
ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಪೂರ್ವಾಧ್ಯಕ್ಷರಾದ ಜೆಸಿ ರಂಜಿತ್ ಎಚ್.ಡಿ., ಬಳಂಜ ಅವರು ಜೆಸಿಐ ವಲಯ 15ರ 2027ನೇ ಸಾಲಿನ ವಲಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದು, ಮುಂಬೈನಲ್ಲಿರುವ ಜೆಸಿಐ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಚೇರಿಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ.
2015ರಲ್ಲಿ ಜೆಸಿ ಆಂದೋಲನಕ್ಕೆ ಸೇರ್ಪಡೆಗೊಂಡ ಅವರು, ಘಟಕದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 2024ರಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ವರ್ಷದುದ್ದಕ್ಕೂ ಹಲವಾರು ತರಬೇತಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜೆಸಿಐ ಭಾರತದ ರಾಷ್ಟ್ರಧ್ಯಕ್ಷರನ್ನು , ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದ ಬಳಂಜಾ ಶಾಲೆಗೆ ಬರಮಾಡಿಕೊಂಡು ಪರ್ಮನೆಂಟ್ ಪ್ರಾಜೆಕ್ಟ್ ಗಳನ್ನು ಹಸ್ತಾಂತರಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಘಟಕಕ್ಕೆ ಹಲವಾರು ಪ್ರಶಸ್ತಿ ಗಳನ್ನು ಪಡೆದು ಕೊಂಡು, ವಲಯ ಸಮ್ಮೇಳನದಲ್ಲಿ ಅರ್ಹವಾಗಿಯೇ 2024ನೇ ಸಾಲಿನ ವಲಯ 15ರ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
2025ರಲ್ಲಿ ವಲಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ತಮ್ಮ ವ್ಯಾಪ್ತಿಯಲ್ಲಿ ಜೆಸಿಐ ಉಜಿರೆ ಸಿಟಿ ಎಂಬ ಹೊಸ ಜೆಸಿಐ ಘಟಕವನ್ನು ಸ್ಥಾಪಿಸುವುದರ ಜೊತೆಗೆ ಬೆಳ್ತಂಗಡಿ ಯಲ್ಲಿ ಜೂನಿಯರ್ ಚೇಂಬರ್ ಆಫ್ ಕಾಮರ್ಸ್ (JCOm) ಟೇಬಲ್ ಸ್ಥಾಪನೆಗೂ ಕೊಡುಗೆ ನೀಡಿದ್ದಾರೆ.
ಪ್ರಸ್ತುತ ಜೆಸಿಐ ವಲಯ 15ರ ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ವಲಯ ನಿರ್ದೇಶಕರಾಗಿ (Zone Director – Growth & Development) ಕಾರ್ಯನಿರ್ವಹಿಸುತ್ತಿರುವ ಅವರು, ಹಲವು ವರ್ಷಗಳ ಬಳಿಕ ವಲಯದಲ್ಲಿ ಸಕಾರಾತ್ಮಕ ಸದಸ್ಯತ್ವ ಬೆಳವಣಿಗೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಕಾರ್ಯವ್ಯಾಪ್ತಿಯಲ್ಲಿ ಏಳು ಹೊಸ ಜೆಸಿಐ ಘಟಕಗಳ ಸ್ಥಾಪನೆಯಲ್ಲಿ ಮುತುವರ್ಜಿ ವಹಿಸಿ ಸಂಘಟನೆಯ ವಿಸ್ತರಣೆ ಮತ್ತು ಸದಸ್ಯತ್ವ ಬಲವರ್ಧನೆಗೆ ಕೊಡುಗೆ ನೀಡಿದ್ದಾರೆ.
ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕವು ಮುಂದಿನ ವರ್ಷ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳಲಿದ್ದು, ಘಟಕದ ಇತಿಹಾಸದಲ್ಲಿ ಈವರೆಗೆ ವಲಯಾಧ್ಯಕ್ಷರು ಆಯ್ಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಘಟಕದ ಪ್ರತಿನಿಧಿಯಾಗಿ ವಲಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮೂಲಕ ಘಟಕಕ್ಕೆ ಹೊಸ ಅಧ್ಯಾಯವನ್ನು ಆರಂಭಿಸುವ ಆಶಯವನ್ನು ರಂಜಿತ್ ಎಚ್.ಡಿ. ಹೊಂದಿ












