೋಜಕಿ ದಿವ್ಯ ತಿಳಿಸಿದ್ದಾರೆ.

Related posts

ಗುರುವಾಯನಕೆರೆ ಶಕ್ತಿನಗರ ಸರ್ಕಲ್ ನಲ್ಲಿ ಮಾಜಿ ಶಾಸಕರು ದಿ. ವಸಂತ ಬಂಗೇರರ ಪುತ್ಥಳಿ ಸ್ಥಾಪನೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಮಕರಸಂಕ್ರಾಂತಿ ಆಚರಣೆ

Suddi Udaya

ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸತ್ಯರ್ಥ ಎಸ್. ಜೈನ್ ಪ್ರಥಮ ಸ್ಥಾನ

Suddi Udaya

ಕೊಕ್ರಾಡಿ -ಸಾವ್ಯ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ

Suddi Udaya

ಮೂಡುಕೋಡಿ: ಕೊಪ್ಪದಬಾಕಿಮಾರು ಶ್ರೀ ಸತ್ಯ ಸಾರಮಾನಿ ದೈವಸ್ಥಾನ ಟ್ರಸ್ಟ್ ವತಿಯಿಂದ ದೇಲoಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದಲ್ಲಿ ಮೃತ್ಯುoಜಯ ಹೋಮ

Suddi Udaya

ಶಾಸಕ ಹರೀಶ್ ಪೂಂಜರವರ ಪ್ರಯತ್ನದಿಂದ ಮಾಲಾಡಿ ಗ್ರಾಮದ ಊರ್ಲ ರಸ್ತೆಯ ಕಾಂಕ್ರೀಟಿಕರಣ

Suddi Udaya
error: Content is protected !!