34.2 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ : ಪ್ರಧಾನ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು, ಕೃಷಿ ಸಖಿ ಹಾಗೂ ಪಶುಸಖಿ ಯರ ಯೂನಿಯನ್ ಸಭೆ

ಬೆಳ್ತಂಗಡಿ ತಾಲೂಕಿನ ಪ್ರಧಾನ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು, ಕೃಷಿ ಸಖಿ, ಪಶು ಸಖಿಯರ ಯೂನಿಯನ್ ಸಭೆಯು ಅ.9ರಂದು ಕನ್ಯಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಸಂಧ್ಯಾ-ಪುದುವೆಟ್ಟು ವಹಿಸಿಕೊಂಡರು. ಹಿಂದಿನ ಸಭೆಯ ವರದಿಯನ್ನು ಮಂಡಿಸಿ ಅದರ ಕುರಿತು ಚರ್ಚಿಸಲಾಯಿತು. ಬಳಿಕ ಯೂನಿಯನ್ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಶ್ರೀಮತಿ ಭವ್ಯ ಚಾರ್ಮಾಡಿ, ಉಪಾಧ್ಯಕ್ಷರಾಗಿ ಶ್ರೀಮತಿ ಚಂದ್ರಿಕಾ ಕುಕ್ಕೇಡಿ, ಕಾರ್ಯದರ್ಶಿಯಾಗಿ ಶ್ರೀಮತಿ ಮಲ್ಲಿಕ ಅಂಡಿಂಜೆ, ಜತೆ ಕಾರ್ಯ ದರ್ಶಿಯಾಗಿ ಶ್ರೀಮತಿ ಅಕ್ಷತಾ ನಾರಾವಿ, ಕೋಶಾಧಿಕಾರಿಯಾಗಿ ಶ್ರೀಮತಿ ಚಂದ್ರಾವತಿ ಧರ್ಮಸ್ಥಳ ಅವರನ್ನುಸರ್ವನು ಮತದಿಂದ ಆಯ್ಕೆ ಮಾಡಲಾಯಿತು. ಮತ್ತು ಈ ಸಭೆಯಲ್ಲಿ ಸಮಿತಿ ಸಲಹೆಗಾರರು ಸದಸ್ಯರಾಗಿ 15 ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಯೂನಿಯನ್ ನ ಸಂಘಟನೆಯನ್ನು ಬಲಪಡಿಸುವುದು. ಕೃಷಿ ಸಖಿ ಮತ್ತು ಪಶುಸಖಿಯರು ಸದಸ್ಯತ್ವ ಶುಲ್ಕ ಪಾವತಿಸುವುದು, ಯೂನಿಯನ್ ಸಭೆಗೆ ಹಾಜರಾಗದಿದ್ದರೆ ದಂಡ ವಿಧಿಸುವುದು. ಸದಸ್ಯರ ನಡುವೆ ಪರಸ್ಪರ ಸಹಕಾರ ಮತ್ತು ಸಮನ್ವಯವನ್ನು ಹೆಚ್ಚಿಸುವುದು ಹಾಗೂ ಮುಂದಿನ ದಿನಗಳಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಮತ್ತು ಸಂಘಟನೆಯ ಉದ್ದೇಶಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಅಗತ್ಯವನ್ನು ಹೇಳಲಾಯಿತು.


ಸಭೆಯಲ್ಲಿ ತಾಲೂಕಿನ ಪ್ರಧಾನ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಕೃಷಿ ಸಖಿ ಮತ್ತು ಪಶು ಸಖಿ ಯರು ವಹಿಸಿದ್ದರು.
ಎಂಬಿಕೆ ಹರಿನಾಕ್ಷಿ ಕಾರ್ಯಕ್ರಮ ರೂಪಿಸಿ, ಎಲ್ ಸಿ ಆರ್ ಪಿ ಜಯಂತಿ ಸ್ವಾಗತಿಸಿ, ಕೃಷಿ ಸಖಿ ನಿರ್ಮಲ ಧನ್ಯವಾದವಿತ್ತರು.

Related posts

ಉಜಿರೆಯ ವಿಶೇಷ ಮಕ್ಕಳ ಸಾನಿಧ್ಯ ಕೇಂದ್ರದಲ್ಲಿ ದೀಪಾವಳಿ ಸಂಭ್ರಮ

Suddi Udaya

ಬಂಗೇರ‌ ಪಾಥಿ೯ವ ಶರೀರದ ಅಂತಿಮ ದಶ೯ನಕ್ಕೆ ಹರಿದು ಬಂದ ಜನ ಸಾಗರ: ಬೆಳ್ತಂಗಡಿ ನಗರದಲ್ಲಿ ಅಂತಿಮ ಯಾತ್ರೆ: ಹುಟ್ಟೂರು ಕೇದೆಯಲ್ಲಿ ಅಂತ್ಯಸಂಸ್ಕಾರ

Suddi Udaya

ಕಳೆಂಜ: ಶ್ರೀ ದುರ್ಗಾ ಮಹಿಳಾ ಮಂಡಳಿ ವತಿಯಿಂದ ಉಚಿತ ಟೈಲರಿಂಗ್ ಶಿಬಿರ

Suddi Udaya

ಆ.29 ರಿಂದ ಸೆ.2ರ ವರೆಗೆ ಪಾಸ್​ಪೋರ್ಟ್ ಸೇವಾ ಪೋರ್ಟಲ್ ಬಂದ್

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಮೋಡ್ ವೀಲ್‌ಚೇರ್ ವಿತರಣೆ

Suddi Udaya

ಕೊಕ್ರಾಡಿ: ಮನ್ಯೋಡಿಗುತ್ತು ನಿವಾಸಿ ರವಿ ಪೂಜಾರಿ ನಿಧನ

Suddi Udaya
error: Content is protected !!