34.2 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಎನ್. ಮೂಡಬಿದ್ರಿ ಪಾಲಿಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

ಮರೋಡಿ: ಎಸ್.ಎನ್. ಮೂಡಬಿದ್ರಿ ಪಾಲಿಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಮರೋಡಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲೆ ನೊರೋನ್ಹ ತರೀನಾ ರೀಟಾ ಅಧ್ಯಕ್ಷತೆ ವಹಿಸಿದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ,’ ಎನ್ಎಸ್ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ,ನಾಯಕತ್ವ ಗುಣ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಇಂತಹ ಯುವಶಕ್ತಿ ಸಮಾಜದ ಅಭಿವೃದ್ಧಿಗೆ ಬಳಕೆಯಾಗಲಿ’ ಎಂದರು.
ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಅಜಿಲ, ಎಸ್ .ಡಿ. ಸಂಪತ್ ಸಾಮ್ರಾಜ್ಯ, ಜಯಂತ್ ಕೋಟ್ಯಾನ್ , ಸತೀಶ್ ಕೆ. ಕಾಶಿ ಪಟ್ಟಣ , ಸಂಜಯ ಪ್ರಭು, ದೇವೇಂದ್ರ ಹೆಗ್ಡೆ, ಪದ್ಮರಾಜ್ ಶೆಟ್ಟಿ , ಚಂದ್ರಶೇಖರ್, ಪದ್ಮಪ್ರಸಾದ್ ಆರಿಗ, ಉದಯ ಬಲ್ಲಾಳ, ಜಯರಾಜ ಕಾಭಯ, ಸೂರಜ್ ಬಲ್ಲಾಳ್, ಶಿವನಿಂಗಪ್ಪ ಗಾಣಿಗೇರಾ ಹಾಗೂ ಕಾರ್ಯಕ್ರಮ ಅಧಿಕಾರಿಗಳಾದ ರಾಮಪ್ರಸಾದ್ ಎಂ ಗೋಪಾಲಕೃಷ್ಣ ಕೆ ಎಸ್ ಉಪಸ್ಥಿತರಿದ್ದರು.
ರತ್ನಾಕರ ಬುಣ್ಣನ್ ಅತಿಥಿಗಳನ್ನು ಸ್ವಾಗತಿಸಿದರು. ಶಿಬಿರಾರ್ಥಿ ಶ್ರೀ ಲಕ್ಷ್ಮಿ ವಂದಿಸಿದರು.

ಶಿಬಿರದ ಅವಧಿಯಲ್ಲಿ ವಿದ್ಯಾರ್ಥಿಗಳು ಶ್ರಮದಾನ, ಸ್ವಚ್ಛತಾ ಕಾರ್ಯ, ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ವಿವಿಧ ವ್ಯಕ್ತಿತ್ವ ವಿಕಸನ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಶಿಬಿರಾರ್ಥಿಗಳು ಸಮಾರೋಪ ಸಮಾರಂಭದಲ್ಲಿ ಶಿಬಿರದ ಅನುಭವಗಳನ್ನು ಹಂಚಿಕೊಳ್ಳಲಾಯಿತು. ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಗ್ರಾಮಸ್ಥರು ಹಾಗೂ ಗಣ್ಯರ ಸಹಕಾರದಿಂದ ಈ ಶಿಬಿರವು ಯಶಸ್ವಿಯಾಯಿತು.

Related posts

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya

ಅಗ್ರಿಲೀಫ್ ಗೆ ದಾಖಲೆಯ ರೂ. 20 ಕೋಟಿ ಹೂಡಿಕೆ : 2 ವರ್ಷಗಳಲ್ಲಿ ರೂ. 100 ಕೋಟಿ ವ್ಯವಹಾರದ ಗುರಿ: ಗ್ರಾಮೀಣ ಭಾಗದ ವಿದೇಶಿ ರಫ್ತು ಸಂಸ್ಥೆಯ ಅಪೂರ್ವ ಸಾಧನೆ

Suddi Udaya

ಮೂಡಿಗೆರೆ ಪಟ್ಟಣದಲ್ಲಿ ಮಾದಕ ವಸ್ತು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಬೆಳ್ತಂಗಡಿಯ ಇಬ್ಬರು ಯುವಕರ ಬಂಧನ

Suddi Udaya

ಪೆರಿಂಜೆ: ಕಾರು ಹಾಗೂ ರಿಕ್ಷಾ ನಡುವೆ ಭೀಕರ ರಸ್ತೆ ಅಪಘಾತ

Suddi Udaya

ನಾರಾವಿ ಪೇಟೆಯಲ್ಲಿ ಬಿಜೆಪಿ ಬಿರುಸಿನ ಮತಪ್ರಚಾರ

Suddi Udaya

ಶಿರ್ಲಾಲು: ಪೆರಾಲ್ಡಡಿ ತಡೆಗೋಡೆ ಕುಸಿತ

Suddi Udaya
error: Content is protected !!