ಬೆಳ್ತಂಗಡಿ: ಕಠಿಣವಾದ ಸರ್ವಾಂಗಾಸನದಲ್ಲಿ ಅಚಲವಾಗಿ, ಅತ್ಯಂತ ಸುದೀರ್ಘ ಕಾಲ ಸಮತೋಲನ ಕಾಯ್ದುಕೊಂಡು ಯೋಗ ಲೋಕವೇ ಬೆರಗಾಗುವಂತೆ ಮಾಡಿ, ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಮೂಡುಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್‌ನ ತೃತೀಯ ವರ್ಷದ ವಿದ್ಯಾರ್ಥಿಯಾದ ಇವರ ಈ ಅಸಾಧಾರಣ ಸಾಧನೆ ಇಡೀ ತುಳುನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.

ಈ ಸಾಧಕನ ಸಾಧನೆಯನ್ನು ಗುರುತಿಸಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಬಾರ್ಯದ ಪಂರ್ದ ಗುತ್ತು ಮನೆಗೆ ಭೇಟಿ ನೀಡಿ, ವಿಕಾಸ್‌ರನ್ನು ಅಭಿನಂದಿಸಿದ್ದಾರೆ.
ಹಳ್ಳಿಯ ಸಾಮಾನ್ಯ ಹುಡುಗನೊಬ್ಬ ವಿಶ್ವ ವೇದಿಕೆಯಲ್ಲಿ ಭಾರತದ ಯೋಗ ಪರಂಪರೆಯನ್ನು ಬೆಳಗಿದ್ದಾನೆ. ವಿಕಾಸ್ ಕೇವಲ ಸ್ಪರ್ಧಿಯಲ್ಲ, ಇಂದು ಯೋಗ ತೀರ್ಪುಗಾರನಾಗಿ ಬೆಳೆದಿರುವುದು ನಮ್ಮೆಲ್ಲರ ಹೆಮ್ಮೆ. ಇವನ ಭವಿಷ್ಯದ ಎಲ್ಲಾ ಕನಸುಗಳಿಗೆ ಶ್ರಮಿಕಾ ಟ್ರಸ್ಟ್ ಸದಾ ಹೆಗಲಾಗಿ ನಿಲ್ಲುತ್ತದೆ. ವಿಕಾಸ್ ಇನ್ನಷ್ಟು ಎತ್ತರಕ್ಕೆ ಬೆಳೆದು ದೇಶಕ್ಕೆ ಕೀರ್ತಿ ತರಲಿ” ಎಂದು ಶಾಸಕರು ಹೃತ್ಪೂರ್ವಕವಾಗಿ ಹಾರೈಸಿದರು.
ಈ ಸಂದರ್ಭದಲ್ಲಿ ಉತ್ತಮ ಶಾಸಕ ಪ್ರಶಸ್ತಿ ಪಡೆದಿರುವ ಶಾಸಕರಿಗೆ ಪಂರ್ದ ಗುತ್ತು ತರವಾಡು ಮನೆಯ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಕಾಸ್ ಹೆತ್ತವರಾದ ಕೃಷ್ಣಪ್ಪ ಪೂಜಾರಿ ಶೀಲಾ ಯಸ್ ,ಹಾಗೂ ಕೇಶವ ಪೂಜಾರಿ, ದೇವಪ್ಪ ಹಿರೆಬಂಡಾಡಿ, ಜಯಾನಂದ ಕಲ್ಲಾಪು, ಮನೋಹರ್ ಶೆಟ್ಟಿ ,ಸವೀತ ಬಾರ್ಯ, ಗುಣಕರ ಅಗ್ನಾಡಿ, ಹೇಮಾವತಿ, ರಮೇಶ ಆನಲ್ಕೆ, ನವೀನ್ ಕುಮಾರ್ ರೈ ತೆಕ್ಕಾರು ಮತ್ತಿತರರು ಉಪಸ್ಥಿತರಿದ್ದರು.













