34.2 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ಕೈಚಳಕದಲ್ಲಿ ಪರಿಸರ ಸ್ನೇಹಿ ಕಲಾಕೃತಿಗಳ ರಚನೆ

ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆ, ಉಜಿರೆಯ ಪರಿಸರ ಸಂಘದ ವಿದ್ಯಾರ್ಥಿಗಳು ಅಕ್ಟೋಬರ್ 2ರಂದು ಪರಿಸರದಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ವಿವಿಧ ಕಲಾಕೃತಿಗಳನ್ನು ರಚಿಸಿದರು.

ತೆಂಗಿನ ಗರಿ, ತೆಂಗಿನ ಗರಟೆ, ಪಿಸ್ತಾ ಚಿಪ್ಪು ಸೇರಿದಂತೆ ಪರಿಸರದಲ್ಲಿ ದೊರೆಯುವ ವಸ್ತುಗಳಿಂದ ಬೊಂಬೆಗಳು, ಚಿತ್ರಗಳು ಹಾಗೂ ವಿವಿಧ ಕಲಾಕೃತಿಗಳನ್ನು ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯಿಂದ ತಯಾರಿಸಿದರು.

ವಿದ್ಯಾರ್ಥಿಗಳ ಕಲಾಕೃತಿಗಳನ್ನು ವೀಕ್ಷಿಸಿದ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದವು ಮೆಚ್ಚುಗೆ ವ್ಯಕ್ತಪಡಿಸಿ, ಮಕ್ಕಳನ್ನು ಪ್ರೋತ್ಸಾಹಿಸಿದರು. ಪರಿಸರ ಸಂಘದ ಸಂಯೋಜಕರಾದ ಮೋನಪ್ಪ ಗೌಡ ಹಾಗೂ ಶ್ರೀಮತಿ ನಂದಿತಾ ಅವರು ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಿದರು.

Related posts

ಶಟ್ಲ್ ಬ್ಯಾಡ್ಮಿಂಟನ್ ಶಿವ ಮತ್ತು ಮುನೀರ್ ಮಾಲೀಕತ್ವದ ಎಸ್ಎಂ ಸ್ಮಶರ್ಸ್ ತಂಡ ವಿನ್ನರ್

Suddi Udaya

ಧರ್ಮಸ್ಥಳದಲ್ಲಿ 53ನೇ ವರ್ಷದ ಪುರಾಣ ಕಾವ್ಯ ವಾಚನ – ಪ್ರವಚನ ಉದ್ಘಾಟನೆ

Suddi Udaya

ಕೊಕ್ಕಡ: ಉಪ್ಪಾರಪಳಿಕೆಯಿಂದ ಗೋಳಿತೊಟ್ಟು ರಸ್ತೆಯ ಬದಿ ಮಣ್ಣು ಹಾಕಿ ದುರಸ್ತಿಗೊಳಿಸಿದ ಯುವಕರ ತಂಡ

Suddi Udaya

ಗೇರುಕಟ್ಟೆಯಲ್ಲಿ ಅಪೂರ್ವವಾಗಿ ನಡೆದ ಮಾತೃ ವಂದನಾ ಕಾರ್ಯಕ್ರಮ

Suddi Udaya

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ-ಸ್ನೇಹಕಿರಣ ಮಹಿಳಾ ಜಿಲ್ಲಾ ಒಕ್ಕೂಟದ ಸದಸ್ಯರಿಗೆ ಸಾಮರ್ಥ್ಯ ವರ್ಧನಾ ತರಬೇತಿ

Suddi Udaya

ಬೆಳ್ತಂಗಡಿ: ತಾಲೂಕು ಮಟ್ಟದ ಕ್ರೀಡಾಕೂಟದ ವಿಜೇತರಿಗೆ ಕ್ರೀಡಾ ಸಾಮಗ್ರಿ ವಿತರಣೆ

Suddi Udaya
error: Content is protected !!