24.6 C
ಪುತ್ತೂರು, ಬೆಳ್ತಂಗಡಿ
October 12, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾವೂರು ಆರೋಗ್ಯ ಕ್ಲಿನಿಕ್ ಗೆ ಬೆಂಕಿ: ತಾಲೂಕಿನ ವೈದ್ಯರುಗಳಿಂದ ಪ್ರತಿಭಟನೆ ಮತ್ತು ಖಂಡನೆ

ಬೆಳ್ತಂಗಡಿ: ನಾವೂರು ಎಂಬಲ್ಲಿ ವೈದ್ಯಕೀಯ ವೃತ್ತಿಯೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದ ಡಾ. ಪ್ರದೀಪ್ ನಾವೂರು ಇವರ ಕ್ಲಿನಿಕ್ ಇರುವ ಕಟ್ಟಡಕ್ಕೆ ರಾತ್ರೆ ಹೊತ್ತಿನಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕ್ಲಿನಿಕ್ ನ ವೈದ್ಯಕೀಯ ಉಪಕರಣಗಳು, ಲ್ಯಾಬ್ ಗೆ ಸಂಬಂಧಪಟ್ಟ ಉಪಕರಣಗಳು,ಪೀಠೋಪಕರಣಗಳು ಇತ್ಯಾದಿ ಅಮೂಲ್ಯ ವಸ್ತುಗಳನ್ನು ನಾಶಗೊಳಿಸಿದ್ದಾರೆ.ಇಂತಹ ಹೇಯ ಕೃತ್ಯವನ್ನು ಖಂಡಿಸಿ ವೈದ್ಯಕೀಯ ಸಂಘಟನೆಗಳಾದ ಆಯುಷ್ ಫೆಡರೇಶನ್ ಆಫ್ ಇಂಡಿಯಾ ( AFI), ಇಂಡಿಯನ್ ಮೆಡಿಕಲ್ ಅಸೋಸಿಯೇಷನ್( IMA), ಇಂಡಿಯನ್ ಡೆಂಟಲ್ ಅಸೋಶಿಯೇಶನ್( IDA) ನ ಸದಸ್ಯರು ಬೆಳ್ತಂಗಡಿಯಲ್ಲಿ ಸಭೆ ಸೇರಿ  ತಾಲೂಕು ವೈದ್ಯಾಧಿಕಾರಿಗಳು, ಬೆಳ್ತಂಗಡಿ ತಹಸೀಲ್ದಾರರು ಮತ್ತು DYSP ಬೆಳ್ತಂಗಡಿಯವರಿಗೆ ತಮ್ಮ ಅಹವಾಲನ್ನು ಸಲ್ಲಿಸಿ ತಪ್ಪಿತಸ್ಥರನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳುವಂತೆ  ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಎಲ್ಲ ಸಂಘಟನೆಗಳ ಪ್ರಮುಖರಾದ ಜಿಲ್ಲಾ AFI ಅಧ್ಯಕ್ಷ ಡಾ.ಕೃಷ್ಣ ಎಂ ಗೋಖಲೆ, ತಾಲೂಕು AFI ಅಧ್ಯಕ್ಷೆ ಡಾ. ಸುಷ್ಮಾ ಡೊoಗ್ರೆ , IMA ಯ ತಾಲೂಕು ಅಧ್ಯಕ್ಷೆ ಡಾ.ಸ್ವರ್ಣಲತಾ, ಡಾ.ರಜತ್, IDA ಯ ಡಾ .ರಾಘವೇಂದ್ರ ಪಿದಮಲೆ, ಡಾ.ಶಶಿಧರ್ ಡೋಂಗ್ರೆ,   ಬೆನಕ ಆಸ್ಪತ್ರೆಯ ಡಾ.ಗೋಪಾಲಕೃಷ್ಣ, ಅಭಯ ಆಸ್ಪತ್ರೆಯ ಡಾ.ಶ್ರೀಹರಿ ಭಟ್ ಹಾಗೂ ತಾಲೂಕಿನ  ಅನೇಕ ಹಿರಿಯ ಮತ್ತು ಕಿರಿಯ ವೈದ್ಯರು  ಹಾಜರಿದ್ದರು.

ಎಲ್ಲ ಅಧಿಕಾರಿಗಳು ನಮ್ಮ ಅಹವಾಲಿಗೆ ಸ್ಪಂದಿಸಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಬೆಂಬಲ ಹಾಗೂ ಸಹಕಾರದ ಭರವಸೆಯನ್ನು ನೀಡಿರುತ್ತಾರೆ.

Related posts

ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷರಾಗಿ ರೂಪ ಎ ಎಸ್, ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಕೆ. ಆಯ್ಕೆ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya

ಕೊರಿಂಜ ಪಂಚಲಿಂಗೇಶ್ವರ ದೇವರ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ಅರ್ಧಏಕಾಹ ಭಜನಾ ಕಾರ್ಯಕ್ರಮ

Suddi Udaya

ಸರಳಿಕಟ್ಟೆ: ಗುಡ್ಡ ಕುಸಿದು ರಸ್ತೆ ಸಂಚಾರ ಸಂಪೂರ್ಣ ಬಂದ್: ಅಜಿಲಮೊಗರು – ಸರಳಿಕಟ್ಟೆ- ಉಪ್ಪಿನಂಗಡಿ ಸಂಪರ್ಕ ಕಡಿತ

Suddi Udaya

ಪೆರಿಂಜೆ ಪಟ್ಟಾಡಿಯಲ್ಲಿ ಹಾಜಿ ಮಲಂಗ್ ಇಂಟರ್ ನ್ಯಾಷನಲ್ ಗರ್ಲ್ಸ್ ಕ್ಯಾಂಪಸ್ ಉದ್ಘಾಟನೆ

Suddi Udaya

ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಎ.ಜೆ ಅಜೇಯ್ ಜೆಕೋಬ್ ಬೆಳ್ತಂಗಡಿ ಆಯ್ಕೆ

Suddi Udaya
error: Content is protected !!