30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಾರ್ಯದ ಯೋಗ ಪ್ರತಿಭೆ ವಿಕಾಸ್‌ರಿಗೆ ಶಾಸಕ ಹರೀಶ್ ಪೂಂಜರಿಂದ ಸನ್ಮಾನ

ಬೆಳ್ತಂಗಡಿ: ಕಠಿಣವಾದ ಸರ್ವಾಂಗಾಸನದಲ್ಲಿ ಅಚಲವಾಗಿ, ಅತ್ಯಂತ ಸುದೀರ್ಘ ಕಾಲ ಸಮತೋಲನ ಕಾಯ್ದುಕೊಂಡು ಯೋಗ ಲೋಕವೇ ಬೆರಗಾಗುವಂತೆ ಮಾಡಿ, ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್‌ನ ತೃತೀಯ ವರ್ಷದ ವಿದ್ಯಾರ್ಥಿಯಾದ ಇವರ ಈ ಅಸಾಧಾರಣ ಸಾಧನೆ ಇಡೀ ತುಳುನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.

ಈ ಸಾಧಕನ ಸಾಧನೆಯನ್ನು ಗುರುತಿಸಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಬಾರ್ಯದ ಪಂರ್ದ ಗುತ್ತು ಮನೆಗೆ ಭೇಟಿ ನೀಡಿ, ವಿಕಾಸ್‌ರನ್ನು ಅಭಿನಂದಿಸಿದ್ದಾರೆ.

ಹಳ್ಳಿಯ ಸಾಮಾನ್ಯ ಹುಡುಗನೊಬ್ಬ ವಿಶ್ವ ವೇದಿಕೆಯಲ್ಲಿ ಭಾರತದ ಯೋಗ ಪರಂಪರೆಯನ್ನು ಬೆಳಗಿದ್ದಾನೆ. ವಿಕಾಸ್ ಕೇವಲ ಸ್ಪರ್ಧಿಯಲ್ಲ, ಇಂದು ಯೋಗ ತೀರ್ಪುಗಾರನಾಗಿ ಬೆಳೆದಿರುವುದು ನಮ್ಮೆಲ್ಲರ ಹೆಮ್ಮೆ. ಇವನ ಭವಿಷ್ಯದ ಎಲ್ಲಾ ಕನಸುಗಳಿಗೆ ಶ್ರಮಿಕಾ ಟ್ರಸ್ಟ್ ಸದಾ ಹೆಗಲಾಗಿ ನಿಲ್ಲುತ್ತದೆ. ವಿಕಾಸ್ ಇನ್ನಷ್ಟು ಎತ್ತರಕ್ಕೆ ಬೆಳೆದು ದೇಶಕ್ಕೆ ಕೀರ್ತಿ ತರಲಿ” ಎಂದು ಶಾಸಕರು ಹೃತ್ಪೂರ್ವಕವಾಗಿ ಹಾರೈಸಿದರು.

ಈ ಸಂದರ್ಭದಲ್ಲಿ ಉತ್ತಮ ಶಾಸಕ ಪ್ರಶಸ್ತಿ ಪಡೆದಿರುವ ಶಾಸಕರಿಗೆ ಪಂರ್ದ ಗುತ್ತು ತರವಾಡು ಮನೆಯ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಕಾಸ್ ಹೆತ್ತವರಾದ ಕೃಷ್ಣಪ್ಪ ಪೂಜಾರಿ ಶೀಲಾ ಯಸ್ ,ಹಾಗೂ ಕೇಶವ ಪೂಜಾರಿ, ದೇವಪ್ಪ ಹಿರೆಬಂಡಾಡಿ, ಜಯಾನಂದ ಕಲ್ಲಾಪು, ಮನೋಹರ್ ಶೆಟ್ಟಿ ,ಸವೀತ ಬಾರ್ಯ, ಗುಣಕರ ಅಗ್ನಾಡಿ, ಹೇಮಾವತಿ, ರಮೇಶ ಆನಲ್ಕೆ, ನವೀನ್ ಕುಮಾರ್ ರೈ ತೆಕ್ಕಾರು ಮತ್ತಿತರರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಲ್ಯಾನ್ಸಿ ಫೆರ್ನಾಂಡಿಸ್ ಇಸ್ರೇಲ್ ನಲ್ಲಿ ನಿಧನ

Suddi Udaya

ಮಚ್ಚಿನ: ನೂತನ ವಿದ್ಯುತ್ ಕಂಬ ಅಳವಡಿಕೆ : ಸುದ್ದಿ ಉದಯ ಫಲಶ್ರುತಿ

Suddi Udaya

ಎ.10: ಧರ್ಮಸ್ಥಳ ಗೀತ ನೃತ್ಯಾಲಯ ನೃತ್ಯ ತರಬೇತಿ ಕೇಂದ್ರ ಪ್ರಸ್ತುತಪಡಿಸುವ “ನೃತ್ಯ ರಶ್ಮಿ ನೃತ್ಯೋತ್ಸವ ಹಾಗೂ ಗುರುವಂದನೆ” ಮತ್ತು ಪ್ರಥಮ ವರ್ಷದ ಸಂಭ್ರಮ

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ: ಮಲವಂತಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿಗೆ ಸಿದ್ಧರಾಮಯ್ಯರಿಗೆ ಮನವಿ

Suddi Udaya

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕೆ.ವಿ ಪ್ರಸಾದ್ ಇಲಂತಿಲ ರವರು ಬಿಜೆಪಿ ಮುಂದಿನ 6ವರ್ಷಗಳ ಅವಧಿಗೆ ಸದಸ್ಯತ್ವ ಹಾಗೂ ಇತರ ಎಲ್ಲಾ ಜವಾಬ್ದಾರಿಗಳಿಂದ ವಜಾ

Suddi Udaya

ಬ್ಯಾನರ್ ಕಟ್ಟುವ ವೇಳೆ ತೆರೆದ ಚರಂಡಿಗೆ ಬಿದ್ದ ಶಿಕ್ಷಕನಿಗೆ ಗಾಯ

Suddi Udaya
error: Content is protected !!